ನಗರಸಭೆ ಹಂಗಾಮಿಅಧ್ಯಕ್ಷ ಪಟೇಲರಿಂದ ಕಾಮಗಾರಿ ವೀಕ್ಷಣೆ

ಕೊಪ್ಪಳ,ಜ,೨೯:ನಗರದ ೩ನೇ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ನಿರ್ಮಿತಿ ಕೇಂದ್ರದ ಬಡಾವಣೆಯಲ್ಲಿ ಸರ್ಕಾರದ ನಗರೋತ್ತಾನ ಯೋಜನೆ ಅಡಿಯಲ್ಲಿ ನಡೆಯತ್ತಿರುವ ಸಿಸಿ ರಸ್ತೆಕಾಮಗಾರಿ ಸ್ಥಳಕ್ಕೆ ನಗರಸಭೆ ಪ್ರಭಾರಿ ಅಧ್ಯಕ್ಷ ಅಮ್ಜದ್ ಪಟೇಲರವರು ಬುಧುವಾರ ಭೇಟಿಮಾಡಿ ವೀಕ್ಷಣೆ ಮಾಡಿದರು.
  ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು ಗುಣಮಟ್ಟದ ಕಾಮಗಾರಿ ಮಾಡುವುದರ ಜೊತೆಗೆ ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಜನತೆಗೆ ಸಮರ್ಪಿಸಬೇಕು ಎಂದ ಅವರು ಕಳಪೆ ಮಟ್ಟದ ಕಾಮಗಾರಿ ಕಂಡುಬಂದಲ್ಲಿ ಅಂತಹ ಗುತ್ತಿಗೆದಾರರಮೇಲೆ ಕ್ರಮ ಕೈಗೊಳ್ಳಲಾಗುವುದು ಸಂಭಂದಿಸಿದ ಅಧಿಕಾರಿಗಳು ಕಾಮಗಾರಿ ಬಗ್ಗೆ ಕಾಳಜಿ ವಹಿಸಬೇಕೆಂದು ಇದೇ ಸಂದರ್ಭದಲ್ಲಿ ನಗರಸಭೆಯ ಪ್ರಭಾರಿ ಅಧ್ಯಕ್ಷ ಸೂಚನೆ ನೀಡಿದರು.
 ಈ ಸಂದರ್ಭದಲ್ಲಿ ಅವರೊಂದಿಗೆ ಬಾಬಾ ಅರಗಂಜಿ, ಎಂ.ಡಿ.ಜಹೀರ್ ಅಲಿ ಸೇರಿದಂತೆ ಕಾರ್ಯಕರ್ತರು, ಅಭಿಮಾನಿಗಳು ಮತ್ತು ನಿರ್ಮಿತಿ ಕೇಂದ್ರದ ಪಂಚ ಕಮೀಟಿಯವರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Leave a Reply