fbpx

೧೨ ರಂದು ಪುಣ್ಯಸ್ಮರಣೆ ನಟ ರಾಜೇಶ, ಲಕ್ಷ್ಮೀ ಶ್ರೀನಿವಾಸ ಗುರೂಜಿ ಭಾಗಿ.

ಕೊಪ್ಪಳ. ಜ. ೧೦. ನಗರದ ಶ್ರೀ ಸಹಸ್ರಾಂಜನೇಯ ದೇವಸ್ಥಾನ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಆಧ್ಯಾತ್ಮಿಕ ಗುರು ಶ್ರೀ ಶೇಖಣ್ಣಾಚಾರ್ಯರವರ ೯ ನೇ ಪುಣ್ಯಸ್ಮರಣೆ ಮಂಗಳವಾರ ಜನವರಿ ೧೨ ರಂದು ಬೆಳಿಗ್ಗೆ ೧೦ ಗಂಟೆಯಿಂದ ನಡೆಯಲಿದೆ ಎಂದು ಸಂಘಟಕ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
    ಈ ಕುರಿತು ಪ್ರಕಟಣೆ ನೀಡಿರುವ ಅವರು, ಶ್ರೀ ಗವಿಸಿದ್ಧೇಶ್ವರ ಶ್ರೀಗಳು, ಶ್ರೀ ಸಿರಸಪ್ಪಯ್ಯಮಠ ಶ್ರೀಗಳು, ಶ್ರೀ ಲೇಬಗೇರಿಮಠದ ಶ್ರೀಗಳು, ಶ್ರೀ ಗಿಣಗೇರಿ ಮಠದ ಶ್ರೀಗಳು ಹಾಗೂ ಶ್ರೀ ರಾಮಕೃಷ್ಣಾಶ್ರಮದ ಶ್ರೀಗಳ ಸಾನಿಧ್ಯದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರದ ಸಂಸ್ಥಾಪಕರು, ಮುದ್ರಾ ರಹಸ್ಯ ಖ್ಯಾತಿಯ ಶ್ರೀ ಲಕ್ಷ್ಮೀ ಶ್ರೀನಿವಾಸ ಗುರೂಜಿ ನೆರವೇರಿಸಲಿದ್ದಾರೆ. ಶ್ರೀ ಶೇಖಣ್ಣಾಚಾರ್ಯರವರ ಜೀವನ ಸಾಧನೆ ಕುರಿತ ಆಶೀರ್ವಾಣಿ ಕೃತಿಯನ್ನು ಹಿರಿಯ ಚಲನಚಿತ್ರ ನಟ ಡಾ|| ರಾಜೇಶ ಬೆಂಗಳೂರುರವರು ಬಿಡುಗಡೆ ಮಾಡುವರು, ಅದೇ ರೀತಿ ಶ್ರೀ ಸಹಸ್ರಾಂಜನೇಯ ಸ್ಟಿಕ್ಕರ್
ಬಿಡುಗಡೆಯನ್ನು ಕುಷ್ಟಗಿ ಶಾಸಕ ದೊಡ್‌ಡನಗೌಡ ಪಾಟೀಲ್ ಮಾಡುವರು ಅಧ್ಯಕ್ಷತೆಯನ್ನು ಶಾಸಕ
ಕೆ. ರಾಘವೇಂದ್ರ ಹಿಟ್ನಾಳವಹಿಸುವರು. ಅದೇ ರೀತಿ ಕೊಪ್ಪಳ ನಗರಸಭೆ ಅಧ್ಯಕ್ಷೆ ಬಸಮ್ಮ
ಹಳ್ಳಿಗುಡಿ, ಉಪಾಧ್ಯಕ್ಷ ಬಾಳಪ್ಪ ಬಾರಕೇರ, ಕದರಮಂಡಲಗಿ ಕಾಂತೇಶಸ್ವಾಮಿ ಅರ್ಚಕ
ಹನುಮಂತಪ್ಪ ಪೂಜಾರ ಇತರರು ಭಾಗವಹಿಸುವರು. ಅಂದು ಶ್ರೀ ಆಚಿಜನೇಯನ ಕಾರ್ತಿಕ ಇಳಿಸುವ
ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಉಚಿತ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ
ಖ್ಯಾತ ಸಂಗೀತ ಕಲಾವಿದರಾದ ಪುತ್ತೂರು ನರಸಿಂಹ ನಾಯಕ ಮತ್ತು ತಂಡದಿಂದ ಭಕ್ತಿ ಸಂಗೀತ
ಸುಧೆ ನಡೆಯಲಿದೆ ಹಾಗೂ ಶ್ರೀ ಸಹಸ್ರಾಂಜನೇಯನ ಆರಾಧಕರಾದ ಪ್ರಕಾಶ ಶಿಲ್ಪಿಯವರು ಅಂದು
ತಮ್ಮ ನಿತ್ಯ ಸೇವೆಯ ೩೩೪೪ ನೇ ಆಚಿಜನೇಯನ ಮೂರ್ತಿ ಸೇವೆ ಕೈಗೊಳ್ಳುವರು ಗಿಣಗೇರಿ
ಸುಬ್ಬಣ್ಣಾಚಾರ್ಯರವರ ನೇತೃತ್ವದಲ್ಲಿ ಮಹಾಭಿಷೇಕ ನಡೆಯಲಿದೆ ಹೆಚ್ಚಿನ ಸಂಖ್ಯೆಯಲ್ಲಿ
ಭಕ್ತರು ಪಾಲ್ಗೊಳ್ಳಲು ಕೋರಿದ್ದಾರೆ.

Please follow and like us:
error

Leave a Reply

error: Content is protected !!