fbpx

ಮಹಿಳೆಯರಿಗೆ ತಾರಸಿ ತೋಟದ ತರಬೇತಿ.

ಕೊಪ್ಪಳ ಆ. ೧೮ (ಕ ವಾ) ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ಮಹಿಳೆಯರಿಗೆ ತಾರಸಿ ಕೈತೋಟದ ಮಾದರಿ ಕುರಿತು ತರಬೇತಿಯನ್ನು ಕೊಪ್ಪಳದಲ್ಲಿ ನೀಡಲಾಯಿತು. ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ತಾರಸಿ ತೋಟದ ಮಾದರಿಯನ್ನು ನಿರ್ಮಿಸಿ ಮಹಿಳೆಯರಿಗೆ ತರಬೇತಿ ನೀಡಲಾಯಿತು. ಈ ಸಂದಂರ್ಭದಲ್ಲಿ ವಿಷಯ ತಜ್ಞರುಗಳಾದ ಕವಿತಾ ಉಳ್ಳಿಕಾಶಿ ಮತ್ತು ಸುಧಾಕರ್ ಟಿ ಅವರು ವಿವಿಧ ಗ್ರಾಮದಿಂದ ಆಗಮಿಸಿದ್ದ ಮಹಿಳೆಯರಿಗೆ ತಾರಸಿ ತೋಟದ ನಿರ್ಮಾಣ ಮತ್ತು ಪೌಷ್ಠಿಕ ಆಹಾರದ ಬಗ್ಗೆ ತರಬೇತಿ ನೀಡಿದರು. ವಿಸ್ತರಣಾ ಮುಂದಾಳು ಡಾ. ಎಂ.ಬಿ ಪಾಟೀಲ ಮಾತನಾಡಿ ಎಲ್ಲ ಮಹಿಳೆಯರು, ರೈತರು ಹಾಗು ರೈತ ಮಹಿಳೆಯರು ಇಂತಹ ತರಬೇತಿ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.

Please follow and like us:
error

Leave a Reply

error: Content is protected !!