ನಿವೃತ್ತಿಗೊಂಡ ಚಾಲಕ ಹನುಮಂತಪ್ಪನವರಿಗೆ ಬೀಳ್ಕೊಡುಗೆ

ಕೊಪ್ಪಳ, ಮೇ.೦೬ : ಕೊಪ್ಪಳದ ಪಂಚಾಯತ್ ರಾಜ್ ಇಂಜನೀಯರಿಂಗ್ ಉಪವಿಭಾಗದಲ್ಲಿ ಚಾಲಕನಾಗಿ ೩೮ ವರ್ಷಗಳ ಕಾಲ ಸರಕಾರಿ ಸೇವೆ ಸಲ್ಲಿಸಿ ಏ.೩೦ ರಂದು ನಿವೃತ್ತಿ ಹೊಂದಿದ ಚಾಲಕ ವಿ.ಹನುಮಂತಪ್ಪ ಇವರಿಗೆ ಪಂಚಾಯತ್ ರಾಜ್ ಇಂಜನೀಯರಿಂಗ್ ಉಪವಿಭಾಗದ ಕಛೇರಿಯಲ್ಲಿ ಈಚೆಗೆ ಬೀಳ್ಕೊಡುಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಮನೋಹರ್ ವಡ್ಡರ್, ಎಸ್.ಎಸ್.ಮಾಳಗಿ, ಇಲಾಖೆಯ ಸಿಬ್ಬಂದಿ ವರ್ಗ ಹಾಗೂ ಜಿಲ್ಲಾ ಸರಕಾರಿ ವಾಹನ ಚಾಲಕರ ಸಂಘದ ಪದಾಧಿಕಾರಿಗಳಾದ ಮಲ್ಲೇಶ, ವಿ.ವೆಂಕಟೇಶ್, ಚನ್ನಪ್ಪ, ಆಂಜನೇಯ, ಗುರುಬಸವನಗೌಡ, ಭರತ್ ಕಾಂಬ್ಳೆ, ಜಾಫರಸಾಬ್, ಎನ್.ವೆಂಕಟೇಶಲು, ಲಕ್ಷ್ಮಣ, ಶ್ರೀಕಾಂತ, ಅಜಮತ್ ಪಾಷಾ ಹಾಗೂ ಇತರರು ಇದ್ದರು.

Please follow and like us:
error