ಗವಿಸಿದ್ದೇಶ್ವರ ಅರ್ಬನ್ ಬ್ಯಾಂಕಿಗೆ ಅಧ್ಯಕ್ಷರಾಗಿ ಗವಿಸಿದ್ದಪ್ಪ ಮುದುಗಲ್, ಉಪಾಧ್ಯಕ್ಷರಾಗಿ ವೀರ ಮಹೇಶ್ವರ ಕೆ.ಕೆ.ಮಠ

ಕೊಪ್ಪಳ,೧೯,ನಗರದ ಪ್ರತೀಷ್ಟಿತ ಗವಿಸಿದ್ದೇಶ್ವರ ಅರ್ಬನ್ ಬ್ಯಾಂಕಿಗೆ ಅತ್ಯಂತ ಕುತೂಹಲ ಕೆರಳಿಸಿದ ಅಧ್ಯಕ-ಉಪಾಧ್ಯಕ್ಷರ ಆಯ್ಕೆ ಇಂದು ಅತ್ಯಂತ ಸರಳ ರೀತಿಯಲ್ಲಿ ಆಯ್ಕೆ ಪ್ರಕ್ರೀಯೆ ನಡೆಯಿತು. ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಗವಿಸಿದ್ದಪ್ಪ ಮುದುಗಲ್, ಉಪಾಧ್ಯಕ್ಷರಾಗಿ ವೀರ ಮಹೇಶ್ವರ ಕೆ.ಕೆ.ಮಠ ಆಯ್ಕೆಯಾದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಆಯ್ಕೆಯಾದ ನೂತನ ಸದಸ್ಯರು ಸಿದ್ದಲಿಂಗಯ್ಯ ಹಿರೇಮಠ, ಶಿವಕುಮಾರ ಶೆಟ್ಟರ, ಗುರುರಾಜ ಹಲಗೇರಿ, ದವಲತ ಸಾಬ್, ಬೋಮಕ್ಕನವರ, ಈಶಪ್ಪ ಅಗಡಿ, ಬಸವರಾಜ ಶಹಪುರು, ಗವಿಸಿದ್ದಪ್ಪ ತಳಕಲ್, ಶ್ರೀಮತಿ ಸುಮಂಗಲಾ ಎಮ್.ಸೋಮಲಾಪುರ, ಶ್ರೀಮತಿ ಜಯಲಕ್ಷ್ಮಿ ರಾಜಶೇಖರ ಆಡೂರು, ಉಪಸ್ಥಿತರಿದ್ದರು.
Please follow and like us:
error