ಜಿಲ್ಲಾ ಯೋಜನಾ ಸಮಿತಿ ರಚನೆ : ಮತದಾರರ ಪಟ್ಟಿ ಮತ್ತು ವೇಳಾಪಟ್ಟಿ ಪ್ರಕಟ

  ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ ೯೩ ಪ್ರಕರಣ ೩೧೦ ರ ಪ್ರಕಾರ ಜಿಲ್ಲಾ ಯೋಜನಾ ಸಮಿತಿಗೆ ಪಂಚಾಯತ್ ರಾಜ್ ನಿಯಮಗಳ ಪ್ರಕಾರ ಕೊಪ್ಪಳ ಜಿಲ್ಲಾ ಯೋಜನಾ ಸಮಿತಿಯ ಸ್ಥಳೀಯ ಸಂಸ್ಥೆಗಳ ಮತ ಕ್ಷೇತ್ರದ ಚುನಾವಣಾ ವೇಳಾ ಪಟ್ಟಿ ಪ್ರಕಟವಾಗಿದೆ.
ಚುನಾಯಿಸಬೇಕಾದ ವ್ಯಕ್ತಿಗಳ ಸಂಖ್ಯೆ: ೧೦, ನಾಮಪತ್ರ ಸ್ವೀಕಾರ ನ. ೨೪ ರಿಂದ ಡಿ. ೦೧ ರವರೆಗೆ ರವರೆಗೆ ಪ್ರತಿ ದಿನ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೩ ರವರೆಗೆ.  ನಾಮ ಪತ್ರ ಸ್ವೀಕರಿಸುವ ಸ್ಥಳ : ಮುಖ್ಯ ಯೋಜನಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಪಂಚಾಯತ್ ಕೊಪ್ಪಳ, ನಾಮಪತ್ರ ಸ್ವೀಕರಿಸುವ ಅಧಿಕಾರಿಗಳು : ಸಹಾಯಕ ಚುನಾವಣಾಧಿಕಾರಿಯಾದ ಮುಖ್ಯ ಯೋಜನಾಧಿಕಾರಿಗಳು, ಜಿಲ್ಲಾ ಪಂಚಾಯತಿ ಕೊಪ್ಪಳ. ನಾಮಪತ್ರ ಪರಿಶೀಲನೆ ಡಿ. ೦೨ ರಂದು ನಡೆಯಲಿದೆ.  ನಾಮಪತ್ರ ಹಿಂತೆಗೆದುಕೊಳ್ಳಲು ಡಿ. ೦೫ ರಂದು ಮಧ್ಯಾಹ್ನ ೩ ಗಂಟೆಯವರೆಗೆ ಅವಕಾಶವಿರುತ್ತದೆ. ಮತದಾನ ಡಿ. ೦೯ ರ ಬೆಳಿಗ್ಗೆ ೮ ಗಂಟೆಯಿಂದ ಮಧ್ಯಾಹ್ನ ೩ ಗಂಟೆಯವರೆಗೆ ಜಿಲ್ಲಾ ಪಂಚಾಯತ್‌ನ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ನಡೆಯಲಿದೆ.  ಮತ ಎಣಿಕೆ ಡಿ. ೯ ರ ಸಂಜೆ ೪ ಗಂಟೆಯಿಂದ ನಡೆಯಲಿದೆ.  
ಜಿಲ್ಲಾ ಯೋಜನಾ ಸಮಿತಿಯ ಚುನಾವಣೆಗೆ ಸ್ಥಳೀಯ ಸಂಸ್ಥೆಗಳಾದ ಕೊಪ್ಪಳ, ಗಂಗಾವತಿ ನಗರಸಭೆ, ಕುಷ್ಟಗಿ ಪುರಸಭೆ ಹಾಗೂ ಯಲಬುರ್ಗಾ ಪಟ್ಟಣ ಪಂಚಾಯತಿಗಳ ಸದಸ್ಯರು ಮತದಾರರಾಗಿರುತ್ತಾರೆ ಎಂದು ಜಿಲ್ಲಾ ಪಂಚಾಯತಿ ಜಿಲ್ಲಾ ಯೋಜನಾ ಸಮಿತಿ ಚುನಾವಣಾಧಿಕಾರಿ ಹಾಗೂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಕೃಷ್ಣ ಡಿ.ಉದಪುಡಿ ತಿಳಿಸಿದ್ದಾರೆ.  

Leave a Reply