ಜ್ಞಾನ ಬಂಧು ಪ್ರಾಥಮಿಕ ಶಾಲೆ-ಭಾಗ್ಯನಗರ ಧ್ವಜಾರೋಹಣ

  ಸಂಸ್ಥೆಯ ಅಧ್ಯಕ್ಷರಾದಂತಹ ದಾನಪ್ಪ ಜಿ. ಕೆ. ರವರು ೬೭ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.  ಕಾರ್ಯಕ್ರಮದಲ್ಲಿ ಎಲ್.ಕೆ.ಜಿ.ಯಿಂದ ೫ನೇ ತರಗತಿ ವರೆಗಿನ ಎಲ್ಲಾ ಮಕ್ಕಳು ಸ್ವಾತಂತ್ರ್ಯ ದಿನಾಚರಣೆಯ

ಕುರಿತು ಧೈರ್ಯವಾಗಿ ಮಾತನಾಡಿದರು.  ನಂತರ ಶಿಕ್ಷಕ/ಶಿಕ್ಷಕಿಯರು ಮಾತನಾಡಿದರು.  ನಂತರ ಅಧ್ಯಕ್ಷರಾದಂತಹ ದಾನಪ್ಪ ಜಿ. ಕೆ. ರವರು ಮಾತನಾಡಿ ಮಕ್ಕಳಲ್ಲಿ ವೇದಿಕೆಯ ಧೈರ್ಯ ಬರುವಂತೆ ಮಾಡುವುದು ಶಿಕ್ಷಕರ ಕರ್ತವ್ಯವಾಗಿದೆ.  ಎಂದರು.  ನಂತರ ಮಕ್ಕಳಲ್ಲಿರುವ ವೈಯಕ್ತಿಕ ಪ್ರತಿಭೆಯನ್ನು ಹೊರಗೆಳೆದು ಆ ಮಗುವನ್ನು ತಾಲೂಕು, ಜಿಲ್ಲಾ, ರಾಜ್ಯಮಟ್ಟದಲ್ಲಿ ಮಕ್ಕಳು ಭಾಷಣ ಮಾಡುವಂತೆ ಪ್ರೋತ್ಸಾಹಿಸುವಲ್ಲಿ ನಮ್ಮ ಸಂಸ್ಥೆಯು ಯಾವಾಗಲೂ ತಯಾರಿದೆ ಎಂದು ಹೇಳಿದರು.

Leave a Reply