ಹೊಸದುರ್ಗದಲ್ಲಿ ರಾಜ್ಯಮಟ್ಟದ ಯುವಜನ ಮೇಳ

ಕೊಪ್ಪಳ ಡಿ.   : ರಾಜ್ಯಮಟ್ಟದ ೨೦೦೯-೧೦ನೇ ಸಾಲಿನ ಯುವಜನ ಮೇಳ ದಿ. ೩೦-೧೨-೨೦೧೧ ರಿಂದ ೦೧-೦೧-೨೦೧೨ ರವರೆಗೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ನಡೆಸಲಾಗುವುದು. 
ಡಿ. ೩೦ ರಂದು ಮದ್ಯಾಹ್ನ ನಡೆಯುವ ಉದ್ಘಾಟನಾ ಸಮಾರಂಭಕ್ಕೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಎಲ್ಲಾ ಸ್ಪರ್ಧಾಳುಗಳು ಕಡ್ಡಾಯವಾಗಿ ಭಾಗವಹಿಸಬೇಕು. ಇಲಾಖೆಯ ಎಲ್ಲಾ ಷರತ್ತುಗಳಿಗೆ ಬದ್ಧರಿರಬೇಕು. ಭಾಗವಹಿಸುವ ಸ್ಪರ್ಧಾಳುಗಳು ದಿನಾಂಕ ೩೦-೧೨-೨೦೧೧ ರ ಮಧ್ಯಾಹ್ನ ೧೨ ಗಂಟೆಯೊಳಗಾಗಿ ತಮ್ಮ ತಂಡದ ನೊಂದಣಿ ಹೊಸದುರ್ಗ ತಾಲೂಕು ಕ್ರೀಡಾಂಗಣದಲ್ಲಿ ಮಾಡಿಸಲು ಸೂಚಿಸಲಾಗಿದೆ. ಭಾಗವಹಿಸಿ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ಮತ್ತು ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು ಮಾತ್ರ ರಾಜ್ಯಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ. 
ಭಾಗವಹಿಸುವ ಸ್ಪರ್ಧಾಳುಗಳು : ಭಜನೆ ಸ್ಪರ್ಧೆಗೆ ಕುಷ್ಟಗಿಯ ಶ್ರೀ ಮಾರುತಿ ಭಜನಾ ಮಂಡಳಿ, ದೊಡ್ಡಾಟಕ್ಕೆ ಕೊಪ್ಪಳದ ರೇವಣ ಸಿದ್ಧೇಶ್ವರ ಯುವಕ ಮಂಡಳಿ ಹಾಗೂ ಸಣ್ಣಾಟಕ್ಕೆ ಕೊಪ್ಪಳದ ಬನ್ನಿಗೊಳ ಶರಣಪ್ಪ ಮತ್ತು ಸಂಗಡಿಗರು ಆಯ್ಕೆಯಾಗಿದ್ದು, ಭಾವಗೀತೆ ಸ್ಪರ್ಧೆಗೆ ಕೊಪ್ಪಳದ ಅಕ್ಕಮಹಾದೇವಿ, ಭೀಮಾಂಬಿಕಾ ಯುವತಿ ಮಂಡಳಿ, ಜಾನಪದ ಗೀತೆ ಸ್ಪರ್ಧೆಗೆ ಕುಷ್ಟಗಿ ತಾಲೂಕಿನ ದೋಟಿಹಾಳದ ಮದರ್ ತೆರೇಸಾ ಯುವತಿ ಮಂಡಳಿ ಈ ತಂಡಗಳು ರಾಜ್ಯಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಲಿವೆ. ರಾಜ್ಯಮಟ್ಟಕ್ಕೆ ಆಯ್ಕೆಯಾದ ತಂಡಗಳು ಡಿ. ೩೦ ರ ಮಧ್ಯಾಹ್ನ ೧೨ಗಂಟೆಯೊಳಗಾಗಿ ತಮ್ಮ ತಂಡವನ್ನು ನೊಂದಾಯಿಸಿ ಉದ್ಘಾಟನಾ ಸಮಾರಂಭಕ್ಕೆ ಕಡ್ಡಾಯವಾಗಿ ಹಾಜರಿರಲು ವಿಲಾಸ್ ಎನ್.ಘಾಡಿ, ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಇವರು  ತಿಳಿಸಿದ್ದಾರೆ. 
Please follow and like us:
error