ನಗರದ ಗಣೇಶ ವಿಸರ್ಜನ ಸ್ಥಳ -ಬಂದೋಬಸ್ತ್ ವೀಕ್ಷಿಸಿದ ಶಾಸಕರು

ಕೊಪ್ಪಳ ೧೩: ನಗರದ ಎಲ್ಲಾ ಗಣೇಶ ವಿಸರ್ಜನೆ ಮಾಡುವ ಹುಲಿ ಕೆರೆಯನ್ನು ಇಂದು ಬೆಳಿಗ್ಗೆ ೧೧.೦೦ಗಂಟೆಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಹಾಗೂ ತಹಶೀಲ್ದಾರ ಮತ್ತು ನಗರ ಸಭೆಯ ಪೌರಾಯುಕ್ತರ ಜೊತೆಗೆ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ರವರು ಗಣೇಶ ವಿಸರ್ಜನೆಯ ಸ್ಥಳವನ್ನು ವೀಕ್ಷಿಸಿ ಸೂಕ್ತ ಪೋಲಿಸ್ ಬಂದೋಬಸ್ತ್ ಬಗ್ಗೆ ಮಾಹಿತಿ ಪಡೆದು ಕೊಂಡರು.
                                     

ಈ ಸಂದರ್ಭದಲ್ಲಿ ನಗರಸಭಾ ನೂತನ ಅಧ್ಯಕ್ಷರಾದ ಶ್ರೀಮತಿ ಲತಾ ಸಂಡೂರು, ಉಪಾಧ್ಯಕ್ಷರಾದ ಅಮ್ಜದ್ ಪಟೇಲ್, ಪ್ರಸನ್ನ ಗಡಾದ್, ಮಹೇಂದ್ರ ಜೋಪ್ರಾ, ಅನಿಕೇತ ಅಗಡಿ, ಬಾಷುಸಾಬ ಖತೀಬ್, ಗಾಳೆಪ್ಪ ಪೂಜಾರ ಹಾಗೂ ಪೋಲಿಸ್ ಅಧಿಕಾರಿಗಳು ಉಪಸ್ಥಿತರಿದ್ದರಿಂದು ಪಕ್ಷದ ವಕ್ತಾರ ಅಕ್ಬರ್‌ಪಾಷಾ ಪಲ್ಟನ್ ತಿಳಿಸಿದರು.

Leave a Reply