fbpx

ವೃತ್ತಿ ಶಿಕ್ಷಣ ಪ್ರವೇಶ ೨೦೦೬ ರ ಕಾಯ್ದೆ ಅನುಷ್ಠಾನಕ್ಕೆ ಎಬಿವಿಪಿ ವಿರೋಧ : ಪ್ರತಿಭಟನೆ

ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೃತ್ತಿ ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರದೊಂದಿಗೆ ರಾಜ್ಯ ಸರ್ಕಾರವು ರಾಜ್ಯ ಸರ್ಕಾರವು ಜಾರಿಗೊಳಿಸಲು ನಿರ್ಧರಿಸಿರುವ ೨೦೦೬ ರ ಸಿ.ಇ.ಟಿ. ಕಾಯ್ದೆಯನ್ನು  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ವಿರೋಧಿಸುತ್ತದೆ.  ದುರ್ಬಲ ವರ್ಗಗಳಿಗೆ ಸಮಾಜಿಕ ನ್ಯಾಯವನ್ನು ಒದಗಿಸಲು ವಿಫಲವಾಗುವ ಮತ್ತು ಅವರ ಶೈಕ್ಷಣಿಕ ಹಕ್ಕನ್ನು ಮೊಟಕುಗೊಳಿಸುವ ಈ ಕಾಯ್ದೆಯಿಂದಾಗಿ ಪ್ರಸ್ತುತ ಸರ್ಕಾರಿ ಕೋಟಾದಲ್ಲಿದ್ದು ಇಂಜನಿಯರಿಂಗ್ ೪೫% ಮೆಡಿಕಲ್ ೪೦% ದಂತ ವೈದ್ಯಕೀಯದ ೩೫% ಸೀಟುಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಿದ್ದು ಯವುದೇ ಖಾಸಗಿ ಅನುದಾನರಹಿತ ಕಾಲೇಜಿನಲ್ಲಿ ಒಂದು ಸರಕಾರಿ ಕೋಟಾದ ಸಿಟುಗಳು ಇಲ್ಲದಂತಾಗಲಿದೆ ತನ್ನ ಪಾಲಿನ ಸಿಟುಗಳಿಗಾಗಿ ಕಾಮೆಡ್ – ಕೆ ನಡೆಸುವ ಪ್ರವೇಶ ಪರೀಕ್ಷೆಯ ಬಗ್ಗೆ ಈಗಾಗಲೆ ಹಲವಾರು ದೂರುಗಳಿದ್ದು ಅಂತಹದರಲ್ಲಿ ಸರಕಾರ ಉಳಿದ ಸಿಟುಗಳಿಗೂ ಪರಿಕ್ಷೆ ನಡೆಸಲು ಕಾಮೇಡ್ -ಕೆಗೆ  ಬಿಟ್ಟು ಕೊಟ್ಟಿರುವುದು ಖಂಡನಿಯ ಅಲ್ಲದೇ ಇದರಿಂದ ಖಾಸಗಿ ಸಂಸ್ಥೆಗಳಿಗೆ ಬೇಕಾ ಬಿಟ್ಟಿ ಶುಲ್ಕ ವಸಲಿ ಮಾಡಲು ಅನುಕುಲವಾಗುತ್ತದೆ. ಇದನ್ನು ತಡೆಯಲೆಂದೆ  ೨೦೦೬ ಖಾಯ್ದೆ ಅನುಷ್ಠಾನ ತರುತಿರುವುದಾಗಿ ಸರಕಾರ ಹೇಳುತ್ತಿದ್ದರು ಪರಿಣಾಮ ವ್ಯತಿರಿಕ್ತವಾಗಿಯೇ ಆಗುತ್ತದೆ. ಖಾಸಗಿ ವೈದ್ಯಕಿಯ ದಂತ ಇಂಜನಿಯರಿಂಗ್ ಯುನಾನಿ ಆಯುರ್ವೇದ, ಯೋಗ, ನ್ಯಾಚರೋಪತಿ ಕಾಲೆಜುಗಳಲ್ಲಿಯ ಸರಕಾರಿ ಸಿಟುಗಳಿಗೆ ಪ್ರವೇಶ ಶುಲ್ಕ ಕುರಿತಂತೆ ಸರಕಾರದ ಪೂರ್ಣ ನಿಯಂತ್ರಣ ತಪ್ಪಿ  ಖಾಸಗಿಯ ಆಡಳಿತ ಮಂಡಳಿಗಳಿಗೆ ಪರಮಾಧಿಕಾರ ಕೊಟ್ಟಂತಾಗುತ್ತದೆ ಇತರೆ ರಾಜ್ಯದ ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಕಾಮೇಡ್ -ಕೆ ಪ್ರವೇಶ ಬರಿಯುವುದರಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ಸ್ಪರ್ಧೆ ಹೆಚ್ಚಾಗಿ ಅವರು ಸಿಟು ವಂಚಿತರಾಗುತ್ತಾರೆ ಆಯಾ ಕಾಲೆಜಿನ ಮೂಲ ಸೌಕರ್ಯ ಇತ್ಯಾದಿ ಆಧಾರದ ಮೆಲೆ ಶುಲ್ಕವನ್ನು ಶುಲ್ಕ ನಿಗದಿ ಸಮಿತಿ ನಿರ್ಧರಿಸುವುದರಿಂದ ರಾಜ್ಯದಂತ ಏಕರೂಪ ಶುಲ್ಕ ಇಲ್ಲದಂತಾಗುತ್ತದೆ.  ಒಂದೊಂದು ಕಾಲೆಜುಗಳಿಗೆ ಒಂದೊಂದು ಶುಲ್ಕವನ್ನು ವಿದ್ಯಾರ್ಥಿಗಳು ಕೊಡಬೇಕಾಗುತ್ತದೆ ಸಹಜವಾಗಿಯೆ ಈ ಶುಲ್ಕ ದುಬಾರಿಯಾಗಲಿದ್ದು .  ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶುಲ್ಕ ಭರಿಸಲು ಅಸಾಧ್ಯವಾಗುತ್ತದೆ ಪಟ್ಟಣ ಪ್ರದೇಶದ ಖಾಸಗಿ ಕಾಲೆಜುಗಳಂತು.  ಇದನ್ನು ಉಪಯೋಗಿಸಿಕೊಂಡು ಶುಲ್ಕವನ್ನು ಸಿಕ್ಕಾಪಟ್ಟೆ ಎರಿಸುವ ಸಾಧ್ಯತೆ ಇದೆ. ಖಾಸಗಿ ಕಾಲೇಜುಗಳಿಗೆ ಸರ್ಕಾರಿ ಸಿಟುಗಳಿಗೂ ( ಆರಕ್ಷಿತ) ಸಮಿತಿ ನಿಗದಿ ಪಡಿಸುವ ಶುಲ್ಕವನ್ನು ಎಲ್ಲಾ ವಿದ್ಯಾರ್ಥಿಗಳು ನಿಡಬೇಕಾಗುತ್ತದೆ ಈ ಮೊದಲು ಇದು ಕಡಿಮೆ ಇರುತ್ತದೆ. ಖಾಯ್ದೆಯ ಮೂಲ ಉದ್ದೇಶದಲ್ಲಿ ಹೇಳಿದಂತೆ ಸಾಮನ್ಯ ಪ್ರವೇಶ ಪರೀಕ್ಷೆ ಮತ್ತು ಏಕಗವಾಕ್ಷಿ ಸಂದರ್ಶನ ಏಕ ರೂಪ ಶುಲ್ಕಗಳ ನೀತಿಗೆ ವಿರುದ್ದವಾಗಿ ಸರಕಾರ ವರ್ತಿಸುತ್ತಿದೆ. ಅಲ್ಲದೇ ವಿದ್ಯಾರ್ಥಿಗಳು ಒಂದಕ್ಕಿಂತ ಹೆಚ್ಚು ಸಿ ಇ ಟಿ ಪರೀಕ್ಷೆಗಳನ್ನು ಬರೆಯಬೇಕಾಗಿ ಒತ್ತಡಕ್ಕೆ ಒಳಗಾಗುತ್ತಾರೆ. ಪರದರ್ಶಕತೆ ಮತ್ತು ಪ್ರತಿಭೆ ರಕ್ಷೆಣೆಯ ಮೂಲ ಉದ್ದೇಶಗಳಿಗೆ ಕೊಡಲಿ ಪೆಟ್ಟನ್ನು ಹಕಿದಂತಾಗುತ್ತದೆ 
೨೧೦ ಇಂಜನಿಯರಿಂಗ್ ಕಾಲೇಜುಗಳಲ್ಲಿ ೨೧ ಮತ್ತು ೩೨ ವೈದ್ಯಕೀಯ ಕಾಲೆಜುಗಳಲ್ಲಿ ೧೦ ಕಾಲೇಜುಗಳಲ್ಲಿಯ ಸುಮಾರು ೫೦೦೦ ಸಿಟುಗಳಿಗೆ ಮಾತ್ರ ಕರ್ನಾಟಕ  ಪರಿಕ್ಷಾ ಪ್ರಾಧಿಕಾರ ಪ್ರವೇಶ ಪರಿಕ್ಷೆ ನಡೆಸಲಿದೆ. ಉಳಿದ ಸುಮಾರು ೭೫೦೦೦ ಸಿಟುಗಳಿಗೆ ಕಾಮೆಡ್- ಕೆ ಪ್ರವೇಶ ಪರೀಕ್ಷೆ ನಡೆಸುವುದರಿಂದ  ಕಳ್ಳನ ಕೈಲಿ ಕಿಲಿ ಕೊಟ್ಟಂತೆ ಆಗುತ್ತದೆ ಎಕೆಂದರೆ ಕಾಮೆಡ್ -ಕೆ ಈ ಹಿಂದೆ ನಡೆಸಿದ ಪ್ರವೇಶ ಅವ್ಯವಾಹರಗಳೆ ಇದಕ್ಕೆ ಸಾಕ್ಷಿ . 
