ಭಾಗ್ಯನಗರದಲ್ಲಿ ಪಪ್ಪಾಯಿ ಗಿಡದಲ್ಲಿ ಬಾತು ಕೋಳಿ.

ಕೊಪ್ಪಳ-28-  ಕೊಪ್ಪಳದ ಭಾಗ್ಯನಗರದಲ್ಲಿ ಹೋಟೆಲ್
ಇಟ್ಟುಕೊಂಡಿರುವ ಕೊಟ್ರಪ್ಪ ಸ್ವಾಮಿ ಎಂಬುವರ ಮನೆಯ ಪಪಾಯಿ ಗಿಡದಲ್ಲಿ ಪಪಾಯಿ ಹಣ್ಣು
ವಿಚಿತ್ರ ರೂಪದಲ್ಲಿ ಮೂಡಿರುವುದನ್ನು ಕಂಡ ಮನೆಯವರು, ಕಿತ್ತು ನೋಡಿದಾಗ ಬಾತುಕೋಳಿ
ರೂಪದಲ್ಲಿ ಕಂಡುಬಂದಿದೆ. ಈ ವಿಶಿಷ್ಟವಾಗಿ ಬೆಳೆದಿರುವ ಪಪ್ಪಾಯಿಯನ್ನು ಹೋಟೆಲ್‍ನಲ್ಲಿ ಇರಿಸಿದ್ದು, ಬಾತುಕೋಳಿ ರೀತಿಯ ಪಪ್ಪಾಯಿ ನೋಡಿ ಜನ ಆಶ್ಚರ್ಯಗೊಂಡಿದ್ದಾರೆ.

Please follow and like us:
error