ಸದೃಢ ಭಾರತ ನಿರ್ಮಾಣಕ್ಕೆ ಉತ್ತಮ ಶಿಕ್ಷಣದ ಅವಶ್ಯಕತೆ ಇದೆ – ಡಾ|ಶ್ರೀನಿವಾಸ ಹ್ಯಾಟಿ

ಕೊಪ್ಪಳ , ೧೫- ಭವಿಷ್ಯದಲ್ಲಿ ಸಧೃಢ ಭಾರತ ನಿರ್ಮಾಣಕ್ಕೆ ಮಕ್ಕಳಲ್ಲಿ ರಾಷ್ಟ್ರ ಪ್ರೇಮ, ಆರೋಗ್ಯ ಹಾಗೂ ಉತ್ತಮ ಶಿಕ್ಷಣದ ಅವಶ್ಯಕತೆ ಇದೆ ಎಂದು ವೈದ್ಯ ಡಾ|| ಶ್ರೀನಿವಾಸ ಹ್ಯಾಟಿ ಹೇಳಿದರು.ಅವರು ಕೊಪ್ಪಳ ತಾಲೂಕಿನ ಗವಿಶ್ರೀ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸೇವಾ ಸಂಸ್ಥೆಯ ಬೇಂದ್ರೆ ಪಬ್ಲಿಕ್ ಸ್ಕೂಲ್‌ನಲ್ಲಿ ೬೭ ನೇ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.
ಭಾರತದೇಶ ಸ್ವಾತಂತ್ರ್ಯಗೊಳಿಸಲು ಮಹತ್ಮಾರ ತ್ಯಾಗ-ಬಲಿದಾನದ ಉದ್ದೇಶ ನಮ್ಮ ಮಕ್ಕಳ ಸಾಧನೆ ವಿಶ್ವ ಗಮನ ಸೆಳೆಯುವದಾಗಿದ್ದು, ಮಕ್ಕಳ ಸಾಧನೆ-ಶ್ರೇಯಸ್ಸು ದೇಶದ ಬೆಳವಣಿ

ಗೆ, ಉನ್ನತಿ ಅಡಗಿದೆ ಎಂದರು.

ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಶಿಕ್ಷಣ ಹಾಗೂ ಆರೋಗ್ಯದ ಕೊರತೆ ಇದ್ದು, ೩೭೧ (ಜೆ) ಕಲಂ ತಿದ್ದಪಡಿ ಬಂದಿದೆ. ಸುಧಾರಣೆಯಾಗಲಿದ್ದು, ಕರ್ನಾಟಕ ರಾಜ್ಯದ ನಮ್ಮ ಭಾಗದ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪತ್ರಕರ್ತ ಹುಸೇನಪಾಷಾ ಮಾತನಾಡಿ, ಶಾಲಾ ಶಿಕ್ಷಕರು ಮಕ್ಕಳಲ್ಲಿ ಸೃಜನ ಶೀಲತೆ ಹೆಚ್ಚಿಸಲು ಸಾಹಿತ್ಯ ಕಲೆಗೆ ಕವನ ಕಥೆ ಸೇರಿದಂತೆ ಇತರ ಪ್ರತಿಭೆಗೆ ಒತ್ತು ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಸ್ಥೆ ಅಧ್ಯಕ್ಷ ಸಂತೋಷ ಬಿ. ದೇಶಪಾಂಡೆ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯದರ್ಶಿ ಮಂಜುನಾಥ ಅಂಗಡಿ, ಉಪಾಧ್ಯಕ್ಷ ರಮೇಶ ತುಪ್ಪದ, ಮುಖ್ಯ ಶಿಕ್ಷಕ ಬಸವರಾಜ ಶಿರಗುಂಪಿಶೆಟ್ಟರ, ಶಿಕ್ಷಕ ಮೌಲಾಸಾಬ, ಸುರೇಶ ಇತರರು ಉಪಸ್ಥಿತರಿದ್ದರು,
ಸಹ ಶಿಕ್ಷಕ ರಾಘವೇಂದ್ರ ಎಲ್ಲರನ್ನು ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಿವುಕುಮಾರ ನಡೆಸಿಕೊಟ್ಟರು. ಶಾರದಾ ಕೊರಗಲ್ಲ ನಿರೂಪಿಸಿದರೆ, ರಮಜಾನ್ ಬಿ. ವಂದಿಸಿದರು.
ಶಾಲಾ ಮಕ್ಕಳಿಂದ ಭಾಷಣ, ಕಥೆ, ಕವನ ಹಾಗೂ ವೇಷ-ಭೂಷಣ ಸೇರಿದಂತೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Leave a Reply