ರೈತರು ಆತ್ಮಸ್ಥೈರ್ಯದಿಂದ ಸಮಸ್ಯೆಗಳನ್ನು ಎದುರಿಸಿ ಉಪವಿಭಾಗಧಿಕಾರಿ ಪವನ್‌ಕುಮಾರ್ ಮಾಲಪಾಟಿ.


ಹೊಸಪೇಟೆ- ನಗರದ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ೬೯ನೇ ಸ್ವಾಂತಂತ್ರೋತ್ಸವ ಧ್ವಜಾರೋಹಣ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಕೃಷಿ ಸಮಸ್ಯೆಯಲ್ಲಿದ್ದು, ರೈತರು ಇದಕ್ಕೆ ಎದೆಗುಂದದೇ ಅದನ್ನು ಎದುರಿಸಬೇಕು. ರೈತರ ಜೊತೆ ಸರ್ಕಾರವಿದ್ದು, ರೈತರ ಸಮಸ್ಯೆಗೆ ಸ್ಪಂದಿಸುವುದು ಎಂದರು. ರೈತರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಬೇಕು. ರೈತ ಪರ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ ಎಂದರು. ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆಶಯದಂತೆ ಅವರ ಕನಸನ್ನು ನನಸುಗೊಳಿಸಲು ಯುವಜನರು ಮುಂದೆ ಬರಬೇಕೆಂದರು. ಸ್ವಚ್ಛ ಭಾರತ ಆಂದೋಲನವನ್ನು ಸಾಕಾರ ಗೊಳಿಸುವ ಮೂಲಕ ದೇಶವನ್ನು ಸ್ವಚ್ಛ ಭಾರತವನ್ನಾಗಿ ಮಾಡಬೇಕೆಂದರು. ತಮ್ಮ ಭಾಷಣದಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಸ್ಮರಿಸಿಕೊಂಡ ಅವರು, ಗಾಂಧಿ, ನೆಹರೂ, ಸರ್ಧಾರ .  ಪಟೇಲ್,ಗೋಪಾಲಕೃಷ್ಣ ಗೋಖಲೆ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ ಅಜಾದ್ ಇವರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಪಡೆಯಲು ಸಾಧ್ಯ ವಾಯಿತು ಎಂದರು. ಮುಖ್ಯ ಅತಿಥಿಗಳಾಗಿ ಜೆಎಂಎಫ್‌ಸಿ ಆಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎಚ್. ಕೋರಡ್ಡಿ, ಅಪರ ಸಿವಿಲ್ ನ್ಯಾಯಾಧೀಶ ಕೆ.ಶ್ರೀನಾಥ, ತಾಲೂಕು ಪಂಚಾಯ್ತಿ ಅಧ್ಯಕ್ಷೆ ಸುಲೋಚನಮ್ಮ, ನಗರಸಭೆ ಅಧ್ಯಕ್ಷೆ ಕಣ್ಣಿ ಉಮಾದೇವಿ, ಎಪಿಎಂಸಿ ಅಧ್ಯಕ್ಷ ತಳವಾರ ಸೋಮಶೇಖರ, ಫಿಕಾರ್ಡ ಬ್ಯಾಂಕ್ ಅಧ್ಯಕ್ಷ ಅಮಾಜಿ ಹೇಮಣ್ಣ, ಡಿವೈಎಸ್‌ಪಿ ಡಿ.ಡಿ. ಮಾಳಗಿ, ಹಂಪಿ ಡಿವೈಎಸ್‌ಪಿ ಲಾವಣ್ಯ, ತಹಶೀಲ್ದಾರ್ ಚಂದ್ರಕಾಂತ ಎಲ್.ಡಿ. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ವೀರಭದ್ರಯ್ಯ ಹಾಜರಿದ್ದರು. ಪೊಲೀಸ್ ಇಲಾಖೆ, ಎನ್.ಸಿ.ಸಿ., ಗೃಹರಕ್ಷಕದಳ, ಸ್ಕೌಟ್ಸ್, ಗೈಡ್ಸ್, ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಧ್ವಜಾ ರೋಹಣ, ಪಥ ಸಂಚಲನ ನಡೆಯಿತು. ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಕವಾಯುತು ಹಾಗೂ ದೇಶಭಕ್ತಿಯ ಕಾರ್ಯಕ್ರಮ ಜರುಗಿದವು. ಆರಂಭದಲ್ಲಿ ಸ್ಪೂರ್ತಿ ವೇದಿಕೆ ಹಾಗೂ ಡಿಗ್ರೂಪ್ ನೌಕರರ ಸಂಘ ಹಂಪಿಯಿಂದ ತಂದ ಜ್ಯೋತಿಯನ್ನು ಕ್ರೀಡಾಂಗದಲ್ಲಿ ಉಪ ವಿಭಾಗಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಬೆಳಗಿದರು. ಸ್ಪೂರ್ತಿ ವೇದಿಕೆಯ ಬಿ.ತಾಯಪ್ಪ ನಾಯಕ ಹಾಜರಿದ್ದರು.

Please follow and like us:
error