ನಾಡೋಜ : ಬಳ್ಳಾರಿ ಸಾಂಸ್ಕೃತಿಕ ಲೋಕಕ್ಕೆ ನಿರಾಸೆ

 ಬಳ್ಳಾರಿ, ಡಿ. ೨೦: ಹಂಪಿ ಕನ್ನಡ ವಿಶ್ವ ವಿದ್ಯಾಲಯ ಪ್ರತಿಷ್ಠಿತ ನಾಡೋಜ ಪದವಿಗೆ ಈ ಬಾರಿ ಜಿಲ್ಲೆಯ ಗಣ್ಯರನ್ನು ಆಯ್ಕೆ ಮಾಡದಿರುವುದು ಬಳ್ಳಾರಿ ಜಿಲ್ಲೆಯ ಸಾರಸ್ವತ, ಸಾಂಸ್ಕೃತಿಕ ಲೋಕಕ್ಕೆ ನಿರಾಸೆಯನ್ನುಂಟು ಮಾಡಿದೆ ಎಂದು ಡಾ. ಸುಭಾಷ್‌ಭರಣಿ ಸಾಂಸ್ಕೃತಿಕ  ವೇದಿಕೆ ತಿಳಿಸಿದೆ.
ಕನ್ನಡ ಭಾಷೆ, ಸಾಹಿತ್ಯ, ಕಲೆ, ಕರ್ನಾಟಕದ ಸಂಸ್ಕೃತಿ ಹಾಗೂ ಸಮಾಜ ಸೇವಾ ಕ್ಷೇತ್ರಗಳಲ್ಲಿ ಅನುಪಮ ಕೊಡುಗೆ ನೀಡಿದ  ಜಿಲ್ಲೆಯ ಗಣ್ಯರೊಬ್ಬರನ್ನು ನಾಡೋಜ ಪದವಿಗೆ ಆಯ್ಕೆ ಮಾಡುವ ಮೂಲಕ ಕನ್ನಡ ವಿಶ್ವ ವಿದ್ಯಾಲಯ ಮೂರ್‍ನಾಲ್ಕು ವರ್ಷಗಳಿಂದ ಜಿಲ್ಲೆಯ ಸಾರಸ್ವತ, ಸಾಂಸ್ಕೃತಿಕ ಲೋಕವನ್ನು ಗೌರವಿಸ್ಮತ್ತಾ ಬಂದಿತ್ತು. 
ಜಿಲ್ಲೆಯಲ್ಲಿ ಅರ್ಹ ಗಣ್ಯರಿದ್ದರೂ ಈ ಬಾರಿ ಆಯ್ಕೆ ಮಾಡದಿರುವ್ಯದು ನಿರಾಸೆಯನ್ನಂಟು ಮಾಡಿದೆ. ರಂಗಭೂಮಿ ಮತ್ತು ಜಾನಪದ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಮಾಡಿರುವ ೭೮ರ ಹರೆಯದ ಬೆಳಗಲ್ ವೀರಣ್ಣ, ಆರ್ಥಿಕ ತಜ್ಞ ಪ್ರೊ. ಬಿ. ಶೇಷಾದ್ರಿ, ಹಿರಿಯ ಸಜ್ಜನ ಪತ್ರಕರ್ತ ೭೨ ವರ್ಷದ ಸಿ ಜಿ ಹಂಪಣ್ಣ, ಹಿರಿಯ ನ್ಯಾಯವಾದಿ, ಸಾಮಾಜಿಕ ಕಾರ್ಯಕರ್ತ ೮೫ರ ಹರೆಯದ ಅರವಿಂದ ಮಲೆಬೆನ್ನೂರು ರಂತಹ ಹಲವು ಗಣ್ಯರ ಬಗ್ಗೆ ನಾಡೋಜ ಪದವಿಗೆ ಆಯ್ಕೆ ಮಾಡುವ ಸಮಿತಿ ಪರಿಶೀಲಿಸಬಹುದಾಗಿತ್ತು ಎಂದು ಗುಲ್ಬರ್ಗಾ ವಿಶ್ವ ವಿದ್ಯಾಲಯದ ಸೆನೆಟ್ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿರುವ   ಪತ್ರಕರ್ತ ಮಂಜುನಾಥ್ ಅಭಿಪ್ರಾಯ ಪಟ್ಟಿದ್ದಾರೆ.
Please follow and like us:
error