ಎಸ್.ಎಸ್.ಎಲ್.ಸಿ. ಫಲಿತಾಂಶ ಉತ್ತಮಪಡಿಸಲು ನ.೨೪ ರಿಂದ ಕಾರ್ಯಾಗಾರ

 ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಾರ್ಚ/ಏಪ್ರೀಲ್ ೨೦೧೫ ರಲ್ಲಿ ಜರುಗುವ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಹೊಸಪಠ್ಯಕ್ರಮಕ್ಕೆ ಅನುಗುಣವಾಗಿ ನಿರಂತರ ವ್ಯಾಪಕ ಮೌಲ್ಯಮಾಪನದ ಅನುಷ್ಠಾನ ಹಾಗೂ ವಿಷಯವಾರು ಬೋಧನಾ ಶಿಕ್ಷಕರುಗಳಿಗೆ ೧೦ನೇ ತರಗತಿಯ ಫಲಿತಾಂಶವನ್ನು ಉತ್ತಮಪಡಿಸುವ ಕುರಿತು ಮೊದಲ ಹಂತದಲ್ಲಿ ಕನ್ನಡ, ಇಂಗ್ಲೀಷ ಹಾಗೂ ಹಿಂದಿ ವಿಷಯಗಳನ್ನು ಬೋಧಿಸುತ್ತಿರುವ ಶಿಕ್ಷಕರಿಗೆ ಕಾರ್ಯಾಗಾರವನ್ನು ನ.೨೪ ರಿಂದ ೨೬ ರವರೆಗೆ ಬೆಳಿಗ್ಗೆ ೯ ಗಂಟೆಗೆ ಶ್ರೀ ಗವಿಸಿದ್ದೇಶ್ವರ ಬಿ.ಇಡಿ. ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.
ಕಾರ್ಯಾಗಾರ ನಡೆಯುವ ಮೂರು ದಿನಗಳಂದು ಯಾವ ಶಿಕ್ಷಕರಿಗೂ ರಜೆ ನೀಡುವಂತಿಲ್ಲ. ಸಂಬಂಧಿಸಿದ ಶಿಕ್ಷಕರನ್ನು ಕಾರ್ಯಾಗಾರಕ್ಕೆ ಬಿಡುಗಡೆಗೊಳಿಸದೇ ಉದಾಸೀನತೆ ತೊರಿದಲ್ಲಿ ಸಂಬಂಧಿಸಿದ ಶಾಲೆಯ ಮುಖ್ಯೋಪಾಧ್ಯಾಯರನ್ನೆ ನೇರ ಹೊಣೆಗಾರರನ್ನಾಗಿ ಮಾಡಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Leave a Reply