You are here
Home > Koppal News > ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷದ ಪ್ರಚಾರ

ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷದ ಪ್ರಚಾರ

ಕೊಪ್ಪಳ :- ಕೊಪ್ಪಳ ವಿಧಾನಸಭಾ ಕ್ಷೇತ್ರ  ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನಂಕ್ಕಟಿ ನಾಗರಾಜ ಪರ ಬಿರುಸಿನ ಪ್ರಚಾರ ಬಿಸಲಿನ ನಾಡಿನಲ್ಲಿ ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಪಕ್ಷದ ಅಬ್ಯರ್ಥಿ ಪರ ಮತಯಾಚನೆ ಮಾಡಲಾಯಿತು.  
ಕಾರ್ಯಕರ್ತರನ್ನು ಉದ್ದೇಶಿಸಿ ಮುಂಬರುವ ದಿನಗಳಲ್ಲಿ ಸ್ವಾಭಿಮಾನಿ ಶ್ರೀರಾಮುಲರವರು ಮುಖ್ಯಂತ್ರಿಗಳಾಗುತ್ತಾರೆ. ಅವರು ದಿನ ದಲಿತರಿಗೆ ಬಡ ಬಂಧುಗಳಿಗೆ, ರೈತ ಬಾಂಧವರಿಗೆ ಯುವ ಮಿತ್ರರಿಗೆ ಬರುವ ದಿನಗಳಲ್ಲಿ ಒಳ್ಳೆಯ ಕೆಲಸವನ್ನು ಮಾಡಲು ಮಾಡುತ್ತಾರೆ. ಈ ಸಂಧರ್ಭದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ದೇವಸ್ಥಾನ ಭೇಟಿ ಕೊಟ್ಟು ಪೂಜೆ ಪುನಸ್ಕಾರದೊಂದಿಗೆ  ಪ್ರಚಾರದ ಚಾಲನೆ ಕೊಟ್ಟರು. 
ಹುಲಗಿ, ಶಿವಪೂರ, ಮುನಿರಾಬಾದ, ಶಹಾಪೂರ, ಅಗಳಕೇರಿ, ಹಾಲವರ್ತಿ ಗ್ರಾಮಕ್ಕೆ ಭೇಟಿ ಕೊಟ್ಟು ನೂರಾರು ಕಾರ್ಯಕರ್ತರೊಂದಿಗೆ ಮತ ಯಾಚನೆ ಮಾಡಿದರು. 
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಪ್ರಭುಗೌಡ ಪಾಟೀಲ, ಕೇಶವ್ ವಾಲ್ಮೀಕಿ, ಖಾಜಾ ಹುಸೇನ, ಹಸನಸಾಬ, ಗವಿಸಿದ್ದಪ್ಪ ಗೊಂಡಬಾಳ, ಮಂಜುನಾಥ ದೊಡ್ಡಮನಿ, ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಅಭಿಮಾನಿಗಳು  ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. 

Leave a Reply

Top