ದಲಿತರಿಗೆ ಜಮೀನು ಕೊಡುವಂತೆ ಮಲ್ಲಾಜಮ್ಮ ನವರಿಗೆ ಡಿಎಸ್ ಎಸ್ ಮನವಿ

 ಕರ್ನಾಟಕ ರಾಜ್ಯ ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷರು ಮಲ್ಲಾಜಮ್ಮ ನವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ  ಭೀಮವಾದ ಸಂಘಟನೆಯವರು  ಮನವಿಯನ್ನು ಸಲ್ಲಿಸಿದರು.
    ಕೊಪ್ಪಳ ಪ್ರವಾಸಿ ಮಂದಿರದಲ್ಲಿ ಕೊಪ್ಪಳ ಜಿಲ್ಲೆಯ ಹಿಂದೂಳಿದ ವರ್ಗಗಳ ಜನಾಂಗದ ಮನವಿಯನ್ನು ಕರ್ನಾಟಕ ರಾಜ್ಯ ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷರು ಮಲ್ಲಾಜಮ್ಮ ನವರಿಗೆ ಸಲ್ಲಿಸಲಾದ ಮನವಿಯಲ್ಲಿ  ಕೊಪ್ಪಳ ಜಿಲ್ಲೆಯಲ್ಲಿ ಅಂಬೇಡ್ಕರ್ ಅಭಿವೃದ್ದಿ ನಿಗಮದ ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ ಕುರಿ ಸಾಗಾಣಿಕೆ ಹೈನುಗಾರಿಕೆ ಟ್ರಾವೇಲ್ಸ್ ಹಾಗೂ ಕಿರಾಣಿ ಅಂಗಡಿ ಇನ್ನೂ ಅನೇಕ ಸ್ವಯಂ ಉದ್ಯೋಗಗಳಿಗೆ ಹಾಗೂ ಪ್ರತಿ ದಲಿತ ಕುಟುಂಬಕ್ಕೆ ಜಮೀನು ಇಲ್ಲದವರಿಗೆ ೨ ಎಕರೆ ಜಮಿನು ಕೊಡುವಂತೆ ಮನವಿಯನ್ನು ಸಲ್ಲಿಸಲಾಯಿತು. ಇಲಾಖೆಯ ವತಿಯಿಂದ ಪರಿಶೀಲಿಸಿ ಕೊಡಬೇಕೆಂದು ಮನವಿ ಮಾಡಲಾಯಿತು.  
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಹಳೆಮನಿ, ಮಾರುತಿ ಚಾಮಲಾಪೂರ, ಪಿ.ಲಕ್ಷ್ಮಯ್ಯ, ಪಂಪಾಪತಿ ಜಾಲಿಹಾಳ, ರೇಣುಕಮ್ಮ, ಜಯಶ್ರೀ, ಮಾರುತಿ ಅಂಬಳಿ, ರಾಮಚಂದ್ರಪ್ಪ ರಮೇಶ ದೊಡ್ಡಮನಿ, ಮಲ್ಲಿಕಾರ್ಜುನ, ಶ್ರೀಕಾಂತ ಚೆನ್ನಾಳ, ನರಸಪ್ಪ ಇನ್ನೂ ಅನೇಕ ಕಾರ್ಯಕರ್ತರು ಭಾಗವಹಿಸಿ ಮನವಿಯನ್ನು ನೀಡಲಾಯಿತು. 

Leave a Reply