ವಿಷಮುಕ್ತ ತರಕಾರಿ ಪಡೆಯಲು ಕೈತೋಟ ಮತ್ತು ತಾರಸಿ ತೋಟ ಸೂಕ್ತ- ಡಾ. ಪಿ.ಎಂ. ಸೊಬರದ.

ಕೊಪ್ಪಳ
ಜ. ೦೭ (ಕ ವಾ) ವಿಷಮುಕ್ತ ಮತ್ತು ರಾಸಾಯನಿಕ ಮುಕ್ತ ತಾಜಾ ತರಕಾರಿಯನ್ನು ಪಡೆಯಲು
ಕೈತೋಟ ಮತ್ತು ತಾರಸಿ ತೋಟ ಹೊಂದುವುದು ಸೂಕ್ತವಾಗಿದೆ.  ಈ ನಿಟ್ಟಿನಲ್ಲಿ ತೋಟಗಾರಿಕೆ
ಇಲಾಖೆ ಅಗತ್ಯ ಸಹಕಾರ ನೀಡಲು ಸಿದ್ಧವಿದೆ ಎಂದು ತೋಟಗಾರಿಕೆ ಅಪರ ನಿರ್ದೇಶಕ ಹಾಗೂ
ಕೊಪ್ಪಳ ಜಿಲ್ಲಾ ನೋಡಲ್ ಅದಿsಕಾರಿ ಡಾ||ಪಿ.ಎಂ. ಸೊಬರದ ರವರು ಹೇಳಿದರು.
    
ಕೈತೋಟ ಮತ್ತು ತಾರಸಿ ತೋಟ ಕುರಿತಂತೆ ತೋಟಗಾರಿಕೆ ಇಲಾಖೆಯು ಜಿಲ್ಲೆಯ ನಾಗರಿಕ
ಮಹಿಳೆಯರಿಗಾಗಿ ನಗರದ ಪಾರ್ಥ ಹೋಟೆಲ್ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಲಾದ ತರಬೇತಿ
ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
    ತರಕಾರಿ
ಖರ್ಚನ್ನು ಕಡಿತಗೊಳಿಸಲು ಹಾಗೂ ತಾಜಾ ತರಕಾರಿ ಮತ್ತು ಹಣ್ಣುಗಳ ಸೇವನೆಗೆ ಕೈತೋಟವೊಂದೇ
ಮಾರ್ಗೋಪಾಯವಾಗಿದೆ. ಮಾರುಕಟ್ಟೆಯಲ್ಲಿ ದೊರೆಯುವ ತರಕಾರಿಗಳು ಕಟಾವಿನ ೨-೩ ದಿನಗಳಿಂದ ೭
ದಿನಗಳ ನಂತರ ಮಾರುಕಟ್ಟೆಗೆ ಬರುತ್ತವೆ.  ಸೇಬು ಹಣ್ಣಿನಂತಹ ಹಣ್ಣುಗಳು ಗ್ರಾಹಕರಾದ ನಮ್ಮ
ಕೈ ತಲುಪಲು ೩ ರಿಂದ ೪ ವಾರಗಳಾಗಿರುತ್ತದೆ. ಇದರಿಂದಾಗಿ ತಾಜಾತನ ಉಳಿದಿರುವುದಿಲ್ಲ.
