ಜೆಡಿಎಸ್ ಗೆ ರಮೇಶ ಪಾಟೀಲ್ ನೇಮಕ

ಕೊಪ್ಪಳ, ಡಿ. ೧೯. ಗಂಗಾವತಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಗೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಶಿಫಾರಸ್ಸಿನ ಮೇಲೆ ಕೂಕನಪಳ್ಳಿಯ ರಮೇಶ ಹನುಮಂತಪ್ಪ ಪಾಟೀಲ್ ರನ್ನು ರಾಜ್ಯಾಧ್ಯಕ್ಷ ಹೆಚ್.ಡಿ. ಕುಮರಸ್ವಾಮಿ ನೇಮಕ ಮಾಡಿದ್ದಾರೆ.
ಪಾಟೀಲ್ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ, ಗಂಗಾವತಿ ವಿಧಾನಸಭ ಕ್ಷೇತ್ರಕ್ಕೆ ಒಳಪಡುವ ಕೊಪ್ಪಳ ತಾಲೂಕಿನ ಭಾಗದಲ್ಲಿ ಸರ್ವಸಮಾಜದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಪಾಟೀಲರ ಕಾರ್ಯವೈಖರಿಯನ್ನು ಗುರುತಿಸಿ ಈ ಜವಾಬ್ದಾರಿ ನೀಡಿದ್ದಾರೆ, ಪಾಟೀಲರು ಈ ಕೂಡಲೇ ಪಕ್ಷದ ಸಂಘಟನೆಯಲ್ಲಿ ಉತ್ತಮವಾಗಿ ತೊಡಗಿಕೊಳ್ಳುವಂತೆ ರಾಜ್ಯಾಧ್ಯಕ್ಷರು ನೇಮಕ ಮಾಡಿದ್ದಾರೆ ಎಂದು ಜೆಡಿಎಸ್ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.

Leave a Reply