fbpx

ಮಕ್ಕಳ ಸೃಜನಾತ್ಮಕ ಬೆಳವಣಿಗೆಗೆ ಪ್ರೋತ್ಸಾಹ ಅಗತ್ಯ -ಪಿ.ಎಸ್.ಮಂಜುನಾಥ

ಕೊಪ್ಪಳ :  ಮಕ್ಕಳು ರಾಷ್ಟ್ರದ ಸಂಪತ್ತು. ಮಕ್ಕಳ ಮೇಲೆ ಶಿಕ್ಷಕರು ಮತ್ತು ಪಾಲಕರು ಒತ್ತಡ ಹೇರಬಾರದು. ಅವರಲ್ಲಿಯ ಪ್ರತಿಭೆ ಅನಾವರಣಕ್ಕೆ ಅವಕಾಶ ಮಾಡಿಕೊಡಬೇಕು. ಮಕ್ಕಳ ಸೃಜನಾತ್ಮಕ ಬೆಳವಣಿಗೆಗೆ ಪ್ರೋತ್ಸಾಹ ಅಗತ್ಯ. ಅವರ ಪ್ರತಿಭೆ ಬೆಳಕಿಗೆ ಬರಲು ಪಾಲಕರು ಮತ್ತು ಶಿಕ್ಷಕರು ತರಲು ನಿರಂತರ ಪ್ರಯತ್ನಿಸಬೇಕು ಎಂದು ಸಹಾಯಕ ಆಯುಕ್ತರಾದ ಪಿ.ಎಸ್.ಮಂಜುನಾಥ ಹೇಳಿದರು. ಅವರು ಕಿನ್ನಾಳ ಗ್ರಾಮದ ಸೇವಾ ಸಂಸ್ಥೆಯ ಸೇವಾ ವಿದ್ಯಾಲಯದ ೧೧ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.  
         ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಹೋಲಿಸಿದಾಗ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ. ಗ್ರಾಮೀಣ ಭಾಗದಲ್ಲಿ ಪ್ರತಿಭಾವಂತರಿಗೆ ಕೊರತೆಯಿಲ್ಲ. ಅಗತ್ಯ ಅವಕಾಶ ಮತ್ತು ಪ್ರೋತ್ಸಾಹ ನೀಡಿದರೆ ಅಸಾಧ್ಯವಾದುದನ್ನು ಸಾಧಿಸುತ್ತಾರೆ ಎಂದರು.
 ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪಿ.ಎಸ್.ಮಂಜುನಾಥ ಮತ್ತು ಹಿರಿಯ ಪತ್ರಕರ್ತ ಸಾಧಿಕ್ ಅಲಿ ಹಾಗೂ ವಿರೇಶ ತಾವರಗೇರಿ ಯವರಿಗೆ ಸಂಸ್ಥೆಯ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ವಿಎಸ್‌ಎಸ್‌ಎನ್ ಅಧ್ಯಕ್ಷ ವಿರೇಶ ತಾವರಗೇರಿ, ಕೆಎಂಡಿಸಿ ಜಿಲ್ಲಾ ವ್ಯವಸ್ಥಾಪಕರಾದ ಜಾಕೀರ ಕುಕನೂರ ಉಪಸ್ಥಿತರಿದ್ದರು.  ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ರಾಜಾಬಕ್ಷಿ ಎಚ್.ವಿ.- ನಮ್ಮ ಸಂಸ್ಥೆಯು ಗ್ರಾಮೀಣ ಮಟ್ಟದ ಮಕ್ಕಳಿಗೆ ಅತ್ಯುತ್ತಮ ಗುಣಮಟ್ಟದ ಇಂಗ್ಲೀಷ್ ಮತ್ತು ಕನ್ನಡ ಶಿಕ್ಷಣವನ್ನು ನೀಡುವ ಉದ್ಧೇಶದಿಂದ ಕಿನ್ನಾಳ ಗ್ರಾಮದಲ್ಲಿ ಶಾಲೆಯನ್ನು ಆರಂಭಿಸಿತು. ಇಂದು ತನ್ನ ೧೧ನೇ ವಾರ್ಷಿಕೋತ್ಸವ ಆಚರಿಸುತ್ತಿದೆ. ಪ್ರತಿವರ್ಷ ಉತ್ತಮವಾದ ಸಾಧನೆ ತೋರುತ್ತಿದೆ. ಇದಕ್ಕೆ  ಪಾಲಕರ ಮತ್ತು ಗ್ರಾಮಸ್ಥರ ಸಹಾಯ,ಸಹಕಾರವೇ ಕಾರಣ ಎಂದರು. ಪ್ರಾರ್ಥನೆಯನ್ನು ಗಾಯತ್ರಿ ಮತ್ತು ಯಲ್ಲಮ್ಮ , ಸ್ವಾಗತವನ್ನು ರಫಿ ಹಿರೇಮನಿ ಮಾಡಿದರೆ  ನಿರೂಪಣೆಯನ್ನು ಪರಶುರಾಮ ಇಟಗಿ ಹಾಗೂ ವಂದನಾರ್ಪಣೆಯನ್ನು ಶ್ರೀಕಾಂತ ದೇಶಪಾಂಡೆ. ಕಾರ‍್ಯಕ್ರಮದ ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮಗಳು ಜರುಗಿದವು. ಕಾರ‍್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪಾಲಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. 
Please follow and like us:
error

Leave a Reply

error: Content is protected !!