You are here
Home > Koppal News > ನ. ೧೭ ರಂದು ಕೊಪ್ಪಳದಲ್ಲಿ ಅಣುಕು ಸಂಸತ್ ಅಧಿವೇಶನ

ನ. ೧೭ ರಂದು ಕೊಪ್ಪಳದಲ್ಲಿ ಅಣುಕು ಸಂಸತ್ ಅಧಿವೇಶನ

ಕೊಪ್ಪಳ ನ. ):  ಸಾರ್ವಜನಿಕ ಶಿಕ್ಷಣ ಇಲಾಖೆಯು ೨೦೧೧-೧೨ ನೇ ಸಾಲಿನಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಯುವ ಅಣುಕು ಸಂಸತ್ ಅಧಿವೇಶನವನ್ನು ನ. ೧೭ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಕೊಪ್ಪಳದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.
ಅಣುಕು ಸಂಸತ್ ಅಧಿವೇಶನ ಕಾರ್ಯಕ್ರಮದ ತೀರ್ಪುಗಾರರಾಗಿ ಅಪರ ಪ್ರಾರೂಪಕಾರ ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನಾ ಇಲಾಖೆಯ ಸರ್ಕಾರದ ಅಪರ ಕಾರ್ಯದರ್ಶಿ ಬಿ.ಬಿ. ಪತ್ತಾರ್ ಅವರು ಭಾಗವಹಿsಸುವರು. ಕಾರ್ಯಕ್ರಮದಲ್ಲಿ ಸಂಬಂಧಪಟ್ಟ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸುವರು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಟೇಲಿಂಗಾಚಾರ್  ತಿಳಿಸಿದ್ದಾರೆ.

Leave a Reply

Top