ಗಣೇಶೋತ್ಸವ ಶಾಂತಿಪಾಲನಾ ಸಭೆಯ ನಿರ್ಣಯಗಳು.

ಕೊಪ್ಪಳ, ಸೆ.೧೦
(ಕ ವಾ) ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಕೊಪ್ಪಳದಲ್ಲಿ ಗಣೇಶ
ಹಬ್ಬವನ್ನು ಐದು ದಿನ ಮಾತ್ರ ಆಚರಿಸುವಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ
ಇತ್ತೀಚೆಗೆ ಜರುಗಿದ ಶಾಂತಿಪಾಲನಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು
ಜಿಲ್ಲಾಧಿಕಾರಿ ರಮಣದೀಪ್ ಚೌದರಿ ಅವರು ಸಭೆಯ ನಡವಳಿಯಲ್ಲಿ ತಿಳಿಸಿದ್ದಾರೆ.
    
ಸೆ.೧೭ ರಿಂದ ಜಿಲ್ಲಾದ್ಯಂತ ಆಚರಿಸಲ್ಪಡುತ್ತಿರುವ ಗೌರಿ-ಗಣೇಶ ಹಬ್ಬದ ಪೂರ್ವಾಬಾವಿಯಾಗಿ
ಇತ್ತೀಚೆಗೆ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ಶಾಂತಿ
ಪಾಲನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ರಮಣದೀಪ ಚೌಧರಿ
ಮಾತನಾಡಿ ಸೆ.೧೭ ರಂದು ಗಣೇಶ ಪ್ರತಿಷ್ಠಾ
     ಗಣೇಶ ಮೂರ್ತಿಗಳ ಮೆರವಣಿಗೆ ಮಾರ್ಗ ನಿಗದಿಪಡಿಸುವ
ಹಿನ್ನೆಲೆಯಲ್ಲಿ ನಗರದ ಗುಂಡಿ, ತೆಗ್ಗು ಇದ್ದಲ್ಲಿ ಅದನ್ನು ಮುಚ್ಚಿಸಿ, ನಗರದ ಮುಖ್ಯ
ಬೀದಿಗಳಲ್ಲಿ ಶೇಖರಣೆಯಾಗಿರುವ ಕಸವನ್ನು ಆಗಿಂದಾಗ್ಗೆ ತೆಗೆಸುವಂತೆ ಮತ್ತು ದಾರಿ
ದೀಪಗಳನ್ನು ಸರಿಪಡಿಸುವಂತೆ ಹಾಗೂ ಗಣೇಶ ಹಬ್ಬದ ಪ್ರಯುಕ್ತ ನಗರದಲ್ಲಿ ನೀರಿನ ವ್ಯವಸ್ಥೆ,
ಬೆಳಕಿನ ವ್ಯವಸ್ಥೆ, ಸ್ವಚ್ಛತೆ ಕಾಪಾಡುವಂತೆ ನಗರಸಭೆ ಪೌರಾಯುಯಕ್ತರಿಗೆ
ಸೂಚಿಸಿದ್ದಾರೆ. ಜೆಸ್ಕಾಂ ಇಲಾಖೆ ಪರವಾನಿಗೆ ಪಡೆಯದೇ ಅಕ್ರಮವಾಗಿ ವಿದ್ಯುತ್ ಬಳಕೆ
ಮಾಡದಂತೆ ಹಾಗೂ ವಿದ್ಯುತ್ ಲೈನನ್ನು ಗಣೇಶ ಪ್ರತಿಷ್ಠಾನದ ಛತ್ತಿಗೆ ಅಂತರ ಹೊಂದಿರುವಂತೆ,
ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸುರಕ್ಷತೆಯ ಬಗ್ಗೆ ಎಚ್ಚರ ವಹಿಸುವಂತೆ ಸಹ
ಸಮಿತಿಗಳ ಸದಸ್ಯರಿಗೆ ತಿಳಿಸಿದರು. ಗಣೇಶ ಮೂರ್ತಿ ಮೆರವಣಿಗೆ ಸಮಯದಲ್ಲಿ ನಗರದ ಮಸೀದಿ,
ಮಂದಿರಗಳಲ್ಲಿ ಯಾವುದೇ ತರಹದ ಅಹಿತಕರ ಘಟನೆಗಳು ಜರುಗದಂತೆ ಶಾಂತಿ ಕಾಪಾಡಲು ಸಮಿತಿಗಳ
ಸದಸ್ಯರುಗಳಿಗೆ ತಿಳಿಸಿದರು. ಗಣೇಶ ಮೂರ್ತಿ ಪ್ರತಿಷ್ಠಾಪನೆ ದಿನದಿಂದ ವಿಸರ್ಜನೆ
ದಿನದವರೆಗೆ ದೊಡ್ಡಪ್ರಮಾಣದ ಸಿಡಿಮದ್ದನ್ನು ಹಾರಿಸದಿರುವಂತೆ ಅವರು ಮನವಿ ಮಾಡಿದರು.
ಕೆರೆ ಬಾವಿಗಳಲ್ಲಿ ಆಗಬಹುದಾದ ಮಾಲಿನ್ಯತೆ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು
ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮಾಡಿದ ಗಣೇಶ ಮೂರ್ತಿಗಳನ್ನು ಬಳಸದೇ, ಮಣ್ಣಿನಿಂದ
ಮಾಡಿದ ಮೂರ್ತಿಗಳನ್ನು ಬಳಸುವಂತೆ ಅವರು ತಿಳಿಸಿದರು.
     ರಾಜ್ಯಾದ್ಯಂತ ಬರಗಾಲ
ಆವರಿಸಿದ್ದು, ಜಿಲ್ಲೆಯಲ್ಲಿರುವ ಎಲ್ಲಾ ನೀರಿನ ಮೂಲಗಳ ನೀರಿನ ಮಟ್ಟ ಕಡಿಮೆಯಾಗಿದೆ. ಈ
ಹಿನ್ನೆಲೆಯಲ್ಲಿ ದೊಡ್ಡ ಗಣೇಶ ಮೂರ್ತಿಗಳನ್ನು ವಿಸರ್ಜಿಸುವುದು ತ್ರಾಸದಾಯಕ. ಆದ್ದರಿಂದ
ಚಿಕ್ಕ ಚಿಕ್ಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ಅವರು ಸಲಹೆ ನೀಡಿದರು.
    
