fbpx

ಹಸನಸಾಬರಿಂದ ೬೯ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ.

ಕೊಪ್ಪಳ, ಆ. ೧೫. ಕರ್ನಾಟಕ ರಾಜ್ಯ ಅಸಂಘಟಿತ ಮುದ್ರಣ ಕಾರ್ಮಿಕರ ಸಂಘದ ಕೊಪ್ಪಳ ಜಿಲ್ಲಾ ಘಟಕದ ಜಿಲ್ಲಾ ಕಛೇರಿಯನ್ನು ಡಾ|| ಬಿ. ಆರ್. ಅಂಬೇಡಕರ್ ಸರ್ಕಲ್ ಹತ್ತಿರವಿರುವ ವಿಶ್ವ ಸದಸನದ ಎರಡನೆ ಅಂತಸ್ತಿನಲ್ಲಿ ಇಂದು ಅಧಿಕೃತವಾಗಿ ಪ್ರಾರಂಭಿಸಲಾಯಿತು. ೬೯ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಹಸನಸಾಬ ಹಿರೇಮಸೂತಿ ನೆರವೇರಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶರಣಪ್ಪ ನಾಯಕ ವಹಿಸಿಕೊಂಡಿದ್ದರು. ಉಪಾಧ್ಯಕ್ಷರಾದ ಶೈಲಪ್ಪ ನಿಡಶೇಸಿ ಮತ್ತು ಚನ್ನಪ್ಪ ರೋಣದ, ಪ್ರಧಾನ ಕಾರ್ಯದರ್ಶಿ ಗವಿಸಿದ್ದಯ್ಯ ಆರಾಧ್ಯಮಠ, ಸಂಘಟನಾ ಕಾರ್ಯದರ್ಶಿ ರಾಜಶೇಖರ ತಂಬ್ರಳ್ಳಿಮಠ, ಸಹ ಕಾರ್ಯದರ್ಶಿ ಶ್ರೀನಿವಾಸ ಅಶ್ವತ್ಥಪುರ, ಖಜಾಂಚಿ ಶರಣಯ್ಯ ಜುಕ್ತಿಮಠ ಈ ಸಂದರ್ಭದಲ್ಲಿ ಗವಿಸಿದ್ದಪ್ಪ ಗೊಂಡಬಾಳ, ಉಮೇಶ ಮುಧೋಳ, ಆನಂದ ಗೊಂಡಬಾಳ, ರಾಜಾಹುಸೇನ ಕಾತರಕಿ, ಮಲ್ಲಯ್ಯಸ್ವಾಮಿ, ಮಲಿಕ್‌ಜಾನ್, ಮಲ್ಲಿಕಾರ್ಜುನ ಕೆ., ವಿರುಪಾಕ್ಷಯ್ಯ ಅಲಸಿನಮರ, ನರಸಿಂಹರಾವ ಹುದ್ದಾರ, ಕೊಟ್ರೇಶ ದೇವರಮನಿ, ಸುರೇಶ ಕಾಳಗಿ, ಮಂಜುನಾಥ ಅಂಬಿಗೇರ, ಸುನೀಲ

ಕುಮಾರ ಇತರರು ಇದ್ದರು. ಕಾರ್ಯಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿರುವ ಎಲ್ಲಾ ಮುದ್ರಣ ಘಟಕಗಳ ಮಾಲಿಕರು ಮತ್ತು ಕಾರ್ಮಿಕರು ಸಂಘದ ಸದಸ್ಯರಾಗಿರುತ್ತಾರೆ, ಮುದ್ರಣ ಕ್ಷೇತ್ರದಲ್ಲಿರುವ ಎಲ್ಲರೂ ಅಸಂಘಟಿತ ಕಾರ್ಮಿಕರಾಗಿದ್ದು ಸರಕಾರದ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ, ಮುದ್ರಣಕಾರರ ವಸತಿ ಕಾಲೋನಿ ಮಾಡುವದು, ಕೈಗಾರಿಕಾ ಪ್ರದೇಶದಲ್ಲಿ ನಿವೇಶನ ಪಡೆಯುವ ನಿಟ್ಟಿನಲ್ಲಿ ಹೋರಾಟ ರೂಪಿಸಲು ನಿರ್ಧರಿಸಲಾಗಿದ್ದು, ಕೊಪ್ಪಳ ಜಿಲ್ಲಾ ಘಟಕದ ಉದ್ಘಾಟನೆ ಜೊತೆಗೆ ಒಂದು ದಿನದ ಮುದ್ರಣಕಾರರ ಸಮಾವೇಶ ಹಮ್ಮಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಸಾಹಿತ್ಯ ಗೊಂಡಬಾಳ ಪ್ರಾರ್ಥಿಸಿದರೆ, ರುದ್ರಗೌಡ ಪಾಟೀಲ ಸ್ವಾಗತಿಸಿದರು ಕೊನೆಗೆ ಸಿದ್ದಪ್ಪ ಏಳುರೊಟ್ಟಿ ವಂದಿಸಿದರು.

Please follow and like us:
error

Leave a Reply

error: Content is protected !!