ಕೊಪ್ಪಳ ಉಪಚುನಾವಣೆ : ಒಟ್ಟು ೧೮೮೧೯೬ ಮತದಾರರು

ಕೊಪ್ಪಳ ಸೆ. ೦೫ (ಕ.ವಾ): ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ಒಟ್ಟು ೧೮೮೧೯೬ ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ.
  ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪುರುಷರು- ೯೫೪೬೭, ಮಹಿಳೆಯರು- ೯೨೭೨೯ ಸೇರಿದಂತೆ ಒಟ್ಟು ೧೮೮೧೯೬ ಮತದಾರರಿದ್ದು, ಉಪಚುನಾವಣೆ ಸಂದರ್ಭದಲ್ಲಿ ಮತದಾನ ಹಕ್ಕು ಚಲಾಯಿಸಬಹುದಾಗಿದೆ.  ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು ೨೧೦ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಮತಗಟ್ಟೆ ಅಧಿಕಾರಿಗಳೂ ಸೇರಿದಂತೆ ಒಟ್ಟು ೧೦೫೦ ಜನ ಸಿಬ್ಬಂದಿಗಳು ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಲಿದ್ದಾರೆ.  ಅಲ್ಲದೆ ಈ ಪೈಕಿ ಶೇ. ೧೦ ರಷ್ಟು ಅಂದರೆ ಒಟ್ಟು ೧೦೫ ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ಕಾಯ್ದಿರಿಸಿ, ಅಗತ್ಯ ಸಂದರ್ಭದಲ್ಲಿ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗುವುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ
Please follow and like us:
error