ಪುಸ್ತಕ ಬಹುಮಾನಕ್ಕಾಗಿ ಕೃತಿಗಳ ಆಹ್ವಾನ.

ಕೊಪ್ಪಳ,
ಆ.೦೭ ಕರ್ನಾಟಕ ಸಾಹಿತ್ಯ ಅಕಾಡೆಮಿಂದ ಪ್ರತಿ ವರ್ಷದಂತೆ ೨೦೧೪ನೇ
ವರ್ಷದ ಪುಸ್ತಕ ಬಹುಮಾನ (ದತ್ತಿ ನಿಧಿ ಬಹುಮಾನ ಒಳಗೊಂಡಂತೆ) ಯೋಜನೆಗಾಗಿ ವಿವಿಧ
ಪ್ರಕಾರಗಳ ಕನ್ನಡ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.
     ಕಾವ್ಯ, ಕಾದಂಬರಿ,
ಸಣ್ಣಕತೆ, ನಾಟಕ, ಲಲಿತ ಪ್ರಬಂಧ(ಹರಟೆ ಮತ್ತು ವಿನೋದ ಸಾಹಿತ್ಯ ಸೇರಿ), ಪ್ರವಾಸ
ಸಾಹಿತ್ಯ, ಜೀವನಚರಿತ್ರೆ ಅಥವಾ ಆತ್ಮಕಥೆ, ಸಾಹಿತ್ಯ ವಿಮರ್ಶೆ(ಸಾಹಿತ್ಯ ಚರಿತ್ರೆ,
ಸಾಹಿತ್ಯ ತತ್ವ ಮತ್ತು ಸೌಂದರ್ಯ ಮೀಮಾಂಸೆ ಸೇರಿ), ಗ್ರಂಥ ಸಂಪಾದನೆ(ಪ್ರಾಚೀನ ಕೃತಿಗಳ
ಸಂಪಾದನೆ), ಮಕ್ಕಳ ಸಾಹಿತ್ಯ, ವಿಜ್ಞಾನ ಸಾಹಿತ್ಯ(ಭೌತ, ರಸಾಯನ, ಗಣಿತ, ಪ್ರಾಣಿ, ಸಸ್ಯ,
ಇಂಜನೀಯರಿಂಗ್, ವೈದ್ಯ, ಭೂ, ಖಗೋಳ, ಗೃಹ ವಿಜ್ಞಾನ, ಪರಿಸರ ಇತ್ಯಾದಿ),
ಮಾನವಿಕಗಳು(ಇತಿಹಾಸ, ರಾಜಕೀಯ ಶಾಸ್ತ್ರ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಮನಃಶಾಸ್ತ್ರ,
ಭಾಷಾಶಾಸ್ತ್ರ, ಶಿಕ್ಷಣ, ವಾಣಿಜ್ಯ, ಕಾನೂನು, ಗ್ರಂಥಭಂಡಾರ ವಿಜ್ಞಾನ, ಸಮೂಹ ಸಂವಹನ,
ಧಾರ್ಮಿಕ, ದಾರ್ಶನಿಕ), ಸಂಶೋಧನೆ(ಕನ್ನಡ ಭಾಷೆ ಮತ್ತು ಸಂಸ್ಕೃತಿಗಳಿಗೆ ಸಂಬಂಧಿಸಿದ
ಸಂಶೋಧನೆ), ಅನುವಾದ-೧ (ಕಾದಂಬರಿ, ಕಾವ್ಯ, ಸಣ್ಣಕತೆ, ನಾಟಕ, ಲಲಿತ ಪ್ರಬಂಧ, ಪ್ರವಾಸ
ಸಾಹಿತ್ಯ, ಜೀವನಚರಿತ್ರೆ ಇತ್ಯಾದಿ ಸೃಜನಶೀಲ ಕೃತಿಗಳು), ಅನುವಾದ-೨ (ಶಾಸ್ತ್ರ
ಸಾಹಿತ್ಯ, ಸಾಹಿತ್ಯ ವಿಮರ್ಶೆ ಇತ್ಯಾದಿ ಸೃಜನೇತರ ಕೃತಿಗಳು), ಸಂಕೀರ್ಣ (ಯಾವುದೇ
ಪ್ರಕಾರಕ್ಕೆ ಹೊಂದಿಕೊಳ್ಳದ ವಿಶಿಷ್ಟ ಕೃತಿಗಳನ್ನು ಈ ಪ್ರಕಾರದಲ್ಲಿ ಬಹುಮಾನಕ್ಕೆ
ಪರಿಗಣಿಸಲಾಗುವುದು).  ಲೇಖಕರ ಮೊದಲ ಸ್ವತಂತ್ರ ಕೃತಿಗೆ ಬಹುಮಾನ: ೨೦೧೪ ರಲ್ಲಿ
ಪ್ರಕಟವಾದ ಹೊಸ ಬರಹಗಾರರ ಮೊದಲ ಸ್ವತಂತ್ರ ಕೃತಿಗೆ ಐದು ಸಾವಿರ ರೂಪಾಯಿಗಳ ಬಹುಮಾನ
ನೀಡಲಾಗುತ್ತಿದ್ದು, ಲೇಖಕರ ಮೊದಲ ಕೃತಿಯೆಂದು ಖಾತರಿಪಡಿಸುವ ದೃಢೀಕರಣ ಪತ್ರದೊಂದಿಗೆ
ಪುಸ್ತಕದ ಒಂದು ಪ್ರತಿಯನ್ನು ಕಳುಹಿಸಬೇಕು.
