ಭಗವದ್ಗೀತೆ ರಾಷ್ಟ್ರೀಯ ಗ್ರಂಥ ಎಂದು ಘೋಷಿಸಬೇಕು ಎನ್ನುವುದು ಮೂರ್ಖತನದ್ದು – ಯೋಗಿಶ್ ಮಾಸ್ಟರ್

ಜಾತ್ಯಾತೀತ ಭಾರತದಲ್ಲಿ ಯಾವುದೇ ಒಂದು ಧರ್ಮಗ್ರಂಥ ರಾಷ್ಟ್ರೀಯ ಗ್ರಂಥವಾಗಲು ಸಾಧ್ಯವಿಲ್ಲ. ಸಂವಿಧಾನವೇ ನಮ್ಮ ರಾಷ್ಟ್ರಗ್ರಂಥ. ರಾಷ್ಟ್ರವನ್ನು ಪ್ರತಿನಿಧಿಸುವವರು ಇನ್ನೊಂದು ರಾಷ್ಟ್ರವನ್ನು ಪ್ರತಿನಿಧಿಸುವವರಿಗೆ ಒಂದು ಧರ್ಮದ ಗ್ರಂಥವನ್ನು ಉಡುಗೊರೆಯಾಗಿ ಕೊಟ್ಟಿದ್ದು ತಪ್ಪು.  ಭಗವದ್ಗೀತೆ ಮೂಲತಃ ವೈರುಧ್ಯಗಳಿಂದ ಕೂಡಿದ ಗ್ರಂಥ.  ನಾನು ವೈಯುಕ್ತಿಕವಾಗಿ ಪುಸ್ತಕವನ್ನು ಸುಡುವುದರ ವಿರುದ್ದ ಇದ್ದೇನೆ ಎಂದು ಯೋಗೀಶ್ ಮಾಸ್ಟರ್ ಹೇಳಿದರು. ಅವರು  ನಗರದ ಮೀಡಿಯಾ ಕ್ಲಬ್ ನಲ್ಲಿ ಮೂರು ಬಿಟ್ಟವರು ಊರಿಗೆ ದೊಡ್ಡವರು ಕನ್ನಡ ಸಿನೆಮಾದ ಟೀಸರ್ ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.

              ಭಗವದ್ಗೀತೆ ಹುಟ್ಟಿದ್ದು ಎಲ್ಲಿ, ಅದರ ಆಶಯವೇನು. ಯುದ್ದಭೂಮಿಯಲ್ಲಿ ಹುಟ್ಟಿ ಯುದ್ದವನ್ನು ಪ್ರಚೋಧಿಸಿದಂತ ಗ್ರಂಥ , ಶಾಂತಿಬೇಕು ಯುದ್ದಬೇಡ ಎನ್ನುವಾಗ ಭಗವದ್ಗೀತೆ ಅವಶ್ಯಕ ಎನಿಸುವುದಿಲ್ಲ.  ಅದನ್ನು ಸಾಮಾಜಿಕ ತಿಳುವಳಿಕೆಗೆ ಅಧ್ಯಯನಕ್ಕೆ ಬಳಸಬೇಕಷ್ಟೇ . ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥ ಎಂದು ಘೋಷಿಸಬೇಕು ಎನ್ನುವುದು ಮೂರ್ಖತನದ್ದು ಎಂದರು. 
                
Please follow and like us:
error