You are here
Home > Koppal News > ಮಹಾ ಪ್ರತ್ಯಂಗಿರಾ ಯಾಗ ಉಚಿತ ಪಾಸ್ ವಿತರಣೆ.

ಮಹಾ ಪ್ರತ್ಯಂಗಿರಾ ಯಾಗ ಉಚಿತ ಪಾಸ್ ವಿತರಣೆ.

ಕೊಪ್ಪಳ, ಏ. ೨೬. ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರದ ವತಿಯಿಂದ ಕೇಂದ್ರದ ಸಂಸ್ಥಾಪಕರು, ಮುದ್ರಾ ರಹಸ್ಯ ಖ್ಯಾತಿಯ ಮುದ್ರಾ ರತ್ನ ಶ್ರೀ ಲಕ್ಷ್ಮೀಶ್ರೀನಿವಾಸ ಗುರೂಜಿ ನೇತೃತ್ವದಲ್ಲಿ ದ್ವಾದಶ ಮಹಾಪ್ರತ್ಯಂಗೀರಾ ಯಾಗ ವೈಜ್ಞಾನಿಕವಾಗಿ ನಡೆಯಲಿದೆ.ನರಸಿಂಹ ಜಯಂತಿ ಮತ್ತು ಪ್ರತ್ಯಂಗೀರಾ ಜಯಂತಿಯ ವಿಶೇಷ ದಿನವಾದ ಮೇ ೩ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶ್ವದಲ್ಲಿಯೇ ಪ್ರಥಮ ಬಾರಿಗೆ ಒಂದು ಲಕ್ಷ ಜನರನ್ನು ಸೇರಿಸಿ ಉಚಿತವಾಗಿ ಮಹಾ ಪ್ರತ್ಯಂಗಿರ ಯಾಗವನ್ನು ಮಾಡುವ ಮೂಲಕ ಜನರಿಗೆ ಆಗುತ್ತಿರುವ ಮಾಟ ಮಂತ್ರಗಳ ಕಾಟಗಳಿಂದ ಮುಕ್ತಿ, ವಿದ್ಯಾಭ್ಯಾಸ, ವ್ಯಾಪಾರ ವ್ಯವಹಾರ ವೃದ್ಧಿ, ಹಿತ ಶತ್ರು, ಗುಪ್ತ ಶತ್ರು ಬಾಧೆ, ದುರ್ಮರಣ, ಅಕಾಲ ಮೃತ್ಯು ದೋಷ, ಕೌಟುಂಬಿಕ ಸಮಸ್ಯೆ ಮುಂತಾದವುಗಳ ಪರಿಹಾರಕ್ಕೆ ಯಾಗದಲ್ಲಿ ಪಾಲ್ಗೊಂಡು ಪರಿಹಾರ ಕಂಡುಕೊಳ್ಳಬಹುದು. ರಾಜ್ಯದ ಎಲ್ಲಾ ಜನರಿಗೂ ಅವಕಾಶ ಕಲ್ಪಿಸಲಾಗಿದೆ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಉಚಿತವಾಗಿ ನೀಡುವ ಪಾಸ್‌ಗಳನ್ನು ಪ್ರತಿದಿನ ಸಂಜೆ ೫ ರಿಂದ ೭ ರವರೆಗೆ ಭಾಗ್ಯನಗರ ರಸ್ತೆಯ ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ, ಬೆಳಗ್ಗೆ ೧೦ ರಿಂದ ಸಂಜೆ ೬ ರವರೆಗೆ ವಿಶ್ವ ಪ್ರಿಂಟರ್‍ಸ್ ತಾಲೂಕ ಪಂಚಾಯತ ಕಾಂಪ್ಲೆಕ್ಸ್ ಕೊಪ್ಪಳ ಇಲ್ಲಿ ಅಥವಾ ಕಾರ್ಯಕ್ರಮ ಸಂಘಟಕರಾದ ನರಸಿಂಹಮೂರ್ತಿ ಆನಂದಕರ್ (೯೭೪೨೩೬೭೫೮೩) ಮಂಜುನಾಥ ಜಿ. ಗೊಂಡಬಾಳ (೯೪೪೮೩೦೦೦೭೦) ಸಂತೋಷ ಭಾಗ್ಯನಗರ, ಕಲಾವತಿ ಮುನಿರಾಬಾದ (೯೮೮೦೯೫೪೮೧೩) ತಿಪ್ಪೇಸ್ವಾಮಿ ಗಂಗಾವತಿ (೯೮೪೫೩೯೫೪೪೬) ಇತರರನ್ನು ಸಂಪರ್ಕಿಸಿ ಪಾಸ್‌ಗಳನ್ನು ಪಡೆದುಕೊಳ್ಳಲು ಕೋರಲಾಗಿದೆ.

Leave a Reply

Top