ಜ. ೦೧ ರಂದು ಬಸ್ ತಂಗುದಾಣ ಉದ್ಘಾಟನೆ

  ನೂತನ ವರ್ಷಾಚರಣೆ ಸಂದರ್ಭದಲ್ಲಿ ಕೊಪ್ಪಳ ನಗರದ ಮುಂಡರಗಿ ಭೀಮರಾಯ ವೃತ್ತದ ಬಳಿ (ತಹಸಿಲ್ದಾರರ ಕಚೇರಿ ವೃತ್ತ) ಹೊಸದಾಗಿ ನಿರ್ಮಿಸಲಾಗಿರುವ ಬಸ್ ತಂಗುದಾಣದ ಉದ್ಘಾಟನೆ ಜ. ೦೧ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ನೆರವೇರಲಿದೆ.
  ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಬಸ್ ತಂಗುದಾಣದ ಉದ್ಘಾಟನೆ ನೆರವೇರಿಸುವರು.  ಕೊಪ್ಪಳ ನಗರದ ಮುಂಡರಗಿ ಭೀಮರಾಯ ವೃತ್ತದ ಬಳಿ (ತಹಸಿಲ್ದಾರರ ಕಚೇರಿ ವೃತ್ತ) ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಡಿ ಸುಮಾರು ೦೫ ಲಕ್ಷ ರೂ. ವೆಚ್ಚದಲ್ಲಿ ನೂತನ ಬಸ್ ತಂಗುದಾಣ ನಿರ್ಮಿಸಲಾಗಿದೆ.  ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಸುರೇಶ್ ದೇಸಾಯಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ, ಈ.ಕ.ರ.ಸಾ.ಸಂಸ್ಥೆಯ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಪಿ.ವಿ. ಬಸವರಾವ್, ತಹಸಿಲ್ದಾರ್ ಪಿ.ಎಲ್. ಘೋಟೆ ಮುಂತಾದ ಗಣ್ಯರು ಭಾಗವಹಿಸುವರು.
Please follow and like us:
error