ಸ್ಥಳೀಯ ಸಂಸ್ಥೆ ಚುನಾವಣೆ : ಚುನಾವಣಾಧಿಕಾರಿಗಳ ನೇಮಕ

  ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ಆಯೋಗ ವೇಳಾ ಪಟ್ಟಿ ಪ್ರಕಟಿಸಿದ್ದು, ಚುನಾವಣೆಯನ್ನು ಸಮರ್ಪಕವಾಗಿ ನಡೆಸುವ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ವಾರ್ಡ್ ವಾರು ನಾಮಪತ್ರ ಸ್ವೀಕೃತ ಸ್ಥಳಗಳನ್ನು ನಿಗದಿಪಡಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ತಿಳಿಸಿದ್ದಾರೆ.
 ಕೊಪ್ಪಳ ನಗರಸಭೆಗೆ ಸಂಬಂಧಿಸಿದಂತೆ ವಾರ್ಡ್ ಸಂಖ್ಯೆ ೦೧ ರಿಂದ ೦೬ ರವರೆಗಿನ ವಾರ್ಡ್‌ಗಳಿಗೆ ಚುನಾವಣಾಧಿಕಾರಿಯನ್ನಾಗಿ ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಡಾ. ಮಲ್ಲಿಕಾರ್ಜುನ-೯೯೦೧೪೮೭೭೦೧ ಅವರನ್ನು ನೇಮಿಸಿದ್ದು, ಡಿಡಿಪಿಐ ಕಚೇರಿಯ ಎಸ್.ಎಫ್. ಸಂಗಟಿ ಅವರನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಿಸಿದೆ.  ಈ ವಾರ್ಡ್‌ಗಳಿಗೆ ಸಂಬಂಧಿಸಿದ ನಾಮಪತ್ರಗಳನ್ನು ಕೊಪ್ಪಳ ನಗರಸಭೆ ಕಾರ್ಯಾಲಯದಲ್ಲಿ ಸ್ವೀಕರಿಸಲಾಗುವುದು.  ವಾರ್ಡ್ ಸಂಖ್ಯೆ ೦೭ ರಿಂದ ೧೨ : ಚುನಾವಣಾಧಿಕಾರಿ- ಕೆ. ಮುನಿಯಪ್ಪ, ಸಹಕಾರಸಂಘಗಳ ಉಪನಿಬಂಧಕರು- ೯೪೪೮೬೩೪೦೭೯.  ಸಹಾಯಕ ಚುನಾವಣಾಧಿಕಾರಿ- ಎಲ್.ಬಿ. ವಿವೇಕಿ, ಸಹಕಾರ ಅಭಿವೃದ್ಧಿ ಅಧಿಕಾರಿ, ಕೊಪ್ಪಳ, ನಾಮಪತ್ರ ಸ್ವೀಕರಿಸುವ ವಿಳಾಸ- ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದ ಕ್ಷೇತ್ರ ಸಂಪನ್ಮೂಲ ಕೇಂದ್ರ.  ವಾರ್ಡ್ ಸಂಖ್ಯೆ ೧೩ ರಿಂದ ೧೮: ಚುನಾವಣಾಧಿಕಾರಿ- ಬಿ. ಕಲ್ಲೇಶ್, ಜಿಲ್ಲಾ ಬಿಸಿಎಂ ಅಧಿಕಾರಿ, ಕೊಪ್ಪಳ- ೯೪೮೧೦೯೯೨೫೬.  ಸಹಾಯಕ ಚುನಾವಣಾಧಿಕಾರಿ- ಹೆಚ್.ಟಿ. ವೆಂಕಟೇಶ್ ಕೆಆರ್‌ಐಡಿಎಲ್ ಯೋಜನಾ ಕಾರ್ಯನಿರ್ವಾಹಕ ಅಧಿಕಾರಿ, ಕೊಪ್ಪಳ, ನಾಮಪತ್ರ ಸ್ವೀಕರಿಸುವ ವಿಳಾಸ- ತಾಲೂಕು ಬಿಸಿಎಂ ಕಚೇರಿ, ಕೊಪ್ಪಳ ತಾ.ಪಂ. ಕಚೇರಿ ಆವರಣ.  ವಾರ್ಡ್ ಸಂಖ್ಯೆ ೧೯ ರಿಂದ ೨೪ : ಚುನಾವಣಾಧಿಕಾರಿ- ವಿ. ದೊರೈಸ್ವಾಮಿ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ- ೯೪೪೮೬೪೩೮೨೦.  ಸಹಾಯಕ ಚುನಾವಣಾಧಿಕಾರಿ- ವೆಂಕಟರಮಣ, ಸಹಾಯಕ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ಕೊಪ್ಪಳ, ನಾಮಪತ್ರ ಸ್ವೀಕರಿಸುವ ವಿಳಾಸ- ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರರ ಕಚೇರಿ, ಸಣ್ಣ ನೀರಾವರಿ ಇಲಾಖೆ, ತಹಸಿಲ್ದಾರರ ಕಚೇರಿ ಆವರಣ, ಕೊಪ್ಪಳ.  ವಾರ್ಡ್ ಸಂಖ್ಯೆ ೨೫ ರಿಂದ ೩೧ : ಚುನಾವಣಾಧಿಕಾರಿ- ಎಸ್.ಎಚ್. ಅಂಗಡಿ, ಜಿಲ್ಲಾ ಸಮಾಜಕಲ್ಯಾಣಾದಿಕಾರಿ- ೯೪೪೮೮೯೭೩೨೬.  ಸಹಾಯಕ ಚುನಾವಣಾಧಿಕಾರಿ- ದುರ್ಗಾಪ್ರಸಾದ, ಸಹಾಯಕ ತೋಟಗಾರಿಕೆ ಅಧಿಕಾರಿ, ಕೊಪ್ಪಳ, ನಾಮಪತ್ರ ಸ್ವೀಕರಿಸುವ ವಿಳಾಸ- ಕೊಪ್ಪಳ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ.
