ಆಕಾಶವಾಣಿ ಹಬ್ಬ : ೨೧ ರಂದು ಕೊಪ್ಪಳದಲ್ಲಿ ನಾಟಕ

ಕೊಪ್ಪಳ, ೧೯- ಆಕಾಶವಾಣಿಯು ಇದೇ ಮೊದಲ ಬಾರಿಗೆ ದೇಶದಾದ್ಯಂತ ಒಂದು ವಾರಗಳ ಕಾಲ ಆಕಾಶವಾಣಿ ಹಬ್ಬ ಹಮ್ಮಿಕೊಂಡಿದೆ.
ಇದರ ಅಂಗವಾಗಿ ಹೊಸಪೇಟೆ ಆಕಾಶವಾಣಿ ಎಫ್.ಎಂ. ಕೇಂದ್ರವು  ದಿ. ೨೧,ಮಂಗಳವಾರ ಕೊಪ್ಪಳ ನಗರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಸಂಜೆ ೬ ಗಂಟೆಗೆ ಸಾಹಿತ್ಯ ಭವನದಲ್ಲಿ ನಾಟಕ, ಸಮೂಹ ಗೀತೆಗಳ ಗಾಯನ ಜರುಗಲಿವೆ. ನಗರದ ಶ್ರೀಗವಿಸಿದ್ಧೇಶ್ವರ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಕುವೆಂಪು, ಡಾ.ಚಂದ್ರಶೇಖರ ಕಂಬಾರ ಮತ್ತಿತರ ಪ್ರಮುಖ ಕವಿಗಳ ಗೀತೆಗಳ ಸಮೂಹ ಗಾಯನ ಹಮ್ಮಿಕೊಳ್ಳಲಾಗಿದೆ. ಡಾ.ಗಜಾನನ ಶರ್ಮಾ ರಚಿಸಿ,ಮಹದೇವ ಹಡಪದ ನಿರ್ದೇಶಿಸಿರುವ ಹಂಚಿನಮನಿ ಪರಸಪ್ಪ ಎಂಬ ನಾಟಕವನ್ನು ಮರಿಯಮ್ಮನಹಳ್ಳಿಯ ನಾಟ್ಯಕಲಾರಂಗದ ಯುವಕರು ಪ್ರಸ್ತುತ ಪಡಿಸಲಿದ್ದಾರೆ.
ಹಿರಿಯ ಜಾನಪದ ಕಲಾವಿದ ಮಾರೆಪ್ಪ ಮಾರೆಪ್ಪ ದಾಸರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಆಕಾಶವಾಣಿಯ ಭಂಡಾರದಿಂದ ಆಯ್ದ ಅಪರೂಪದ ಭಾವಚಿತ್ರಗಳನ್ನೊಳಗೊಂಡ ಆಕಾಶವಾಣಿ ಆಲ್ಬಂ ಪ್ರದರ್ಶನವೂ ಕೂಡ ಜರುಗಲಿದೆ.
ಶಾಲಾ,ಕಾಲೇಜು ವಿದ್ಯಾರ್ಥಿಗಳು,ಯುವಜನರು, ಕಲಾಸಕ್ತರು, ಸಹೃದಯರೆಲ್ಲರೂ ಆಕಾಶವಾಣಿ ಹಬ್ಬದಲ್ಲಿ ಭಾಗವಹಿಸಿ ಭಾರತದ ಸಾರ್ವಜನಿಕ ಪ್ರಸಾರ ಮಾಧ್ಯಮವನ್ನು ಪ್ರೋತ್ಸಾಹಿಸಬೇಕೆಂದು ಹೊಸಪೇಟೆ ಎಫ್.ಎಂ.ಕೇಂದ್ರದ ಕಾರ್ಯಕ್ರಮ ವಿಭಾಗದ ಸಹಾಯಕ ನಿರ್ದೇಶಕ ಡಾ.ಆನಂದ ವಿ.ಪಾಟೀಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಆಕಾಶಆವಾಣಿ: ಯುವಸ್ಪಂದನ ಪ್ರಸಾರ 
ಕೊಪ್ಪಳ, ೧೯- ನಗರದ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ, ಹೊಸಪೇಟೆ ಆಕಾಶವಾಣಿ ಎಫ್.ಎಂ.ಕೇಂದ್ರ ಇತ್ತೀಚೆಗೆ ಆಯೊಜಿಸಿದ್ದ ಯುವಸ್ಪಂದನ ಕಾರ್ಯಕ್ರಮದ ಧ್ವನಿಮುದ್ರಿತ ಪ್ರಸಾರವು,
ಫೆ.೨೧,ಮಂಗಳವಾರ,ಬೆಳಿಗ್ಗೆ ೮.೩೫ ಕ್ಕೆ ಬಿತ್ತರವಾಗಲಿದೆ.
ಈ ಕಾರ್ಯಕ್ರಮದಲ್ಲಿ ಕೊಪ್ಪಳ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆಯ್ದ ವಿಷಯಗಳ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯ, ಕು.ಭೀಮಾಂಬಿಕಾ ಹಿರೇಮಠ ಹಾಗೂ ಕೀರ್ತಿ ಕುಲಕರ್ಣಿಯವರ ಸುಗಮ ಸಂಗೀತ ಮೂಡಿಬರಲಿವೆ. 
ಹೆಸರಾಂತ ವೈದ್ಯ ಡಾ.ಮಲ್ಲಿಕಾರ್ಜುನ ಬಿ.ರಾಂಪೂರ,ಪ್ರಾಚಾರ್ಯ ಎಸ್.ಎಲ್.ಮಾಲಿಪಾಟೀಲ ಅವರು ಯುವ ಸ್ಪಂದನ ಮತ್ತು ಆಕಾಶವಾಣಿಯ ಕುರಿತು ಮಾಡಿದ ಭಾಷಣದ ಆಯ್ದ ಭಾಗಗಳೂ ಕೂಡ ಪ್ರಸಾರವಾಗಲಿವೆ.
ಆಸಕ್ತರು ಎಫ್.ಎಂ.ಬ್ಯಾಂಡ್ ಕಂಪನಾಂಕ ೧೦೦.೫ ಮೆಗಾ ಹರ್ಟ್ಸಗಳಲ್ಲಿ ಯುವಸ್ಪಂದನ ಕಾರ್ಯಕ್ರಮ ಕೇಳಬಹುದು  ಎಂದು ಹೊಸಪೇಟೆ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ವಿಭಾಗದ ಸಹಾಯಕ ನಿರ್ದೇಶಕ ಡಾ.ಆನಂದ.ವಿ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error