fbpx

ನಿಸ್ವಾರ್ಥ ಸೇವೆ ಗುರುತಿಸಿ ವಿಶಿಷ್ಟ ರೀತಿಯಲ್ಲಿ ಸನ್ಮಾನಿಸಿರುವುದು ಶ್ಲಾಘನೀಯ : ಕೆ.ಎಂ.ಸಯ್ಯದ್.

ಇಂದು ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಪತ್ರಕರ್ತರ ಸಂಖ್ಯೆ ವಿರಳವಾಗುತ್ತಿದೆ.  ಆದಾಗ್ಯೂ ಕೂಡಾ ಕೆಲವರು ನಿಷ್ಠೆಯಿಂದ ಪತ್ರಿಕೋಧ್ಯಮ ನಡೆಸುತ್ತಾ ಬಂದಿದ್ದಾರೆ ಪತ್ರಿಕೆ ಮತ್ತು ಪತ್ರಕರ್ತ ಜನರ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಲಸಮಾಡಬೇಕು ಸಮಾಜಕ್ಕೆ  ನಿಸ್ವಾರ್ಥ ಸೇವೆ ಮಾಡುವವರ ಅವಶ್ಯಕತೆ ಇದೆ ಎಂದು ಕಾಂಗೆಸ್ ನ ಮುಖಂಡ ಹಾಗೂ ಸಯ್ಯದ್ ಫೌಂಡೇಶನ್ ನ ಮುಖ್ಯಸ್ಥ ಕೆ.ಎಂ.ಸಯ್ಯದ್ ಹೇಳಿದರು.

