ಅಭಿವ್ಯಕ್ತಿತ್ವವೇ ಶಿಕ್ಷಣ ಎನ್ನುವುದು ಡಿವಿಜಿಯವರ ಆಶಯವಾಗಿತ್ತು – ಭರತ್ ಸಿಂಗ್ ಖೇಧ.

ಹೊಸಪೇಟೆ- ಅರಿವು ಮತ್ತು ಅಭಿವ್ಯಕ್ತಿತ್ವವೇ ಶಿಕ್ಷಣ ಎನ್ನುವುದು ಡಿವಿಜಿಯವರ ಆಶಯವಾಗಿತ್ತು, ಪ್ರಸ್ತುತ ಶಿಕ್ಷಣದಲ್ಲಿ ಅರಿವು -ಅಭಿವ್ಯಕ್ತಿತ್ವಕ್ಕೆ ನೆಲೆ ಇಲ್ಲದಾಗಿ ಕೇವಲ ಮಾರ್ಕ್ಸ್ ಗಳಿಸುವ ಉದ್ದೇಶವೊಂದೆ ಉಳಿದಿದೆ ಎಂದು ದಾವಣಗೆರೆಯ ಗೀವ್ ಸಂಸ್ಥೆಯ ಅಧ್ಯಕ್ಷ ಭರತ್ ಸಿಂಗ್ ಖೇಧ ವ್ಯಕ್ತಪಡಿಸಿದರು.
    ಅವರು ನಗರದಲ್ಲಿಂದು ಇನ್ನರ್‌ವೀಲ್ ಸಂಸ್ಥೆಯು ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಪಾಲನೆಯ ಕಲೆ’ ಬಗ್ಗೆ ಮಾತನಾಡುತ್ತಾ ಇಂದಿನ ಶಿಕ್ಷಣ ಪದ್ಧತಿಯಲ್ಲಿ ಅರಿವು-ಅಭಿವ್ಯಕ್ತಿತ್ವಕ್ಕೆ ಜಾಗವಿಲ್ಲದಾಗಿ ಕೇವಲ ಪ್ರಶ್ನೆ-ಉತ್ತರಕ್ಕಷ್ಟೇ ಸೀಮಿತವಾಗಿದೆ, ಅರಿವಿಲ್ಲ ಶಿಕ್ಷಣಕ್ಕೆ ಬೆಲೆಯಿಲ್ಲ, ಇಂದು ಮಕ್ಕಳು ಕೇವಲ ಅಂಕ ಗಳಿಸುವ ಯಂತ್ರಗಳಾಗಿವೆ, ಟಿ.ವಿ. ಮೊಬೈಲ್ ಮತ್ತು ಕಂಪ್ಯೂಟರ್‌ಗಳಿಂದ ಆಲೋಚನಾ ಮತ್ತು ಚಿಂತನಾ ಶಕ್ತಿಯನ್ನು ಕಳೆದುಕೊಂಡು ಅತಿ ಚಿಕ್ಕ ವಯಸ್ಸಿನಲ್ಲ್ಲಿಯೇ ಆತ್ಮಹತ್ಯೆ ಸಂಸ್ಕೃತಿಗೆ  ಶರಣಾಗುತ್ತಿದ್ದು ಇದು ಸಮಾಜಕ್ಕೆ ಮಾರಕವಾಗುತ್ತಿದೆ. ಶಿಕ್ಷಣದಿಂದ ಪರಿಪೂರ್ಣ ಜ್ಞಾನ ಮತ್ತು ಅನುಭೂತಿ ಇಲ್ಲದೆ ಶಾಲೆಯೆಂಬುದು ಭೂತವಾಗಿ ಕಾಡಲಾರಂಭಿಸಿದೆ.
    ಈ ನಿಟ್ಟಿನಲ್ಲಿ ಪಾಲಕರು ಮಕ್ಕಳಿಗೆ ಪರಿಪೂರ್ಣ  ಸ್ವಾತಂತ್ರ್ಯ ನೀಡಿ ಭೌತಿಕ ಬೆಳವಣಿಗೆಗೆ ಸಹಕರಿಸಿ,   ಯಾವುದೇ ಒತ್ತಡವಿಲ್ಲದೇ  ಸಾಧಿಸಲು ಅನುವು ಮಾಡಿ, ಜಗತ್ತಿನಲ್ಲಿ ಶೇಕಡ ೯೫ರಷ್ಟು ಸಾಧಕರು ಶೈಕ್ಷಣಿಕವಾಗಿ ಹಿಂದಿದ್ದಾರೆ. ಮಗುವಿನ ಮೆದುಳು ೧೮ ತಿಂಗಳಿಂದ ೩ ವರ್ಷದವರೆಗೆ ಸಂಪೂರ್ಣ ವಿಕಸನ ಹೊಂದುವುದರಿಂದ ಆ ಸಮಯದಲ್ಲಿ ಮಕ್ಕಳಲ್ಲಿ ಪ್ರೀತಿ, ಪ್ರೇಮ, ಭಾವನಾತ್ಮಕ ಸಂಬಂಧ, ಪರಿಸರದ ಜ್ಞಾನ, ಮಾನವೀಯತೆಯನ್ನು ಆಳವಾಗಿ ಬಿತ್ತಿ ಸಂಬಂಧಗಳನ್ನು ಗಟ್ಟಿಗೊಳಿಸಿ ,ಯಾವುದೇ ಪ್ರತಿಕ್ರಿಯೆಯನ್ನು ಕಡೆಗಣಿಸಿದರಿ, ಶೇಕಡ ೮೫ರಷ್ಟು ಶಿಕ್ಷಣವು ಮ
    ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಸೈಯದ್ ಮಹ್ಮದ್, ಕಾರ್ಯದರ್ಶಿ ಡಾ| ಮುನಿವಾಸುದೇವ ರೆಡ್ಡಿ, ಶಿಕ್ಷಣ ಅಭಿಯಾನದ ಅಧ್ಯಕ್ಷ ಹೆಚ್.ಶ್ರೀನಿವಾಸ ರಾವ್, ಗೀವ್ ಸಂಸ್ಥೆಯ ಸತ್ಯವತಿ, ಸಂತೋಷ್, ಸಂತೋಷ್ ಅಂಗಡಿ, ಇನ್ನರ್ ವೀಲ್ ಅಧ್ಯಕ್ಷೆ ನಂದಿನಿ ಚಿಕ್ಕಮಠ್,  ಕಾರ್ಯದರ್ಶಿ ರೇಖಾ ಪ್ರಕಾಶ್, ಡಾ|ಮಾಧವಿ ರೆಡ್ಡಿ,  ವೀಣಾ ಕೊತ್ತಂಬರಿ, ಆಶ್ವಿನಿ ಶ್ರೀನಿವಾಸ್, ವಿಜಯಾ ಆಗ್ನಿಹೋತ್ರಿ, ರಾಜೇಶ್ವರಿ.ಎ, ವಿದ್ಯಾ ಸಿಂಧಗಿ, ನಗರದ ಹಲವಾರು ಸಂಘ ಸಂಸ್ಥೆಗಳ ಸದಸ್ಯರು, ಜೇಸಿಸ್ – ರೋಟರಿ ಶಾಲೆಯ ಶಿಕ್ಷಕರು ಹಾಗೂ ಪೋಷಕರು ಹಾಜರಿದ್ದರು. ಜಯಶ್ರೀ ರಾಜಗೋಪಾಲ ನಿರ್ವಹಿಸಿದರು.
ಚಿತ್ರದಲ್ಲಿ : ಪಾಲನೆಯ ಕಲೆಯ ಕಾರ್ಯಾಗಾರವನ್ನು ರೋಟರಿ ಅಧ್ಯಕ್ಷ ಸೈಯದ್ ಮಹ್ಮದ್, ಶಿಕ್ಷಣ ಅಭಿಯಾನದ ಅಧ್ಯಕ್ಷ ಹೆಚ್.ಶ್ರೀನಿವಾಸರಾವ್ ಉಧ್ಘಾಟಿಸಿದರು. ಈ ಸಂದರ್ಭದಲ್ಲಿ ಗೀವ್ ಸಂಸ್ಥೆಯ ಅಧ್ಯಕ್ಷ ಭರತ್ ಸಿಂಗ್, ಸತ್ಯವತಿ ಇನ್ನರ್‌ವೀಲ್ ಅಧ್ಯಕ್ಷೆ ನಂದಿನಿ ಚಿಕ್ಕ್‌ಮಠ್ ಮತ್ತು ಕಾರ್ಯದರ್ಶಿ ರೇಖಾ ಪ್ರಕಾಶ್ ಹಾಜರಿದ್ದರು.

ನೆಯಲ್ಲಿಯೇ ನಡೆಯುವುದರಿಂದ ಪೋಷಕರು ತಮ್ಮ ಕರ್ತವ್ಯವನ್ನು  ಸಮರ್ಥವಾಗಿ ನಿರ್ವಹಿಸಿ ಮಗುವಿನ ಮುಗ್ಧ ಮನಸ್ಸಿಗೆ ಘಾಸಿಯಾಗದಂತೆ ಸಕರಾತ್ಮಕ ಭಾವನೆಯನ್ನು ಬೆಳೆಸಿ ಎಂದು ಕರೆ ನೀಡಿದರು.

Please follow and like us:
error