ಯಶಸ್ವಿ ೧೨೭ನೇ ಕವಿಸಮಯ : ಮೊ ಯಾನ್ ಸಾಧನೆ ಎಲ್ಲರಿಗೂ ಸ್ಪೂರ್ತಿ ನೀಡುವಂತಹದ್ದು

ಕೊಪ್ಪಳ : ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೧೨೭ನೇ ಕವಿಸಮಯ ಕಾರ್‍ಯಕ್ರಮ ಯಶಸ್ವಿಯಾಗಿ ನಡೆಯಿತು. ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ವಾಚನ ಮಾಡಿದ ಕವನಗಳ ಕುರಿತು ಮಾತನಾಡಿದರು. ಇತ್ತೀಚಿಗೆ ಬೆಳಗಾವಿಯಲ್ಲಿ ನಡೆದ ಸುವರ್ಣಸೌಧ ಉದ್ಘಾಟನೆ ಹಾಗೂ ಜ್ಞಾನಪೀಠ ಪ್ರಶಸ್ತಿ ಪ್ರದಾನ ಕಾರ್‍ಯಕ್ರಮದ ತಮ್ಮ ಅನುಭವ ಹಾಗೂ ನೊಬೆಲ್ ಪ್ರಶಸ್ತಿ ಪಡೆದ ಚೀನಾದ ಸಾಹಿತಿ ಮೊಯಾನ್ ಅವರ ಸಾಹಿತ್ಯದ ಕುರಿತು ಮಾತನಾಡಿದರು. ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ಲದ ದೇಶದ ಇಂತಹ ಸಾಹಿತಿಗೆ ಅದೂ ಅತ್ಯಂತ ಕಡುಬಡತನದಲ್ಲಿ ಹುಟ್ಟಿ ಈ ಮಟ್ಟಕ್ಕೆ ಬೆಳೆದ ಗ್ವಾನ್ ಮೊಯೆಯ ಸಾಧನೆ ಎಲ್ಲರಿಗೆ ಸ್ಪೂರ್ತಿದಾಯಕ ಎಂದರು. 
ಕಾರ್‍ಯಕ್ರಮದ ಆರಂಭದಲ್ಲಿ ಇತ್ತೀಚಿಗೆ ನಿಧನರಾದ ನಗರದ ಖ್ಯಾತ ಹಿರಿಯ ವಕೀಲರಾದ ಎಸ್.ಎ.ಕಬೀರ್ ರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು.
ನಂತರ ನಡೆದ ಕವಿಗೋಷ್ಠಿಯಲ್ಲಿ ಶಾಂತಾದೇವಿ ಹಿರೇಮಠ-ಹಸಿರು, ಡಾ.ಬಸವರಾಜ ಕುಂಪಾ- ಹಾರಬೇಕು, ರೇಣುಕಪ್ಪ- ಹಾಡಿದನೋ.., ಎ.ಪಿ.ಅಂಗಡಿ- ಮಕ್ಕಳ ಕವನ ಕೂಸು ಮರಿ, ವಿಠ್ಠಪ್ಪ ಗೋರಂಟ್ಲಿ- ಹೊನ್ನ ಶೂಲಕ್ಕೇರಿದವರು, ಸಿರಾಜ್ ಬಿಸರಳ್ಳಿ -ಚರಿತ್ರೆಯ ಪುಟಗಳು ಬದಲಾಗುವುದಿಲ್ಲ, ಪುಷ್ಪಲತಾ ಏಳುಬಾವಿ- ಗಜಲ್, ಅಲ್ಲಮಪ್ರಭು ಬೆಟ್ಟದೂರ-ಬೆಂಗಳೂರು ಕಿರುಗವಿತೆಗಳು, ಶಿವಪ್ರಸಾದ ಹಾದಿಮನಿ-ಪ್ರಿಯತಮೆ, ಯು-ರೇಖಾ, ಅನಸೂಯಾ ಜಾಗಿರದಾರ- ಯಾವ ಹಾಡ ಹಾಡಲಿ ಕವನಗಳ ವಾಚನ ಮಾಡಿದರು. 
ನಂತರ ಇನ್ನೊಬ್ಬ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಬಳ್ಳಾರಿಯಲ್ಲಿ ನಡೆಯಲಿರುವ ನಾಡಹಬ್ಬ ಹಾಗೂ ಪುಸ್ತಕಗಳ ಬಿಡುಗಡೆ ಕಾರ್‍ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಕಾರ್‍ಯಕ್ರಮದಲ್ಲಿ ಶಿವಾನಂದ ಹೊದ್ಲೂರ,ರಮೇಶ,ಯಶವಂತ್, ಅಂದಣ್ಣ ಅರಳಿಗಿಡದ, ವೀರಣ್ಣ ಹುರಕಡ್ಲಿ ಹಾಗೂ ಇತರರು ಉಪಸ್ಥಿತರಿದ್ದರು.  ಸ್ವಾಗತವನ್ನು ಬಸವರಾಜ್ ಸಂಕನಗೌಡರ ಮಾಡಿದರೆ, ವಂದನಾರ್ಪಣೆಯನ್ನು ಶಿವಪ್ರಸಾದ ಹಾದಿಮನಿ ಮಾಡಿದರು. ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.
Please follow and like us:
error