ಎ. ಎಸ್. ಮಕಾನದಾರ ನೆಚ್ಚಿನ ಗುರುಗಳಿಗೆ ನುಡಿ ನಮನ

ದಿ. ೫ ರಂದು ಶಿಕ್ಷಕ ದಿನಾಚರಣೆ ನಿಮಿತ್ಯ
ನಮ್ಮ ಹಿರಿಯರು ಗುರುಗಳನ್ನು ಪೂಜ್ಯ ಭಾವನೆಗಳಿಂದ

ಕಂಡಿದ್ದಾರೆ. ಬ್ರಹ್ಮ ವಿಷ್ಣು, ಮಹೇಶ್ವರರಿಗೆ ಹೋಲಿಸಿದ್ದಾರೆ. ಗುರುವಿನ ಗುಲಾಮನಾಗುವ ತನಕ ದೊರೆಯದೆನ್ನ ಮುಕುತಿ ಎಂದು ಭಕ್ತಿಯಿಂದ ದಾಸರು ಕೂಡಾ ಹಾಡಿ ಹೊಗಳಿದ್ದಾರೆ ತಮ್ಮ ಗುರುವಿಗೆ ನೆನೆದಿದ್ದಾರೆ. ಗುರು-ಶಿಷ್ಯ ಪರಂಪರೆಯಲ್ಲಿ ಶಿಶುನಾಳ ಶರೀಫ-ಗುರು ಗೋವಿಂದ ಭಟ್ಟರು ಅಗ್ರಗಣ್ಯರು.

