ಆಕ್ಷೇಪಾರ್ಹ ಇಂಟರ್‌ನೆಟ್ ಬರಹ ತಡೆದರೆ ತಪ್ಪಲ್ಲ:ಸುಪ್ರೀಂ ಕೋರ್ಟ್‌

 ಹೊಸದಿಲ್ಲಿ, ಆ.18: ಆನ್‌ಲೈನ್‌ನಲ್ಲಿನ ಆಕ್ಷೇಪಾರ್ಹ ಬರಹ- ಚಿತ್ರಗಳನ್ನು ಸರಕಾರ ತಡೆದರೆ ಅದು ಅಭಿವ್ಯಕ್ತಿ ಸ್ವಾತಂತ್ರದ ಉಲ್ಲಂಘನೆಯಾಗುವುದಿಲ್ಲವೆಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ. ಇಂಟರ್ನೆಟ್ ಸೆನ್ಸಾರ್‌ಶಿಪ್‌ನ ಕುರಿತು ಚರ್ಚೆ ನಡೆಯುತ್ತಿರುವ ಈ ಕಾಲದಲ್ಲಿ ನ್ಯಾಯಾಲಯದ ಈ ಅಭಿಪ್ರಾಯ ಭಾರೀ ಮಹತ್ವ ಪಡೆದಿದೆ. ನಿಯಮಗಳ ಬಗ್ಗೆ ಮೇಲ್ನೋಟಕ್ಕೆ ಯಾವುದೇ ತಪ್ಪು ಕಾಣಿಸುತ್ತಿಲ್ಲ. ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಎಲ್ಲೋ ಪ್ರಕಟವಾದ ಯಾವುದೋ ವಿಷಯ, ಮುಖ್ಯವಾಗಿ ಧಾರ್ಮಿಕ ವಿಚಾರಗಳ ಬಗ್ಗೆ ತೀವ್ರ ಕೋಲಾಹಲ ಉಂಟು ಮಾಡುತ್ತದೆ. ಈ ವಿಚಾರವನ್ನು ನಾವು ಸಮಗ್ರವಾಗಿ ನೋಡಬೇಕು ಎಂದು ನ್ಯಾಯಾಲಯ ಹೇಳಿದೆ.
ತಡೆದರೆ ತಪ್ಪಲ್ಲ:ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಯಮ ಗಳನ್ನು ಪ್ರಶ್ನಿಸಿ ಮೌತ್‌ಶಟ್ ಡಾಟ್ ಕಾಮ್ ಎಂಬ ವೆಬ್‌ಸೈಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಯಾವುದೇ ದೂರು ಬಂದ ೩೮ ತಾಸುಗಳೊಳ ಗಾಗಿ ವೆಬ್‌ಸೈಟೊಂದರಲ್ಲಿನ ಆಕ್ಷೇಪಾರ್ಹ ವಿಷಯವನ್ನು ತೆರವುಗೊಳಿಸ ಬೇಕೆಂದು ನಿಯಮ ಹೇಳುತ್ತಿದೆ. ಆದರೆ, ಇದು ಅಭಿವ್ಯಕ್ತಿ ಸ್ವಾತಂತ್ರಕ್ಕೆ ವಿರುದ್ಧವಾಗಿದೆಯೆಂದು ಅದು, ವಾದಿಸಿದೆ.
ಅಂತಿಮ ತೀರ್ಪಿನ ವರೆಗೆ ಈ ಕುರಿತು ಕ್ರಮಕ್ಕೆ ತಡೆ ನೀಡುವಂತೆ ವೆಬ್‌ಸೈಟ್ ಮನವಿ ಮಾಡಿದಾಗ, ಅದು ತಪ್ಪು ಸಂದೇಶ ನೀಡುತ್ತದೆ. ಹೀಗಿದ್ದರೂ ನಾವು ನಿಯಮಗಳನ್ನು ಪ್ರಶ್ನಿಸಿದ ನಿಮ್ಮ ಅರ್ಜಿಯ ವಿಚಾರಣೆ ನಡೆಸುತ್ತಿದ್ದೇವೆ ಹಾಗೂ ಈಗಾಗಲೇ ಈ ಬಗ್ಗೆ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ನ್ಯಾಯಾಲಯ ಹೇಳಿತು  -varthabharati

Leave a Reply