ಎಲ್ಲಾ ವರ್ಗದ ಬಡಜನರಿಗೆ ಸುಸಜ್ಜಿತ ಸಮುದಾಯ ಭವನ ನಿರ್ಮಾಣ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ:೦೩, ಶುಕ್ರವಾರ ನಗರದ ಸಿಂದೋಗಿ ರಸ್ತೆಯ ಪಕ್ಕದಲ್ಲಿರುವ ಜಾಗದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂದಾಜು ಮೂತ್ತ ರೂ.೧ ಕೋಟಿಯ ಬಾಬು ಜಗಜೀವನ ರಾವ್ ಸಮುದಾಯ ಭವನದ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು ಸಮಾಜದ ಎಲ್ಲಾ ವರ್ಗದ ದಿನ ದಲಿತರು, ಹಿಂದುಳಿದ ವರ್ಗದ, ಅಲ್ಪಸಂಖ್ಯಾತರು ಹಾಗೂ ಬಡವರ್ಗದ ಜನರಿಗೆ ತಮ್ಮ ಮಕ್ಕಳ ಮದುವೆ ಮುಂಜೆ ಮತ್ತು ಇನ್ನಿತರ ಸಮಾರಂಭಗಳಿಗೆ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ಮತ್ತು ಆಧುನಿಕದ ಪದ್ದತಿಯ ಸಮುದಾಯ ಭವನಗಳನ್ನು ನಿರ್ಮಾಣ ಮಾಡಲಾಗುವುದು. ಕ್ಷೇತ್ರದಲ್ಲಿ ಎಲ್ಲಾ ಗ್ರಾಮಗಳಿಗೆ ಸಮುದಾಯ ಭವನಗಳನ್ನು ನಿರ್ಮಾಣಮಾಡಿ ಬಡಜನತೆಗೆ ಅನುಕೂಲ ಕಲ್ಪಿಸಲಾಗುವುದು. ಕೊಪ್ಪಳ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಉತ್ತಮ ಗುಣಮಟ್ಟದ ಸಿಸಿ ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಘಟಕಗಳು, ಶಾಲಾ ಕೊಠಡಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಪಶು ಆಸ್ಪತ್ರೆಗಳ ನಿರ್ಮಾಣವು ಬರದಿಂದಸಾಗೀವೆ. ರಾಜ್ಯದ ಜನಪ್ರೀಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು-ಹೆಚ್ಚು ಅನುಧಾನ ನಿಡುತ್ತಿದ್ದು ಇದೂ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಸಹಕಾರಿಯಾಗಿದೆ. ಬರುವ ದಿನಗಳಲ್ಲಿ ಕ್ಷೇತ್ರದ ಬಹು ಬೇಡಿಕೆಯ ಬೇಟಗೇರಿ-ಅಳವಂಡಿ ಹಾಗೂ ಬಹದ್ದೂರಬಂಡಿನವಲ್‌ಕಲ್ ಏತ ನೀರಾವರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವದೆಂದು ಹೇಳಿದರು.

ಈ ಸಂದರ್ಭದಲ್ಲಿ ನಗಸಭೆ ಉಪಾಧ್ಯಕ್ಷ ಬಾಳಪ್ಪ ಬಾರಕೇರ, ಅಮ್ಜದ್ ಪಟೇಲ್, ಅನಿಕೇತ ಅಗಡಿ, ಮುತ್ತುರಾಜ ಕುಷ್ಟಗಿ, ರಾಮಣ್ಣ ಹಳ್ಳಿಗುಡಿ, ರಾಮಣ್ಣ ಹದ್ದಿನ, ಗಾಳೇಪ್ಪ ಪೂಜಾರ, ವಾಹೀದ್ ಸೂಂಪೂರು, ಸಿದ್ರಾಮ ಹೊಸಮನಿ, ನಜೀರ್ ಆದೋಣಿ, ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಶೋಭಾ, ಚಿದಾನಂದ, ನಿರ್ಮೀತಿ ಕೇಂದ್ರದ ಅಭಿಯಂತರರಾದ ಮಹದೇವಪ್ಪ ಉಪಸ್ಥಿತರಿದ್ದರು. 

Leave a Reply