ಡಿ.೨೫ ರಂದು ಕೊಪ್ಪಳದಲ್ಲಿ ಶ್ರೀ ಮೌನೇಶ್ವರರ ೨೩ನೇ ವರ್ಷದ ಜಯಂತಿ ಆಚರಣೆ.

ಕೊಪ್ಪಳ-21- ಕೊಪ್ಪಳ ತಾಲೂಕ ವಿಶ್ವಕರ್ಮ ಸಮಾಜದಿಂದ ಪ್ರತಿವರ್ಷದಂತೆ ಈ ವರ್ಷವೂ ಸಹ ಇದೇ ಡಿ.೨೫ ರಂದು ಜಗದ್ಗುರು ಶ್ರೀ ಮೌನೇಶ್ವರರ ೨೩ನೇ ವರ್ಷದ ಜಯಂತಿ ಉತ್ಸವ ಮತ್ತು ಶ್ರೀ ಸಿರಸಪ್ಪಯ್ಯ ಸ್ವಾಮಿಗಳ ೩ನೇ ವರ್ಷದ ಜಯಂತಿ ಉತ್ಸವದ ಅಂಗವಾಗಿ ಸಾಮೂಹಿಕ ಮದುವೆ ಹಾಗೂ ಉಪನಯನ ಕಾರ್ಯಕ್ರಮಗಳು ಜರುಗಲಿವೆ.
ಜಯಂತಿ ಅಂಗವಾಗಿ ಅಂದು ಬೆಳಿಗ್ಗೆ ೧೦೮ ಕುಂಬ ಹಾಗೂ ಆನೆಯ ಮೇಲೆ ಅಂಬಾರಿಯೊಂದಿಗೆ ಶ್ರೀ ಮೌನೇಶ್ವರರ ಬೆಳ್ಳಿಮೂರ್ತಿ ಹಾಗೂ ಶ್ರೀ ಸಿರಸಪ್ಪಯ್ಯ ಸ್ವಾಮಿಗಳ ಭಾವಚಿತ್ರದ ಹಾಗೂ ವಿಶ್ವಕರ್ಮ ಪ್ರಭುವಿನ ಪಂಚ ಕಸಬುಗಳ ಋಷಿ ಪುಂಗವರ ಸ್ಥಬ್ದ ಚಿತ್ರದ ಮೆರವಣಿಗೆ ಜರುಗಲಿದೆ.
ಸಮಾಜದ ವಿವಿಧ ಸ್ವಾಮಿಗಳಾದ ದಿವ್ಯ ಸಾನಿಧ್ಯವನ್ನು ಕೊಪ್ಪಳ ಶ್ರೀ ಸಿರಸಪ್ಪಯ್ಯನಮಠದ ಶ್ರೀ ಸಿರಸಪ್ಪಯ್ಯ ಸ್ವಾಮಿ, ಅಳ್ಳಳ್ಳಿ ಅಯ್ಯಪಯ್ಯಸ್ವಾಮಿ ಮಠದ ನಾಗೇಂದ್ರ ಸ್ವಾಮಿ, ಕೊಪ್ಪಳ ಶಾಖಾಮಠ ಲೆಕ್ಕಿಹಾಳದ ಸಿರಸಪ್ಪಯ್ಯ ಸ್ವಾಮಿ, ಹಿರೇಹಾಳಮಠದ ಶಿವಶಂಕರ ಸ್ವಾಮಿ, ಗಿಣಿಗೇರಿಯ ದೇವೀಂದ್ರ ಸ್ವಾಮಿ, ಮುದ್ದಾಬಳ್ಳಿಯ ಗುರುನಾಥ ಸ್ವಾಮಿ, ಶಾಡ್ಲಗೇರಿಯ ವಿರುಪಾಕ್ಷಯ್ಯ ಸ್ವಾಮಿ, ಲೇಬಗೇರಿಯ ನಾಗಮೂರ್ತಿ ಸ್ವಾಮಿ, ಸದ್ಯೋಜಾತ ಸ್ವಾಮಿ, ಗಿಣಿಗೇರಿಯ ಗುರುನಾಥ ಸ್ವಾಮಿ, ನರಸಿಂಹಸ್ವಾಮಿ ದಿವಾಕರ, ಲೇಬಗೇರಿಯ ವೀರಬ್ರಹ್ಮೇಂದ್ರ ಸ್ವಾಮಿ, ಕಾತರಕಿ-ಗುಡ್ಲಾನೂರಿನ ವಿರುಪಾಕ್ಷಯ್ಯ ಸ್ವಾಮಿ, ಹರ್ಲಾಪುರದ ಶ್ರೀ ಗುರು ಮೌನ ಚಿದಾನಂದಜ್ಜನವರ ಮಠದ ಮುತ್ತಪ್ಪಜ್ಜ ಸ್ವಾಮಿಗಳು ವಹಿಸುವರು.
