ಹಜರತ್ ಮಹಮ್ಮದ ಪೈಗಂಬರ್ ಜಯಂತೋತ್ಸವ.

ಕೊಪ್ಪಳ-24- ಇಂದು ತಾಲೂಕಿನ ಹೊಸಕನಕಾಪೂರದಲ್ಲಿ ಹಜರತ್ ಮಹಮ್ಮದ ಪೈಗಂಬರ್ ಜಯಂತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಂದು ಬೆಳಗ್ಗೆ ಗ್ರಾಮದಲ್ಲಿ ಮಹಮ್ಮದ ಪೈಂಗಬರರ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು ನಂತರ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಗ್ರಾಮದ ಹಿರಿಯರಾದ ಸುಬ್ಬಣ್ಣ ಆಚಾರ ವಹಿಸಿದ್ದರು. ಗ್ರಾ. ಪಂ. ಸದಸ್ಯರಾದ ಮಾರುತೆಪ್ಪ ಹಲಗೇರಿ, ಯಂಕಪ್ಪ ಬನ್ನಿಗಿಡ, ನಾಗರಾಜ ಕುರಟ್ಟಿ, ಚನ್ನಬಸಪ್ಪ ಮೇಟಿ, ಹಜರತ್ ಮಹಮ್ಮದ ಪೈಗಂಬರ್ ಕಮೀಟಿ ಅಧ್ಯಕ್ಷ ನೂರಸಾಬ ಹೊಸಮನಿ, ಯಂಕಪ್ಪ ಹನಸಿ, ಮಡಿವಾಳಪ್ಪ, ದಾದೆಸಾಬ್ ಹೊಸಮನಿ, ಚುನ್ನುಸಾಬ ಹೊಸಮನಿ, ಎಸ್ಡಿಎಂಸಿ ಅಧ್ಯಕ್ಷ ಭಿಮಪ್ಪ ಹರಿಜನ, ಅಬ್ದುಲ್ ಸಾಬ್ ಮಾಲವಿ, ಮುಂತಾದವರು ಉಪಸ್ಥಿತರಿದ್ದರು.
Please follow and like us:
error