ಪವರ್ ಕಟ್; ಮಂಡಾಳ ಬಟ್ಟಿ ಕಾರ್ಮಿಕರಿಂದ ಪ್ರತಿಭಟನೆ

ಕೊಪ್ಪಳ : ಅನಿಮಿತವಾಗಿ ತೆಗೆಯುತ್ತಿರುವ ವಿದ್ಯುತ್ ನಿಂದಾಗಿ ಹತ್ತಾರು ಸಮಸ್ಯೆ ಎದರುರಿಸುತ್ತಿರುವ ಮಂಡಾಳ ಬಟ್ಟಿ ಕಾರ್ಮಿಕರು ಇಂದು ಪ್ರತಿಭಟನೆ ನಡೆಸಿದರು. ಜೆಸ್ಕಾಂ ಕಚೇರಿ ಎದುರು ಟೈರ್ ಸುಟ್ಟು , ಕಚೇರಿಗೆ ಬೀಗ ಜಡಿದು ತೀವ್ರತರದ ಪ್ರತಿಭಟನೆ ನಡೆಸಿದರು. ಮನವಿ ಪತ್ರ ಸ್ವೀಕರಿಸಲು ಯಾವುದೇ ಅಧಿಕಾರಿ ಬರದೆ ಇದ್ದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. ಕೆಲಸಮಯ ಉದ್ವಿಗ್ನದ ವಾತಾವರಣ ನಿರ್ಮಾನವಾಗಿತ್ತು. ನಂತರ ಜೆಸ್ಕಾಂ ಸಿಬ್ಬಂದಿ ಮನವಿ ಪತ್ರ ಸ್ವೀಕರಿಸಿದ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

Leave a Reply