    ಅವರ ನಗರದ ಸಾಹಿತ್ಯಭವನದ ಪುಸ್ತಕ ಪ್ರಾಧಿಕಾರದ ಕಚೇರಿಯಲ್ಲಿ ಡೊಳ್ಳಿನ ಸಂಘದ ಜಿಲ್ಲಾಧ್ಯಕ್ಷ ಹಾಗೂ ಕಾಂಗ್ರಸ್ ಪಕ್ಷದ ಮುಖಂಡ  ಗುಡದಪ್ಪ ಹಲಗೇರಿಯವರು ಏರ್ಪಡಿಸಿದ್ದ ಕಾರ್ಯನಿರತ ಪರ್ತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಂ.ಸಾದಿಕ್‌ಅಲಿ ಅವರ ಸನ್ಮಾನ ಸಮಾರಂಭದ ಉದ್ಘಾಟನೆ ನೆರವೇರಿಸಿ  ಮಾತನಾಡುತ್ತಿದ್ದರು.  ಕಚೇರಿಗೆ ಒಂದು ಸುದ್ದಿಯನ್ನು ತೆಗೆದುಕೊಂಡು ಹೋದರೆ ಅವರು ಮೊದಲು ನೋಡುವುದು ಇದು ಯಾರ ಸುದ್ದಿ ಅಂತ ಅಲ್ಲ ಇದು ಯಾವ ಸುದ್ದಿಅಂತ. ಯಾವುದೇ ರಾಜಕೀಯ ಪಕ್ಷದ ಸುದ್ದಿ ಇರಲಿ, ಶ್ರೀ ಸಾಮಾನ್ಯನ ಸುದ್ದಿಯೇ ಇರಲಿ ಎಲ್ಲವನ್ನು ಒಂದೇ ತಕ್ಕಡಿಯಲ್ಲಿಟ್ಟಿ ತೂಗುವ ಗುಣ  ಸಾದಿಕ್ ಅಲಿ ಅವರದು.  ವೈಚಾರಿತೆಯ ನೆಲೆಗಟ್ಟಿನ್ನು ಮೈಗೂಡಿಸಿಕೊಂಡು ವಸ್ತುನಿಷ್ಠ ವರದಿ, ಪಗತಿಪರ ಚಿಂತನೆಗಳನ್ನು ಮಾಡುತ್ತಾ ಸಾಧ್ಯವಾದಷ್ಟು ಒಳ್ಳೆದನ್ನು ಮಾಡು, ಆಗದಿದ್ದರೆ ಸುಮ್ಮನಿರು ಕೆಟ್ಟದನ್ನು ಮಾತ್ರ ಮಾಡಬೇಡ ಎನ್ನುವ ಧೀಮಂತ ಪತ್ರಕರ್ತ ಎಂದರು.  ಪತ್ರಕರ್ತರನ್ನು, ಕಲಾವಿದರನ್ನು ಅನೇಕ ಪ್ರತಿಭೆಗಳನ್ನು ನಾಡಿಗೆ ಪರಿಚಯಿಸಿದ್ದಾರೆ. ಹಲಗೇರಿ ಯಂಥಹ ಗ್ರಾಮೀಣ ಭಾಗದಿಂದ ಬಂದ ನಮ್ಮ ಗುಡದಪ್ಪ ಹಲಗೇರಿ ಅವರ ಸಮಾಜಿಕ ಕಳಕಳಿಯನ್ನು ಗುರುತಿಸಿ ಬೆಳೆಸಿರುವುದು ಅವರು ಇಂದು  ರಾಜಕೀಯವಾಗಿ ಗುರುತಿಸಿಕೊಂಡಿರುವುದು ಒಂದು ಉತ್ತಮ ಬೆಳವಣಿಗೆ ಅವರು ಸಾದಕ್‌ಅಲಿ ಅವರಿಗೆ ಹಾಲು ಮತದ ವಿಶಿಷ್ಠ ಸಂಪ್ರದಾಯದಂತೆ  ಕಂಬಳಿ ಹಾಗೂ  ರುಮಾಲನ್ನು ಇತ್ತು  ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು.
   ಪ್ರಾಸ್ತಾವಿಕವಾಗಿ ಗುಡದಪ್ಪ ಹಲಗೇರಿ ಮಾತನಾಡಿ  ಸಾದಿಕ್‌ಅಲಿ ಅವರು ನನ್ನನ್ನು ಗುರುತಿಸಿ ಬೆಳೆಸಿರು. ನಾನು ಒಂದು ಮಟ್ಟಕ್ಕೆ ಬೆಳೆಯಲು ಅವರೆ ಕಾರಣ ಆದರೂ ನಾನು ಎನೂ ಮಾಡಿಲ್ಲ ಅನ್ನುವುದು ಅವರ ದೊಡ್ಡಗುಣ.  ಕೇವಲ ನನ್ನಂಥ ಅನೇಕರನ್ನು ಅವರು ಮಾರ್ಗದರ್ಶಕರಾಗಿದ್ದಾರೆ ಅವರ ಈ ನಿಸ್ವಾರ್ಥ ಸೇವೆಯನ್ನು ಮೆಚ್ಚಿ. ಪ್ರಾಮಾಣಿಕ ವೃತ್ತಿಪರತೆಯನ್ನು ಮೆಚ್ಚಿ ಸನ್ಮಾನಿಸಲು ತಿರ್ಮಾನಿಸಿದೆ ಎಂದರು.
 ಸಮಾರಂಭದ ಅಧ್ಯಕ್ಷತೆ ಯನ್ನು ಪತ್ರಕರ್ತರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಜಿ.ಎಸ್.ಗೋನಾಳ ವಹಿಸಿದ್ದರು. ವೇದಿಕೆಯ ಮೇಲೆ ರಾಜ್ಯ ಸದಸ್ಯ ಹರೀಶ್ ಹೆಚ್.ಎಸ್.  ನಾಗರಿಕರ ವೇದಿಕೆಯ ಅಧ್ಯಕ್ಷ ಮಹೇಶ್‌ಬಾಬು ಸುರ್ವೆ ಉಪಸ್ಥಿತರಿದ್ದು ವೀರ ಕನ್ನಡಿಗ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರ ಸ್ವಾಗತಿಸಿದರು,  ಕೋಟೆಯ ಕರ್ನಾಟಕ ಪತ್ರಿಕಯ ಸ್ಥಾನಿಕ ಸಂಪಾದಕ ವೈ.ಬಿ.ಜೂಡಿ ಕಾರ್ಯಕ್ರಮ ನಿರೂಪಿಸಿದರೆ ಬದರಿ ಪುರೋಹಿತ ಕೊನೆಯಲ್ಲಿ ವಂದಿಸಿದರು. ಕಾರ್ಯಕ್ರಮದಲ್ಲಿ ಯುವ ಸಾಹಿತಿ ಮಹೆಬೂಬ ಮುಲ್ಲಾ ಹನಮಸಾಗರ, ಜೆಡಿಎಸ್ ನಗರ ಯು ಅಧ್ಯಕ್ಷ ಸಯ್ಯದ್ ಮೇಹಮೂದ್ ಹುಸೇನಿ, ಯಪನೂರಪ್ಪ ಭಜಂತ್ರಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು ಹಾರ‍್ಮೋನಿಯಂ ಸಾಥ್ ಪರಶುರಾಮ ಬಣ್ಣದ, ಶ್ರೀನಿವಾಸ ಜೋಶಿ ತಬಲಾ ಸಾಥ್ ನೀಡಿದರು. ಡೊಳ್ಳಿನ ಸಂಘದ ಪದಾಧಿಕಾರಿಗಳಾದ  ಗ್ಯಾನಪ್ಪ ಜೆಗ್ಗಲ್ ಸೇರಿದಂತೆ ಗಂವಾವತಿಯ ಪತ್ರಕರ್ತರಾದ ವೆಂಕಟೇಶ ಕುಲಕರ್ಣಿ ಮತ್ತು ವಿಶ್ವನಾಥ ಬೆಳಗಲಮಠ ಅನೇಕರು ಪಾಲ್ಗೊಂಡಿದ್ದರು. 
Please follow and like us:
error

Leave a Reply

error: Content is protected !!