ಇನ್ನೊಂದು ಸಮಸ್ಯೆ ಎಂದರೆ, ತರಕಾರಿ ಹಾಗೂ ಹಣ್ಣಿನ ಬೆಳೆಗಳಿಗೆ ನಾನಾ ವಿಧದ
ರಾಸಾಯನಿಕಗಳನ್ನು ಸಿಂಪರಿಸಿರುವುದರಿಂದ ಅನೇಕ ರೋಗಗಳಿಗೆ  ಕಾರಣವಾಗುತ್ತದೆ. ಇದಕ್ಕೆಲ್ಲ
ಪರಿಹಾರವೆಂದರೆ ನಮ್ಮದೇ ಆದ ಸ್ವಂತ  ಕೈತೋಟ ಹೊಂದುವುದು ಸೂಕ್ತ.  ಇದಕ್ಕೆ ಮನೆ ಹಿಂದೆ
ಸ್ಥಳಾವಕಾಶ ಇದ್ದರೆ ಒಳ್ಳೆಯದು, ಇಲ್ಲದಿದ್ದ ಪಕ್ಷದಲ್ಲಿ ತಾರಸಿ ಮೇಲೆ ತೋಟ ಮಾಡಿ
ಪರಿಹಾರ ಕಂಡುಕೊಳ್ಳಬಹುದಾಗಿದೆ.  ಕೈ ತೋಟ- ತಾರಸಿ ತೋಟಗಳನ್ನು ಮಾಡುವಾಗ ಅನೇಕ ಮಾದರಿ
ಹಾಗೂ ವಿನ್ಯಾಸಗಳಿದ್ದು, ನಿಮ್ಮ ಅಬಿsರುಚಿಯನ್ನು ವ್ಯಕ್ತಪಡಿಸಿದಂತಾಗುವುದಲ್ಲದೇ
ದೇಹಕ್ಕೆ ವ್ಯಾಯಾಮ, ಮನಸ್ಸಿಗೆ ಉಲ್ಲಾಸದ ಜೊತೆಗೆ ಆದಾಯವನ್ನೂ ಪಡೆಯಬಹುದೆಂದು ಅನೇಕ
ಛಾಯಾಚಿತ್ರಗಳು ಮತ್ತು ಪ್ರಾತ್ಯಾಕ್ಷಿಕೆಗಳ ಮೂಲಕ ತಿಳಿಸಿಕೊಟ್ಟರು. ಋತುಮಾನಕ್ಕೆ
ತಕ್ಕಂತೆ ಯಾವ ತರಕಾರಿಗಳನ್ನು ಬೆಳೆಯಬಹುದು ಹಾಗೂ ತೋಟ ನಿರ್ಮಿಸಬೇಕಾದಾಗ ದಿಕ್ಕುಗಳನ್ನು
ಆಯ್ಕೆ ಮಾಡಿಕೊಂಡು ವಿನ್ಯಾಸಗೊಳಿಸುವುದು ಮತ್ತು ಅಲಂಕಾರಕ್ಕಾಗಿ ಬೋನ್ಸಾಯ್ ನಂತಹ
ತಾಂತ್ರಿಕತೆ ಅಳವಡಿಸಿಕೊಂಡು ಉತ್ತಮ ಚಟುವಟಿಕೆ, ವ್ಯಾಯಾಮದ ಮೂಲಕ ರೋಗ ಮುಕ್ತ
ಜೀವನವನ್ನು ನಡೆಸಬಹುದು.  ಮಹಿಳೆಯರು ಟಿವಿ ನೋಡುತ್ತ ಕಾಲ ಕಳೆಯುವುದನ್ನು ಬಿಟ್ಟು,
ಇಂತಹ ಸೃಜನಶೀಲ ಚಟುವಟಿಕೆಗಳತ್ತ ಗಮನ ಹರಿಸಬೇಕು.  ಸ್ವಲ್ಪ ಆಸಕ್ತಿ ಇದ್ದಲ್ಲಿ ತಾರಸಿ
ಮೇಲೆಯೇ ಲಾನ್, ಪುಷ್ಪ ತೋಟ, ಅಲಂಕಾರಿಕ ಗಿಡಗಳ ತೋಟ ಈ ರೀತಿ ಅನೇಕ ವಿನ್ಯಾಸಗಳನ್ನು
ನಿರ್ಮಿಸಬಹುದೆಂದು ಮಾದರಿಗಳ ಸಹಿತ ಡಾ. ಸೊಬರದ ಅವರು ವಿವರಣೆ ನೀಡಿದರು.