ಶ್ರೀ ಅಮರಶಿಲ್ಪಿ ಜಕಣಾಚಾರ್ ವೇದಿಕೆಯಲ್ಲಿ ಅಂದು ಮಧ್ಯಾಹ್ನ ೧ ಗಂಟೆಗೆ ಧಾರ್ಮಿಕ ಕಾರ್ಯಕ್ರಮ ಜರುಗಲಿದ್ದು, ಅಧ್ಯಕ್ಷತೆಯನ್ನು ಸಂಸದ ಸಂಗಣ್ಣ ಕರಡಿ ವಹಿಸುವರು. ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್.ತಂಗಡಗಿ ಹಾಗೂ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ನೆರವೇರಿಸುವರು. ಉಪನ್ಯಾಸಕರಾಗಿ ಬದಾಮಿಯ ನಿವೃತ್ತ ಉಪನ್ಯಾಸಕ ಡಾ|| ಶಿಲಾಕಾಂತ ಪತ್ತಾರ ಆಗಮಿಸುವರು.
ಬೆಳ್ಳಿಮೂರ್ತಿ ಮೆರವಣಿಗೆ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳದ ರಾಜ್ಯಾಧ್ಯಕ್ಷ ಎಲ್.ನಾಗರಾಜ ಆಚಾರ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ದೊಡ್ಡನಗೌಡ ಪಾಟೀಲ್, ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ಜಿ.ಪಂ.ಅಧ್ಯಕ್ಷ ಅಮರೇಶ ಕುಳಗಿ, ಕೆಎಂಎಫ್ ಅಧ್ಯಕ್ಷ ವೆಂಕನಗೌಡ್ರ ಎಲ್.ಹಿರೇಗೌಡ್ರ, ನಗರಸಭೆ ಅಧ್ಯಕ್ಷೆ ಶ್ರೀಮತಿ ಬಸಮ್ಮ ರಾಮಣ್ಣ ಹಳ್ಳಿಗುಡಿ, ಉಪಾಧ್ಯಕ್ಷ ಬಾಳಪ್ಪ ಬಾರಕೇರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಪಾನಗಂಟಿ, ಹಿರಿಯ ನ್ಯಾಯವಾದಿ ಐ.ವಿ.ಪತ್ತಾರ, ಜಿಲ್ಲಾ ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ನಾಗಲಿಂಗಪ್ಪ ಪತ್ತಾರ, ಜಿಲ್ಲಾಧ್ಯಕ್ಷ ಅಶೋಕ ವೇದಪಾಠಕ ಅವರು ಆಗಮಿಸುವರು ಎಂದು ತಾಲೂಕ ವಿಶ್ವಕರ್ಮ ಸಮಾಜದ ಅಧ್ಯಕ್ಷ ಶೇಖರಪ್ಪ ಬಡಿಗೇರ, ಗೌರವಾಧ್ಯಕ್ಷ ರುದ್ರಪ್ಪ ಬಡಿಗೇರ, ವಿಶ್ವಕರ್ಮ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಎ.ಪ್ರಕಾಶ ಅವರು ಪ್ರಕಟಣೆಯ ಮೂಲಕ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ.
Please follow and like us:
error