ವೈಶಿಷ್ಟ್ಯಪೂರ್ಣ ಕರ್ತೃ ಗದ್ದುಗೆಯ ಶಿಲಾಮಂಟಪಗಳು

 

ಸಂಸ್ಥಾನ ಶ್ರೀಗವಿಮಠದ  ಕರ್ತೃ ಗವಿಸಿದ್ಧೇಶ್ವರರ ಗದ್ದುಗೆಯ ಸುತ್ತಲೂ ಆಕರ್ಷಕವಾದ ಶಿಲಾಮಂಟಪ , ಶಿಲಾಸ್ತಂಭ, ಶಿಲ್ಪ ಸ್ತಂಭಗಳ ಮೇಲೆ ಬೃಹತ್ ಗುಂಡುಗಳು ಈ ಸಲ  ಜಾತ್ರೆಗೆ ಆಗಮಿಸುವ ಭಕ್ತರ ಆಕರ್ಷಣಾ ಬಿಂದುವಾಗಿ ಗಮನ ಸೆಳೆಯುತ್ತಿವೆ.  ಈ ಶಿಲಾಮಂಟಪಗಳು ವಿಜಯನಗರದ ರಾಜಧಾನಿ ಹಂಪೆಯಲ್ಲಿನ ಸಾವಿರ ಸಾವಿರ ವರ್ಷಗಳ ಚರಿತ್ರೆ ಹಾಗೂ  ಗತವೈಭವ ಸಾರುವಂತೆ, ಸಾವಿರಾರು ವರ್ಷಗಳ ಚರಿತ್ರೆಯನ್ನು ತನ್ನ ಒಡಲಲ್ಲಿ ಅಡಗಿಸಿಕೊಂಡಿರುವ  ಸಂಸ್ಥಾನ ಶ್ರೀ ಗವಿಮಠದಲ್ಲಿಯ  ಈ ಶಿಲಾಮಂಟಪಗಳು ಶ್ರೀಮಠದ ಸೊಬಗನ್ನು ಇಮ್ಮಡಿಗೊಳಿಸಿವೆ. ಸುಮಾರು ೨೫ ಕುಶಲ ಕರ್ಮಿಗಳು ಸತತ ಒಂದು ವರ್ಷದವರೆಗೆ ಶ್ರಮಿಸಿದ  ಪರಿಶ್ರಮದ  ಸಾರ್ಥಕ್ಯವೇ ಈ  ಸುಂದರ ಆಕರ್ಷಕ ಶಿಲಾಮಂಟಪವಾಗಿ ಅರಳಿದೆ.  ಕರ್ತೃ ಗದ್ದುಗೆಯ  ಸುತ್ತಲೂ ೬೦ ಕಂಬಗಳ ಮೇಲೆ  ನಿರ್ಮಾಣವಾದ ಮಂಟಪಗಳು, ಕಂಬಗಳ ಬೋಧುಗೆಯಲ್ಲಿಯೂ ಕಲಾವಿದ ತನ್ನ ಕಲೆಯ  ಕೈಚಳಕವನ್ನು ಪ್ರದರ್ಶಿದ್ದಾನೆ. ಅಂದರೆ ತೂಗುವ ಬಾಗುವ ಗೊನೆಗಳು, ಚಿತ್ತಾರದ ಚಿಕ್ಕ ಚಿಕ್ಕ ಜಾಲಂದ್ರಗಳು ಹೀಗೆ ಶಿಲೆಯಲ್ಲಿಯೇ ಕಲೆಯು ಒಡಮೂಡಿದೆ. ಇದಲ್ಲದೆ ಕರ್ತೃ ಗದ್ದುಗೆಯ ಸುತ್ತಲಿನ ಅಂಗಳದಲ್ಲಿಯೂ ೧೧೦*೧೨೦ ಉದ್ದಳತೆಯ ನಯವಾದ ೫೦೦ ಆಕರ್ಷಕ ಬಂಡೆಗಳು ಮತ್ತು ನೆಲಹಾಸುಗಳು  ಸುಂದರವಾಗಿ ಜೋಡಿಸಲ್ಪಟ್ಟಿವೆ.ಪ್ರಧಾನ ಶಿಲ್ಪಿ ಮರಿಯಪ್ಪ ಅಂಬಿಗೇರ , ಮಹೇಶ ಅಂಬಿಗೇರ ದ್ಯಾವಲಾಪುರ ಹಾಗೂ ಇತರೇ ಶಿಲ್ಪಿಗಳ ಸಹಕಾರದಿಂದ ಸುಂದರ ಸೊಬಗಿನ ಶಿಲಾಮಂಟಪ  ನಿರ್ಮಾಣಗೊಂಡಿರುತ್ತದೆ.  ಗದ್ದುಗೆಯ ಮೇಲೆ ಮಂಟಪ, ಮುಖ ಮಂಟಪ ,೩೨ ಗಡಗಗಳು, ತೂಗುವ ಕಾಯಿಗೊನೆಗಳು, ಚೌಕಟ್ಟು,ಹೂವು ಚಿಕ್ಕ ಚಿಕ್ಕ ಜಾಲಾಂzಗಳು ಹೀಗೆ ಹತ್ತು ಹಲವಾರು ಕಲೆಗಳು ಶಿಲೆಯಲ್ಲಿಯೇ ಮೈದಳೆದಿವೆ.  ಆಂದ್ರ ಮೂಲದ ಈ ಕಲಾವಿದರ ಕೈಚಳಕ ನೋಡುಗುರರಿಗೆ ಅತ್ಯಾಕರ್ಷಕವಾಗಿ ವಿಜಯನಗರದ ಶಿಲ್ಪ ಕಲಾ ವೈಭವವೇ ಇಲ್ಲಿ ಮರುಕಳಿಸಿದಂತಾಗಿದೆ.

Related posts

Leave a Comment