ಜೂ.೦೧ ರಂದು ಬಳ್ಳಾರಿಯಲ್ಲಿ ಗುಲಬರ್ಗಾ ವಲಯ ಮಟ್ಟದ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಕಾರ್ಯಾಗಾರ

 ಅಲ್ ಹಮೀನ ಶಿಕ್ಷಣ ಸಂಸ್ಥೆ ಬೆಂಗಳೂರು ವತಿಯಿಂದ ಗುಲಬರ್ಗಾ ವಿಭಾಗ ಮಟ್ಟದ ಬೀದರ, ಗುಲಬರ್ಗಾ, ರಾಯಚೂರು, ಯಾದಗಿರಿ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಕಾರ್ಯಾಗಾರ ಬಳ್ಳಾರಿ ನಗರದ ಮೋತಿ ಸರ್ಕಲ್ ಬಳಿ ಇರುವ ಮುಸ್ಲಿಂ ಶಾದಿಮಹಲ್‌ನಲ್ಲಿ ಜೂ.೦೧ ರ ರವಿವಾರ ಒಂದು ದಿನದ ಕಾರ್ಯಾಗಾರ ಜರುಗಲಿದೆ.
ಈ ಕಾರ್ಯಾಗಾರದ ಉದ್ಘಾಟನೆಯನ್ನು ಅಲ್ ಹಮೀನ ಶಿಕ್ಷಣ ಸಂಸ್ಥೆ ಬೆಂಗಳೂರಿನ ಅಧ್ಯಕ್ಷ ಅಲ್ ಹಾಜ್ ಡಾ|| ಮಮ್ತಾಜ್ ಅಹ್ಮದ್ ಖಾನ ಸಾಹೇಬರವರು ನೆರವೇರಿಸಲಿದ್ದಾರೆ. ಕರ್ನಾಟಕ ರಾಜ್ಯ ಹಜ್ ಕಮೀಟಿಯ ಮಾಜಿ ಅಧ್ಯಕ್ಷ ಅಲ್ ಹಾಜ್ ಗೌಸ್ ಬಾಷಾ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಾಗಾರದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸುಬಾನ್ ಷರೀಫ್ ಮತ್ತಿತರರು ಪಾಲ್ಗೊಂಡು ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಸಮಸ್ಯೆ, ಅದರ ಪರಿಹಾರ, ಸರಕಾರದಿಂದ ಸಿಗಬಹುದಾದ ಸಹಾಯ, ಸೌಕರ್ಯ ಇತ್ಯಾದಿಗಳ ಬಗ್ಗೆ ಈ ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. 
ಗುಲಬರ್ಗಾ ವಿಭಾಗ ಮಟ್ಟದ ಬೀದರ, ಗುಲಬರ್ಗಾ, ರಾಯಚೂರು, ಯಾದಗಿರಿ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಕಾರ್ಯಾಗಾರದಲ್ಲಿ ಪಾಲ್ಗೊಂಡು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಹಾಗೂ ಈ ಕಾರ್ಯಾಗಾರವನ್ನು ಯಶಸ್ವಿಗೊಳಿಸುವಂತೆ ಮಹ್ಮದ್ ಗೌಸ್ ಬಾಷಾ  ಅಲಿಯಾಸ್ ದಾದಾ, ಸಂಸ್ಥೆಯ ಜಂಟಿ ಕಾರ್ಯದರ್ಶಿ ಸಯ್ಯದ್ ಮಹೆಬೂಬ ಅಲಿ, ಜಿಯಾವುದ್ದೀನ್ ಹಾಗೂ ಸಯ್ಯದ್ ಷಾ ಬಾಕರರವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿ ಈ ಭಾಗದ ಎಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳನ್ನು ಸ್ವಾಗತಿಸಿದ್ದಾರೆ.

Leave a Reply