ಅಂಬಿಗರ ಚೌಡಯ್ಯ ಪುಸ್ತಕ ಲೋಕಾರ್ಪಣೆ.

ಗಂಗಾವತಿ 17. ಇದೇ ದಿನಾಂಕ ೧೭ರಂದು ನಗರದ ಲಯನ್ಸ್ ಕ್ಲಬ್ ಭವನದಲ್ಲಿ ಇಮಾಮ್ ಸಾಹೇಬ್ ಹಡಗಲಿ ಇವರು ರಚಿಸಿದ ಗಂಗಾಪುತ್ರ ಅಂಬಿಗರ ಚೌಡಯ್ಯ ಪುಸ್ತಕ ಬಿಡುಗಡೆ ಸಮಾರಂಭ ಜರುಗಲಿದೆ.  ಸದರಿ ಸಮಾರಂಭದ ಸಾನಿಧ್ಯವನ್ನು ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು,  ಅಲ್ಲಮಪ್ರಭು ಆಶ್ರಮ, ಜನವಾಡ, ಬೆಳಗಾವಿ ಇವರು ವಹಿಸಿಕೊಳ್ಳಲಿದ್ದಾರೆ. ಅಂಬಿಗರ ಚೌಡಯ್ಯ ಪುಸ್ತಕವನ್ನು ಹಂಪಿ ವಿಶ್ವವಿದ್ಯಾಲಯದ ಅಧ್ಯಯನಾಂಗದ ನಿರ್ದೇಶಕರಾದ ಡಾ. ರವೀಂದ್ರನಾಥ ಇವರು ಬಿಡುಗಡೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಪುಸ್ತಕ ಕುರಿತು ಡಾ. ಲಿಂಗಣ್ಣ ಜಂಗಮರಳ್ಳಿ ಮಾತನಾಡಲಿದ್ದಾರೆ. ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ದತ್ತಿ ದಾನಿಗಳಾದ ಎಸ್.ಬಿ.ರೆಡ್ಡಿ ನ್ಯಾಯಾವಾದಿಗಳು ಮತ್ತು ಡಾ|| ಶಿವಕುಮಾರ್ ಮಾಲಿಪಾಟೀಲ್ ಅಧ್ಯಕ್ಷರು. ಅ.ಭಾ.ಶ.ಸಾ.ಪ. ಗಂಗಾವತಿ ಹಾಗೂ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ರಾಜಶೇಖರ್ ಹೇರೂರು ಉಪಸ್ಥಿತರಿರುವರು ಎಂದು ಬನ ಪ್ರಕಾಶನ ಕೊಟ್ಟೂರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಲಯನ್ಸ್ ಕ್ಲಬ್ ಗಂಗಾವತಿ ಇವರ ಪರವಾಗಿ ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಾಕ್ಷರಾದ ರಮೇಶ ಗಬ್ಬೂರು ಇವರು ಮೂಲಕ ತಿಳಿಸಿದ್ದಾರೆ.

Please follow and like us:
error