ಗಂಗಾವತಿ ನಗರಸಭೆ- ವಾರ್ಡ್ ಸಂಖ್ಯೆ ೦೧ ರಿಂದ ೦೬ : ಚುನಾವಣಾಧಿಕಾರಿ- ಸೋಮಶೇಖರಗೌಡ, ಬಿಇಓ, ಗಂಗಾವತಿ- ೯೪೪೮೫೩೮೭೮೧.  ಸಹಾಯಕ ಚುನಾವಣಾಧಿಕಾರಿ- ಆರ್.ಟಿ. ನಾಯ್ಕ, ಅಕ್ಷರದಾಸೋಹ ಸಹಾಯಕ ನಿರ್ದೇಶಕರು, ಗಂಗಾವತಿ, ನಾಮಪತ್ರ ಸ್ವೀಕರಿಸುವ ವಿಳಾಸ- ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ.  ವಾರ್ಡ್ ಸಂಖ್ಯೆ ೦೭ ರಿಂದ ೧೨ : ಚುನಾವಣಾಧಿಕಾರಿ- ಬಾಲರೆಡ್ಡಿ, ಕೃಷಿ ಇಲಾಖೆ ಉಪನಿರ್ದೇಶಕರು, ಗಂಗಾವತಿ- ೯೪೮೨೧೭೪೫೪೭.  ಸಹಾಯಕ ಚುನಾವಣಾಧಿಕಾರಿ- ಪಿ. ವಿಜಯಕುಮಾರ, ಸಹಾಯಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಗಂಗಾವತಿ, ನಾಮಪತ್ರ ಸ್ವೀಕರಿಸುವ ವಿಳಾಸ- ತಾಲೂಕು ಪಂಚಾಯತಿ ಕಾರ್ಯಾಲಯ, ಗಂಗಾವತಿ.  ವಾರ್ಡ್ ಸಂಖ್ಯೆ ೧೩ ರಿಂದ ೧೮ : ಚುನಾವಣಾಧಿಕಾರಿ- ವಿರೇಶ್ ಹುನಗುಂದ, ಜಿಲ್ಲಾ ರೈತ ತರಬೇತಿ ಕೇಂದ್ರ ಉಪನಿರ್ದೇಶಕರು, ವಡ್ಡರಹಟ್ಟಿಕ್ಯಾಂಪ್-೯೪೮೧೫೪೮೭೨೫. ಸಹಾಯಕ ಚುನಾವಣಾಧಿಕಾರಿ- ಜಿ. ಹನುಮಂತಯ್ಯ, ವಲಯ ಅರಣ್ಯಾಧಿಕಾರಿ, ಗಂಗಾವತಿ, ನಾಮಪತ್ರ ಸ್ವೀಕರಿಸುವ ವಿಳಾಸ- ನಗರಸಭೆ ಕಾರ್ಯಾಲಯ, ಗಂಗಾವತಿ.  ವಾರ್ಡ್ ಸಂಖ್ಯೆ ೧೯ ರಿಂದ ೨೪: ಚುನಾವಣಾಧಿಕಾರಿ- ಹೆಚ್.ಎಸ್. ರಮೇಶನಾಯ್ಕ, ಸಹಾಯಕ ಕೃಷಿನಿರ್ದೇಶಕ, ಗಂಗಾವತಿ- ೯೮೪೪೧೩೪೭೮೧.  ಸಹಾಯಕ ಚುನಾವಣಾಧಿಕಾರಿ- ನಿಂಗಪ್ಪ, ಕೃಷಿ ಅಧಿಕಾರಿ, ಸಿದ್ದಾಪುರ, ನಾಮಪತ್ರ ಸ್ವೀಕರಿಸುವ ವಿಳಾಸ- ಸಹಾಯಕ ಕೃಷಿ ಅಧಿಕಾರಿಗಳ ಕಚೇರಿ, ಗಂಗಾವತಿ.  ವಾರ್ಡ್ ಸಂಖ್ಯೆ ೨೫ ರಿಂದ ೩೧: ಚುನಾವಣಾಧಿಕಾರಿ- ಎಸ್.ಎಸ್. ಖಾದ್ರಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಎಂಡಿ.ಪಿ. ಗಂಗಾವತಿ- ೯೪೪೮೧೮೬೬೧೯.  ಸಹಾಯಕ ಚುನಾವಣಾಧಿಕಾರಿ- ಕೆ.ಎಸ್. ಪಾಟೀಲ್, ವಲಯ ಅರಣ್ಯಾಧಿಕಾರಿ, ಗಂಗಾವತಿ, ನಾಮಪತ್ರ ಸ್ವೀಕರಿಸುವ ವಿಳಾಸ- ಎ.ಪಿ.ಎಂ.ಸಿ. ಕಚೇರಿ, ಗಂಗಾವತಿ.  