ಅಂದಿನ ಗುರುಕುಲ ಶಿಕ್ಷಣ ಪದ್ಧತಿ ಮಾಯವಾಗಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ  ಇ ಎಜುಕೇರ ಪದ್ಧತಿ ಪ್ರಾರಂಭವಾಗಿದೆ. ಅಂದು ಗುರು-ಹಿರಿಯರಿಗೆ ವಿಧೇಯಕರಾಗಿ ನಡೆದು ಕೊಳ್ಳುತ್ತಿದ್ದರು. ಪೂಜ್ಯ ಭಾವನೆಯಿಂದ ಕಾಣುತ್ತಿದ್ದರು. ಶಿಕ್ಷಣ ಪದ್ಧತಿಯಲ್ಲಿ ಕಾಲಾನುಕ್ರಮದಂತೆ ಅಮೂಲಾಘ್ರ ಬದಲಾವಣೆಗಳಾಗಿವೆಯಾದರೂ ಅಂದಿನ ನನ್ನ ಬಾಲ್ಯದಲ್ಲಿ ನನಗೆ ಮಾದರಿ ಎನ್ನಿಸಿದ ಗುರು ಸಮೂಹದಲ್ಲಿ ಓರ್ವರಾದ ಹನುಮಂತಪ್ಪ ಕೆ. ಡೋಣಿಯವರಿಗೆ ಅನುದಿನವು ನೆನೆಯಬೇಕಿದೆ. 
೪ ದಶಕಗಳ ಹಿಂದೆ ಆದರ್ಶ ಶಿಕ್ಷಕ ಹೆಚ್. ಕೆ. ಡೋಣಿಯವರು ಗಜೇಂದ್ರಗಡದ ಕನ್ನಡ ಗಂಡು ಮಕ್ಕಳ ಶಾಲೆ ನಂ. ೨ರಲ್ಲಿ ಮುಖ್ಯೋಪಾಧ್ಯಾಯರು. ಸಮಯ ಪ್ರಜ್ಞೆ, ಕರ್ತವ್ಯ ಪ್ರಜ್ಞೆ ಮೈಗೂಡಿಸಿಕೊಂಡ ಶುಭ್ರ ಶ್ವೇತ ಖಾದಿಧಾರಿ ಗಳಾಗಿದ್ದರು. ಅವರ ಅಂದಿನ ಪ್ರಮಾಣಿಕತೆ ಇಂದಿನ ಅಣ್ಣಾ ಹಜಾರೆಯವರಿಗೆ ಮೀರಿಸುವಂತಿತ್ತು. ಶ್ರಮಕೊಳು ಸಂಸ್ಕೃತಿಯ ಪ್ರತಿಪಾದಕರಾಗಿದ್ದರು.
 ಸೇವಾ ನಿವೃತ್ತಿಯ ನಂತರ ಸಾರ್ವಜನಿಕರ ಒತ್ತಾಸೆಯ ಮೇರೆಗೆ ಪುರಸಭೆ ಸದಸ್ಯರಾಗಿ ಚುನಾಯಿತರಾದರು ಸ್ಥಾಯಿಸಮಿತಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದರು. ತಮ್ಮ ಜೀವಿತಾವದಿಯಲ್ಲಿ ಒಂದು ಸಣ್ಣ ಮನೆ ಕಟ್ಟಿಕೊಳ್ಳುವ ಭಾಗ್ಯ ಆವರದಾಗಿರಲಿಲ್ಲ ಬಾಡಿಗೆ ಮನೆಯಲ್ಲಿಯೇ ಜೀವ ಸವಿಸಿದರು. ಸಿಬ್ಬಂದಿ ವರ್ಗದ ಅಚಾತುರ್ಯದಿಂದ ಬೆರಿಜನಲ್ಲಿ ರೂ. ೧.೨೫ ವ್ಯತ್ಯಾಸ ಬಂದ ಕಾರಣ ತಕ್ಷಣ ತಮ್ಮ ಹುದ್ದೆಗೆ ರಾಜೀನಾಮೆ ಬಿಸಾಕಿದ ನಿಷ್ಠುರವಾದಿ ಡೋಣಿ ಗುರುಗಳಾಗಿದ್ದರು.
ನನ್ನ ನೆಚ್ಚಿನ ಗುರು ಡೋಣಿಯವರು ನಿವೃತ್ತಿ ವೇತನ ಪಡೆದರೂ ತಮ್ಮ ಅಂತಿಮ ದಿನಗಳಲ್ಲಿ ಬ್ಯಾಂಕ್‌ನಲ್ಲಿ ಒಂದು ರೂಪಾಯಿ ಕೂಡಾ ಜಮೆ ಇಲ್ಲದಿರುವುದು ಅವರ ಪ್ರಾಮಾಣಿಕತನಕ್ಕೆ ಹಿಡಿದ ಕನ್ನಡಿ.
ಪ್ರಶಸ್ತಿ ಗೌರವ ಅಧಿಕಾರಕ್ಕಾಗಿ ಇನ್ನಿಲ್ಲದ ಲಾಭಿ ಮಾಡುವ ಸರ್ಕಾರದ ದುಡ್ಡನ್ನು ಕೊಳ್ಳೆ ಹೊಡೆಯುವುದೇ ದೊಡ್ಡ ಸಾಧನೆ ಎಂದು ಪೋಜು ಕೊಡುತ್ತಿರುವ ಸಮಾಜ ಸೇವಕರ ಸೋಗಿನಲ್ಲಿ ನುಂಗಣ್ಣಗಳೇ ತುಂಬಿರುವವರ ಮಧ್ಯದಲ್ಲಿ ಡೋಣಿ ಗುರುಗಳಂಥವರು ಸಿಗುವುದು ಅಪರೂಪ, ಇಂತಹ ಅದರ್ಶ ಗುರುಗಳಿಗೆ ಶಿಕ್ಷಣ ಚಿಂತಕರಿಗೆ ಅನುದಿನವೂ ಯಾಕೆ ನೆನೆಯಬಾರದು ? 
೯೯೧೬೪೮೦೨೯೧: 
makandargadag@gmail.com   makandar_as@Yahoo.com
Please follow and like us:
error