ಕನ್ನಡದಿಂದ ಇಂಗ್ಲೀಷಿಗೆ
ಅನುವಾದ(ಅಮೇರಿಕನ್ನಡ ದತ್ತಿನಿಧಿ ಬಹುಮಾನ): ಅಮೇರಿಕಾ ಕನ್ನಡಿಗರ ಹಾಗೂ ಕನ್ನಡ ಸಂಘಗಳ
ಬಹುಮಾನ ಯೋಜನೆ ನಿಧಿಯ ವತಿಯಿಂದ ಕನ್ನಡದಿಂದ ಇಂಗ್ಲೀಷ್ ಭಾಷೆಗೆ ಅನುವಾದಗೊಂಡಿರುವ ಒಂದು
ನೂರು ಪುಟಗಳಿಗೆ ಕಡಿಮೆಯಿಲ್ಲದ ಸೃಜನಾತ್ಮಕ ಕೃತಿಗೆ ಐದು ಸಾವಿರ ರೂಪಾಯಿಗಳ ವಿಶೇಷ
ಬಹುಮಾನವನ್ನು ನೀಡಲಾಗುವುದು.   ಈ ಮೇಲಿನ ಪ್ರಕಾರಗಳಲ್ಲಿ ವಿಮರ್ಶಕರು ಆಯ್ಕೆ
ಮಾಡುವ ಒಂದು ಕೃತಿಗೆ ಬಹುಮಾನ ನೀಡಲಾಗುವುದು. ಬಹುಮಾನಕ್ಕೆ ಸಲ್ಲಿಸುವ ಕೃತಿಗಳು ೨೦೧೪ ರ
ಜನವರಿ ೦೧ ರಿಂದ ೨೦೧೪ರ ಡಿಸೆಂಬರ್ ೩೧ ರೊಳಗೆ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರುವ
ಕೃತಿಗಳಾಗಿರಬೇಕು. ಪುಸ್ತಕಗಳನ್ನು ಸಲ್ಲಿಸಲಿಚ್ಛಿಸುವವರು ಪುಸ್ತಕಗಳ ಒಂದೊಂದು
ಪ್ರತಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, ೨ನೇ ಮಹಡಿ,
ಜೆ.ಸಿ.ರಸ್ತೆ, ಬೆಂಗಳೂರು-೫೬೦೦೦೨ ಇವರಿಗೆ ರಿಜಿಸ್ಟರ್‍ಡ್ ಅಂಚೆ, ಕೊರಿಯರ್ ಮೂಲಕ ಅಥವಾ
ಖುದ್ದಾಗಿ ಸೆಪ್ಟಂಬರ್ ೧೫ ರೊಳಗಾಗಿ ಸಲ್ಲಿಸಬಹುದಾಗಿದೆ. ಕಳುಹಿಸಲ್ಪಡುವ ಕೃತಿಯು ಮೇಲೆ
ತಿಳಿಸಿದ ೧೮ ಪ್ರಕಾರಗಳಲ್ಲಿ ಯಾವ ಸಾಹಿತ್ಯ ಪ್ರಕಾರಕ್ಕೆ ಸೇರುತ್ತದೆ ಎನ್ನುವುದನ್ನು
ಸ್ಪಷ್ಟವಾಗಿ ಪುಸ್ತಕದ ಶಿರ್ಷಿಕೆ ಪುಟದಲ್ಲಿ ಬರೆದಿರಬೇಕು. ಹೆಚ್ಚಿನ ಮಾಹಿತಿಗಾಗಿ
ಅಕಾಡೆಮಿಯ ವೆಬ್‌ಸೈಟ್:
www.karnatakasahityaacademy.org
ಗೆ ಭೇಟಿ
ನೀಡಬಹುದಾಗಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಸಿ.ಹೆಚ್.ಭಾಗ್ಯ ತಿಳಿಸಿದ್ದಾರೆ.

Leave a Reply