ತೋಟಗಾರಿಕೆ
ಉಪನಿರ್ದೇಶಕ ಶಶಿಕಾಂತ ಕೋಟಿಮನಿ ರವರು ಪ್ರಾಸ್ತಾವಿಕವಾಗಿ ಮಾತನಾಡಿ ವಿಷಮುಕ್ತ ಮತ್ತು
ರಾಸಾಯನಿಕ ಮುಕ್ತ ತಾಜಾ ತರಕಾರಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ನಾಗರಿಕರು ತಮ್ಮ
ಮನೆಯಲ್ಲೇ ತರಕಾರಿಗಳನ್ನು ಬೆಳೆದು ತಮಗಷ್ಟೇ ಅಲ್ಲದೇ ಅಕ್ಕ ಪಕ್ಕದವರಿಗೂ ನೀಡಿ ಅವರ
ಪ್ರೀತಿ ವಿಶ್ವಾಸ  ಗಳಿಸಬಹುದಾಗಿದೆ. ಸಮಗ್ರ ತೋಟಗಾರಿಕಾ ಅಬಿsವೃದ್ಧಿ ಯೋಜನೆ ಅಡಿ
ನಾಗರಿಕರಿಗಾಗಿ ಈ ಯೋಜನೆ ಹಮ್ಮಿಕೊಂಡಿದ್ದು, ಹೆಸರು ನೊಂದಾಯಿಸಿದ ಮಹಿಳೆಯರಿಗೆ ಉಚಿತ
ತರಕಾರಿ ಕಿಟ್‌ಗಳನ್ನು ನೀಡಲಾಗುವುದು ಎಂದರು.
ಕೃಷಿ ವಿಸ್ತರಣಾ ಶಿಕ್ಷಣ ಘಟಕದ ಕವಿತಾ
ಉಳ್ಳಿಕಾಶಿ ಅವರು ಮಾತನಾಡಿ, ಇತ್ತೀಚೆಗೆ ಅನೇಕ ಕಾರಣಗಳಿಂದಾಗಿ ಸ್ರೀಯರಲ್ಲಿ ಹಾಗೂ
ನಾಗರಿಕರಲ್ಲಿ ಅಪೌಷ್ಠಿಕತೆ ಹೆಚ್ಚುತ್ತಿದ್ದು ಅನೇಕ ಕಾಯಿಲೆಗಳಿಗೆ ಜಂಕ್ ಆಹಾರ
ಕಾರಣವಾಗಿದೆ. ಇದನ್ನು ಹೋಗಲಾಡಿಸಬೇಕಾದರೆ ಯಥೇಚ್ಚವಾಗಿ ತಾಜಾ ತರಕಾರಿ ಹಾಗೂ ಹಣ್ಣುಗಳ
ಸೇವನೆ ಅವಶ್ಯಕವಾಗಿದೆ. ಯಾವ ವಿಟಮಿನ್ (ಜೀವಸತ್ವ) ನ ಕೊರತೆಯಿಂದ ಯಾವ ರೋಗ ಬರುತ್ತದೆ
ಮತ್ತು ಅವುಗಳ ಕೊರತೆ ನೀಗಿಸಲು ಯಾವ ರೀತಿ ಸಮತೋಲನ ಆಹಾರ ಅಂದರೆ ಹಸಿರು ತರಕಾರಿ,
ಸೊಪ್ಪು, ಹಣ್ಣು ಹಾಗೂ `ಸಿ` ಅನ್ನಾಂಗ ಹೊಂದಿದ ಲಿಂಬೆ, ಟೋಮೊಟೋ ಸೇವನೆ ಮಾಡಬೇಕು
ಎಂದರು.
ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ಹೂವಿನ ಕುಂಡಗಳನ್ನು ಮತ್ತು ತರಕಾರಿ
ಬೀಜಗಳ ಕಿಟ್ ಗಳನ್ನು ವಿತರಿಸಲಾಯಿತು. ಹಾರ್ಟಿಕ್ಲಿನಿಕ್ ವಿಷಯ ತಜ್ಞ ವಾಮನಮೂರ್ತಿ
ಕಾರ್ಯಕ್ರಮ ನಿರೂಪಿಸಿದರು.  ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ನಜೀರ್‌ಅಹ್ಮದ್
ಸೋಂಪೂರ್ ಸ್ವಾಗತಿಸಿದರು.

Please follow and like us:
error