೨೧ ನೇ ವಾರ್ಡಿನಲ್ಲಿ ವಾಸಿಸುವ ಕಡುಬಡವರಿಗೆ ಹಕ್ಕು ಪತ್ರ ನೀಡಲು ಆಗ್ರಹ

  ಅಮಿನಪುರ ಬಡಾವಣೆಯಗುಡ್ಡದ ಪಕ್ಕದಲ್ಲಿ  ಸುಮಾರು ೨೦ ವರ್ಷಗಳಿಂದ ವಾಸಿಸುತ್ತಿರುವ  ಬಡಜನರಿಗೆ ಆದಷ್ಟು ಶೀಘ್ರದಲ್ಲಿ ಹಕ್ಕು ಪತ್ರಗಳನ್ನು ನೀಡಬೇಕೆಂದು  ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.  ಈಗಾಗಲೇ ಹಲವು ಬಾರಿ ಮನವಿ ಮಾಡಲಾಗಿದ್ದರೂ ಇನ್ನೂ ಹಕ್ಕು ಪತ್ರ ನೀಡಿಲ್ಲ . ಅಲ್ಲದೇ  ಮೂಲಭೂತ ಸೌಲಭ್ಯಗಳಾದ ರಸ್ತೆ, ಬೀದಿ ದೀಪ, ಕುಡಿಯುವ ನೀರಿನ ವ್ಯವಸ್ಥೆ  ಒದಗಿಸಿಕೊಡಬೇಕೆಂದು ನಿವಾಸಿಗಳು ಆಗ್ರಹಿಸಿದರು.ಈ ಸಂದರ್ಭದಲ್ಲಿ ಮನವಿಕೊಟ್ಟು ಭಾಗವಹಿಸಿದವರು  ವೀರಕನ್ನಡಿಗ ಶಿಕ್ಷಣ ಹಾಗೂ ಗ್ರಾಮೀಣಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಶಿವಾನಂದ ಹುದ್ಲೂರ  ಅಬ್ದುಲ್‌ವಹಾಬ್‌ರಾಟಿ ಸಂಚಾಲಕರು ಸ್ಲಂಜನಾಂದೋಲನ ವೇದಿಕೆ ಕೊಪ್ಪಳ, ಶಾಂತಮ್ಮ, ಮೌಲಾಬಿ ಫಕ್ರೂದ್ದಿನ್ ವೆಂಕಟರಮಣ, ನರಸಮ್ಮ, ಮೆದೀನಬಿ, ಶಂಕ್ರಪ್ಪ ಉಪಸ್ಥಿತರಿದ್ದರು

Related posts

Leave a Comment