ಜಿಂದಾಲ್ ಕಾರ್ಮಿಕರ ಮೇಲಿನ ಹಲ್ಲೆ.

ಕೊಪ್ಪಳ-22- ಸಮೀಪದ ಜಿಂದಾಲ್ ಕಾರ್ಖಾನೆಯ ಮಾಲೀಕರ ಪರ ಗೂಂಡಾಗಳು ಕಾರ್ಮಿಕರಾದ ಪ್ರೇಮಕುಮಾರ ಮತ್ತು ಆಚಾರಿ ಅವರನ್ನು ಅಪಹರಿಸಿ ಮಾರಾಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಬಹದ್ದೂರ ಬಂಡಿ ಕಟ್ಟಡ ಕಾರ್ಮಿಕರ ಉಪಾಧ್ಯಕ್ಷರಾದ ಬಾಬಾ ಕಿಲ್ಲೆದಾರ ತಿಳಿಸಿದ್ದಾರೆ. ಜಿಂದಾಲ್ ಕಾರ್ಖಾನೆಯ ಮಾಲೀಕರು ಕಾರ್ಮಿಕ ಸಂಘಟನೆಯ ಅಸ್ತಿತ್ವಕ್ಕೆ ತರದಂತೆ ಬೆದರಿಸುತ್ತಿರುವುದು ಕಾರ್ಮಿಕ ಕಾಯ್ದೆ ಉಲ್ಲಂಘನೆಯಾಗಿದೆ ಕಾರ್ಮಿಕ ಸಂಘಟನೆ ಪ್ರಾರಂಭ ಮಾಡಲು ಹೋದಾಗ ಕಾರ್ಖಾನೆ ಮಾಲೀಕರು ಅಮಾನುಷವಾಗಿ ನಡೆದುಕೊಂಡಿದ್ದು ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ. ಕಾರ್ಮಿಕ ಕಾಯ್ದೆಗಳಲ್ಲಿ ೭ ಜನರಿಗಿಂತಲೂ ಹೆಚ್ಚು ಕಾರ್ಮಿಕರು ಸೇರಿ ಸಂಘಟನೆ ಪ್ರಾರಂಭ ಮಾಡುವ ಅಧಿಕಾರವಿದೆ. ಎಲ್ಲವನ್ನು ಗಾಳಿಗೆ ತೂರಿ ಕಾರ್ಖಾನೆಯ ಮಾಲೀಕರು ಗುಂಡಾಗಿರಿ ಪ್ರದರ್ಶಿಸಿದ್ದಾರೆ ಕಾರ್ಮಿಕ ಪರವಾಗಿ ನಿಂತು  ಹೋರಾಟ ಮಾಡಲು ಬಹದ್ದೂರ ಬಂಡಿ ಕಟ್ಟಡ ಕಾರ್ಮಿಕ ಸಂಘವು ಸಿದ್ದವಾಗಿದೆ ಎಂದು ಬಾಬಾ ಕಿಲ್ಲೆದಾರ ತಿಳಿಸಿದ್ದಾರೆ.

Leave a Reply