ಎಸ್‌ಎಸ್‌ಎಲ್‌ಸಿ. ವಿಜ್ಞಾನ ಪೂರಕ ಪರೀಕ್ಷೆ : ೧೨೪ ವಿದ್ಯಾರ್ಥಿಗಳು ಗೈರು

 ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯಲ್ಲಿ ಬುಧವಾರ ನಡೆದ ವಿಜ್ಞಾನ ವಿಷಯದ ಪರೀಕ್ಷೆಗೆ ಜಿಲ್ಲೆಯ ೧೬೩೦ ವಿದ್ಯಾರ್ಥಿಗಳು ಹಾಜರಾಗಿದ್ದು, ೧೨೪ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.  ಯಾವುದೇ ಡಿಬಾರ್ ಪ್ರಕರಣ ವರದಿಯಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
  ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ವಿಜ್ಞಾನ ವಿಷಯಕ್ಕೆ ಬಾಲಕರು- ೧೧೪೧, ಬಾಲಕಿಯರು- ೬೧೩ ಸೇರಿದಂತೆ ಒಟ್ಟು ೧೭೫೪ ವಿದ್ಯಾರ್ಥಿಗಳು ದಾಖಲಾಗಿದ್ದರು. ಇದರಲ್ಲಿ ಬಾಲಕರು- ೧೦೭೦, ಬಾಲಕಿಯರು- ೫೬೦ ಸೇರಿದಂತೆ ಒಟ್ಟು ೧೬೩೦ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದು, ೭೧-ಬಾಲಕರು, ೫೩- ಬಾಲಕಿಯರು ಗೈರು ಹಾಜರಾಗಿದ್ದಾರೆ. 
ಕೊಪ್ಪಳ ತಾಲೂಕಿನಲ್ಲಿ ೮೩೪ ವಿದ್ಯಾರ್ಥಿಗಳ ಪೈಕಿ ೭೭೭ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ ೫೫೬ ವಿದ್ಯಾರ್ಥಿಗಳ ಪೈಕಿ ೫೧೩, ಕುಷ್ಟಗಿ ತಾಲೂಕಿನಲ್ಲಿ ೧೭೯ ವಿದ್ಯಾರ್ಥಿಗಳ ಪೈಕಿ ೧೬೩, ಯಲಬುರ್ಗಾ ತಾಲೂಕಿನಲ್ಲಿ ೧೮೫ ವಿದ್ಯಾರ್ಥಿಗಳ ಪೈಕಿ ೧೭೭ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಕೊಪ್ಪಳ ತಾಲೂಕಿನಲ್ಲಿ ೫೭, ಗಂಗಾವತಿ- ೪೩, ಕುಷ್ಟಗಿ-೧೬ ಮತ್ತು ಯಲಬುರ್ಗಾ ತಾಲೂಕಿನಲ್ಲಿ ೦೮ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
Please follow and like us:
error