ಸಿಂಡಿಕೇಟ್ ಸದಸ್ಯರಾಗಿ ಪ್ರೊ.ಎಸ್.ಎಲ್.ಮಾಲಿಪಾಟೀಲ

ಕೊಪ್ಪಳ : ನಗರದ ಶ್ರೀಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಎಸ್.ಎಲ್.ಮಾಲಿಪಾಟೀಲ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕವಾಗಿದ್ದಾರೆ. ಇವರ ನೇಮಕಾತಿ ಆದೇಶವನ್ನು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಮಂಜಪ್ಪ ಡಿ.ಹೊಸಮನಿ ಇವರು ದಿನಾಂಕ ೧೧-೦೩-೨೦೧೪ ರಂದು ಹೊರಡಿಸಿದ್ದಾರೆ. ನೂತನ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡ  ಪ್ರೊ.ಎಸ್.ಎಲ್.ಮಾಲಿಪಾಟೀಲರಿಗೆ ಶ್ರೀ ಗ.ವಿ.ವ. ಟ್ರಸ್ಟೀನ ಸೋಲ್ ಟ್ರಸ್ಟಿಗಳಾದ ಶ್ರೀಗವಿಸಿದ್ಧೇಶ್ವರ ಸ್ವಾಮೀಜಿಗಳು ಆಶಿರ್ವದಿಸಿದ್ದಾರೆ. ಕಾರ್ಯದರ್ಶಿಗಳಾದ ಎಸ್.ಮಲ್ಲಿಕಾರ್ಜುನ್, ಸದಸ್ಯರಾದ ಎಸ್.ಆರ್.ನವಲಿಹಿರೇಮಠ,ಸಂಜಯಕೊತಬಾಳ,ಗವಿಸಿದ್ದಪ್ಪ ಆರೇರ್ ಹಾಗೂ ಸಮಸ್ತ ಶಿಕ್ಷಕ/ಶಿಕ್ಷಕೇತರ/ ವಿದ್ಯಾರ್ಥಿಬಳಗ ಅಬಿನಂಧಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
ಅನಂಧನೆಗಳು : ಶ್ರೀಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಎಸ್.ಎಲ್.ಮಾಲಿಪಾಟೀಲ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕವಾಗಿರುವದಕ್ಕೆ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶಿ.ಕಾ.ಬಡೀಗೇರ, ಗೌರವ ಕಾರ್ಯದರ್ಶಿಗಳಾದ ಡಾ.ಪ್ರಕಾಶ ಬಳ್ಳಾರಿ   ಗೌರವ ಕೋಶಾಧ್ಯಕ್ಷರಾದ ಮೈಲಾರಗೌಡಹೊಸಮನಿ ಹಾಗೂ ಸಮಸ್ತ ಕಾರ್ಯಕಾರಿಣಿ ಮಂಡಳಿ ಅಬಿನಂಧಿಸಿದ್ದಾರೆ. 

Related posts

Leave a Comment