ಜಿಲ್ಲಾ ಪೊಲೀಸ್ ಅಧೀಕ್ಷಕ ತ್ಯಾಗರಾಜನ್ ಪ್ರಾಸ್ತಾವಿಕವಾಗಿ ಮಾತನಾಡಿ, ಗೌರಿ ಗಣೇಶ
ಹಬ್ಬವನ್ನು ಶಾಂತತೆಯಿಂದ, ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಆಚರಿಸಲು ಸಾರ್ವಜನಿಕರು
ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ
ಎಂದು ಸಭೆಯ ನಡವಳಿಯಲ್ಲಿ ತಿಳಿಸಲಾಗಿದೆ.

ಪನೆಯನ್ನು ಮಾಡಲು ಗಣೇಶೊತ್ಸವ ಸಮಿತಿಯವರು
ಪರವಾಣಿಗೆಯನ್ನು ಏಕಗವಾಕ್ಷಿ ವಿಧಾನದ ಮೂಲಕ ಪಡೆಯಬೇಕು ಹಾಗು ಈ ಕುರಿತು ಸಂಬಂಧಿಸಿದ
ಪೊಲೀಸ್ ಠಾಣೆಯಲ್ಲಿ ಮನವಿಗಳನ್ನು ಸಲ್ಲಿಸಬೇಕು. ಈ ಮನವಿಗಳನ್ನು ೨೪ ರಿಂದ ೪೮
ಗಂಟೆಗಳೊಳಗಾಗಿ ಪರಿಶೀಲನೆ ಕೈಗೊಂಡು ನಗರಸಭೆ ಹಾಗೂ ಜೆಸ್ಕಾಂ ಸಹಯೋಗದೊಂದಿಗೆ ಪರವಾನಿಗೆ
ನೀಡುವ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು. ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಗಣೇಶ
ಹಬ್ಬವನ್ನು ಎಲ್ಲ ಕೋಮಿನವರು ಸೇರಿ ಶಾಂತಿಯುತವಾಗಿ ಆಚರಿಸಲು ಸಹಕರಿಸಬೇಕು. ಪೊಲೀಸ್
ಇಲಾಖೆ, ಸಾರ್ವಜನಿಕರಿಗೆ ಗಣೇಶ ವಿಸರ್ಜನೆ ಮಾಡುವುದಕ್ಕೆ ಸಂಪೂರ್ಣ ಅನುಕೂಲಕರ ವಾತಾವರಣ
ನಿರ್ಮಾಣ ಮಾಡಿಕೊಡಬೇಕು. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದವರನ್ನು ಕಠಿಣ
ಶಿಕ್ಷೆಗೆ ಗುರಿಪಡಿಸಲಾಗುವುದು. ಈ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ನಗರದ ಎಲ್ಲಾ
ಹಿರಿಯ ನಾಗರೀಕರ ಹಾಗೂ ಗಣ್ಯರ ಸಹಕಾರ ಅತ್ಯಂತ ಪ್ರಮುಖವಾಗಿದೆ ಎಂದು ಅಭಿಪ್ರಾಯಪಟ್ಟ
ಅವರು ಯಾವುದೇ ಸಮಯದಲ್ಲಿ ಸಂಪರ್ಕಿಸಿದರೂ ಜಿಲ್ಲಾ ಪೊಲೀಸ್ ಇಲಾಖೆ ತಕ್ಷಣ ಸ್ಪಂದಿಸಬೇಕು
ಎಂದು ಕೋರಿದರು.  

Please follow and like us:
error