ಒಳಕ್ರೀಡಾಂಗಣದ ಭೂಮಿಪೂಜೆ

  ಅಪ್ಪಚ್ಚೂರಂಜನ್ರಿಂದ
ಕೊಪ್ಪಳ: ನಗರದ ಶ್ರೀಗವಿಸಿದ್ಧೇಶ್ವರ  ಪದವಿ ಮಹಾವಿದ್ಯಾಲಯದಲ್ಲಿ ಒಳಕ್ರೀಡಾಂಗಣ ನಿರ್ಮಾಣಕ್ಕಾಗಿ ಯು.ಜಿ.ಸಿ ಅನುದಾನದಿಂದ  ೪೦ ಲಕ್ಷ ರೂಪಾಯಿಹಣ  ಬಿಡುಗಡೆಯಾಗಿದೆ.   ಇದರ ಭೂಮಿಪೂಜೆಯ ಕಾರ್ಯಕ್ರಮವು ಇಂದು ಸಂಜೆ ಶ್ರೀಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಜರುಗಿತು. ಈ  ಭೂಮಿಪೂಜೆಯ ಕಾರ್ಯಕ್ರಮವನ್ನು ಶ್ರೀ ಗವಿಸಿದೇಶ್ವರ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ಮಾನ್ಯ ಕ್ರೀಡಾಸಚಿವರಾದ  ಅಪ್ಪಚ್ಚೂರಂಜನ್ ಭೂಮಿಪೂಜೆ ಮಾಡುವದರ ಮೂಲಕ  ನೆರವೇರಿಸಿದರು. ಶಾಸಕರಾದ ಸಂಗಣ್ಣಕರಡಿ, ಹಾಲಪ್ಪಾಚಾರ್, ಅಂದಾನಪ್ಪ ಅಗಡಿ, ಮುದಿಯಪ್ಪಕವಲೂರ, ಪ್ರಾಚಾರ್ಯರಾದ ಎಸ್.ಎಲ್.ಮಾಲಿಪಾಟೀಲ, ಬಸವರಾಜ ಬಳ್ಳೊಳ್ಳಿ, ಈಶಣ್ಣ ಬಳ್ಳೊಳ್ಳಿ, ವೀರಣ್ಣ ಹಂಚಿನಾಳ್, ಎಸ್.ಕೆ ಪಾಟೀಲ, ಎಸ್.ಮಲ್ಲಿಕಾರ್ಜುನ, ಪ್ರಭುಹೆಬ್ಬಾಳ, ಬಸವರಾಜಪುರದ, ಗವಿಸಿದ್ದಪ್ಪ ಮುಂಡರಗಿ, ಎಚ್.ಎಲ್ ಶಂಕರಗೌಡರು, ನಾಗರಾಜಬಳ್ಳಾರಿ ಮೊದಲಾz ಪ್ರಮುಖರು ಹಾಗೂ ಮಹಾವಿದ್ಯಾಲಯದ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂಧಿಗಳು ಉಪಸ್ಥತರಿದ್ದರು.
Please follow and like us:
error