ಇಕ್ಬಾಲ್ ಅನ್ಸಾರಿ ಜನ ಸಂಪರ್ಕ ಸಭೆ

ಕೊಪ್ಪಳ : ಗಂಗಾವತಿ

ವಿಧಾನ ಸಭಾ ಕ್ಷೇತ್ರದ ಶಾಸಕರಾದ  ಇಕ್ಬಾಲ್ ಅನ್ಸಾರಿ ಯವರು ದಿನಾಂಕ ೧೩ ರಂದು ಲೇಬಗೆರಿ ಗ್ರಾಮದ ಜನರನ್ನು ಉದ್ದೇಶಿಸಿ ಮಾತನಾಡಿದರು. ಸರ್ಕಾರದಿಂದ ಬರುವ ಎಲ್ಲಾ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪುವಲ್ಲಿ ಹಗಲಿರುಳು ಶ್ರಮಿಸುವುದಾಗಿ ತಿಳಿಸಿದರು ಹಾಗೂ ನೂತನವಾಗಿ ನಿರ್ಮಿಸಿದ ಸರ್ಕಾರಿ ಪ್ರೌಡ ಶಾಲೆಯ ಕಾಮಗಾರಿಯನ್ನು ವಿಕ್ಷೀಸಿದರು ಹಾಗೂ ಪ್ರಾಥಮಿಕ ಸಿ.ಆರ್.ಸಿ. ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎಸ್.ಬಿ.ಖಾದರಿ, ಯಮನಪ್ಪ ವಿಠ್ಠಲಾಪೂರ, ಮಲ್ಲೇಶಪ್ಪ ಗುಮಗೇರಿ, ಸಂಗಮೇಶ ಬಾದವಾಡಗಿ, ಬಸವಕುಮಾರ ಪಟ್ಟಣಶೆಟ್ಟಿ, ಗಾಳೇಪ್ಪ ಗಂಟಿ, ಮಾರುತಿ ತೊಟಗಂಟಿ, ಮಂಜು ಮೇಟಿ, ಫಕೀರಗೌಡ ಲೇಬಗೇರಿ ಇನ್ನಿತರರು ಉಪಸ್ಥಿತರಿದ್ದರು.

Leave a Reply