ಕುಷ್ಟಗಿ ಪುರಸಭೆ- ವಾರ್ಡ್ ಸಂಖ್ಯೆ ೦೧ ರಿಂದ ೧೨: ಚುನಾವಣಾಧಿಕಾರಿ- ಪ್ರವೀಣ್, ಸಹಾಯಕ ತೋಟಗಾರಿಕೆ ನಿರ್ದೇಶಕ, ಕುಷ್ಟಗಿ- ೮೭೫೨೯೨೮೯೫೬.  ಸಹಾಯಕ ಚುನಾವಣಾಧಿಕಾರಿ- ಬಸವರಾಜ ಬೇವಿನಾಳ, ಸಹಾಯಕ ತೋಟಗಾರಿಕೆ ಅಧಿಕಾರಿ, ನಾಮಪತ್ರ ಸ್ವೀಕರಿಸುವ ವಿಳಾಸ- ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ಕುಷ್ಟಗಿ.  ವಾರ್ಡ್ ಸಂಖ್ಯೆ ೧೩ ರಿಂದ ೨೩: ಚುನಾವಣಾಧಿಕಾರಿ- ಬಿ.ಎಚ್. ಗೋನಾಳ, ಕ್ಷೇತ್ರ ಶಿಕ್ಷಣಾಧಿಕಾರಿ, ಕುಷ್ಟಗಿ- ೯೯೦೨೮೦೨೮೪೬.  ಸಹಾಯಕ ಚುನಾವಣಾಧಿಕಾರಿ- ಬಿ.ಎಚ್. ಕಟ್ಟಿಮನಿ, ಅಕೌಂಟ್ಸ್ ಆಫೀಸರ್, ತಾ.ಪಂ. ಕುಷ್ಟಗಿ, ನಾಮಪತ್ರ ಸ್ವೀಕರಿಸುವ ವಿಳಾಸ- ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕುಷ್ಟಗಿ.
ಯಲಬುರ್ಗಾ ಪಟ್ಟಣ ಪಂಚಾಯತಿ- ವಾರ್ಡ್ ಸಂಖ್ಯೆ ೦೧ ರಿಂದ ೧೧ ಚುನಾವಣಾಧಿಕಾರಿ- ಆರ್. ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ, ಯಲಬುರ್ಗಾ- ೯೪೮೦೬೯೫೨೮೧,  ಸಹಾಯಕ ಚುನಾವಣಾಧಿಕಾರಿ- ಮಹಾದೇವಪ್ಪ ಕಮ್ಮಾರ, ಸಹಾಯಕ ತೋಟಗಾರಿಕೆ ಅಧಿಕಾರಿ, ನಾಮಪತ್ರ ಸ್ವೀಕರಿಸುವ ವಿಳಾಸ- ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಯಲಬುರ್ಗಾ.
  ಸಂಬಂಧಪಟ್ಟ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು ನಿಗದಿತ ವಾರ್ಡ್‌ಗಳಿಗೆ ಸಂಬಂಧಿಸಿದ ನಾಮಪತ್ರಗಳನ್ನು ಸ್ವೀಕರಿಸಲು ಸೂಚನೆ ನೀಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Please follow and like us:
error

Related posts

Leave a Comment