ವಾಮ ಮಾರ್ಗಗಳ ಮೂಲಕ ಖಾಸಗಿ ಕಾಲೇಜುಗಳು ಲಕ್ಷಾಂತರ ರೂಪಾಯಿಗೆ ಸಿಟು ಮಾರಾಟ ಮಾಡಿಕೊಳ್ಳುತ್ತಿದ್ದವು ಆದರೆ ಸರಕಾರ ತರಲಿರುವ ಈ ಖಾಯ್ದೆಯಿಂದಾಗಿ ಕಾನೂನು ಬದ್ದವಾಗಿಯೆ ಹಣ ಕೊಳ್ಳೆ ಹೊಡೆಯಲು ಅನೂಕುಲವಾಗುತ್ತದೆ ಇನ್ನೂ ಅಕ್ರಮಗಳಿಗೆ ಕಡಿವಾಳ ಆಕುವದಂತು ಯಕ್ಷ ಪ್ರಶ್ನೆಯೇ ಸರಿ 
ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿರುವ ಸಾಮಾಜಿಕ ನ್ಯಾಯವನ್ನು ಕಿತ್ತುಕೊಳ್ಳುವ ವಿದ್ಯಾರ್ಥಿ ವಿರೋಧಿ  ಖಾಯ್ದೆಯನ್ನು ಎ ಬಿ ವಿ ಪಿ ಉಗ್ರವಾಗಿ ಖಂಡಿಸುತ್ತದೆ ಇದನ್ನು ಕೂಡಲೆ ಹಿಂಪಡೆದುಕೊಂಡು ವಿದ್ಯಾರ್ಥಿಗಳಿಗೆ ನ್ಯಾಯವನ್ನು ಒದಗಿಸಬೇಕೆಂದು ಎ ಬಿ ವಿ ಪಿ ಒತ್ತಾಯಿಸುತದೆ.     
ಸರ್ಕಾರ ತರಲು ಉದ್ದೇಶಿಸಿರುವ ಈ ಕಾಯ್ದೆಯಿಂದಾಗುವ ಅನಾನೂಕುಲಗಳ ವಿವರ 
೧. ರಾಜ್ಯಾದ ಯಾವುದೇ ಖಾಸಗಿ ಅನುದಾನ ರಹಿತ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ಯಾವುದೇ ಸಿಟುಗಳು ಇರುವುದಿಲ್ಲ 
೨. ಖಾಸಗಿ ಕಾಲೇಜುಗಳಿಗೆ ಪ್ರವೇಶ ಪಡೆಯಲು ಎಲ್ಲಾ ವಿದ್ಯಾರ್ಥಿಗಳು ಕಾಮೆಡ್-ಕೆ ನಡೆಸುವ ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ. 
೩. ಸರ್ಕಾರಿ ಮತ್ತು ಅನುಧಾನಿತ ಕಾಲೇಜುಗಳ ಅಂದರೆ ೨೧ ಇಂಜನಿಯರಿಂಗ್ ಮತ್ತು ೧೦ ಮೆಡಿಕಲ್ ಕಾಲೆಜುಗಳಿಗೆ ಮಾತ್ರ ಸರ್ಕಾರದ ಸಿ ಇ ಟಿ ಪರೀಕ್ಷೆ ಅನ್ವಯವಾಗುತ್ತದೆ  
೪. ಸಿ ಇ ಟಿಯಲ್ಲಿ ಮೊದಲ ರ‍್ಯಾಂಕ್ ಪಡೇದ ವಿದ್ಯಾರ್ಥಿಯೂ ಪ್ರತಿಷ್ಠಿತ ಕಾಲೇಜುಗಳಲಿ ಸಿಟು ಪಡೆಯಲು ಅನಿವಾರ್ಯವಾಗಿ ಲಕ್ಷಾಂತರ ರೂ ಶುಲ್ಕ ಬರಿಸಬೇಕಾಗುತ್ತದೆ. 
೫. ಯಾವುದೇ ಅನುಧಾನ ರಹಿತ ಕಾಲೇಜುಗಳೂ ಶುಲ್ಕ ನೀತಿ ಮತ್ತು ಸಿಟು ಹಂಚಿಕೆಯಲ್ಲಿ  ಸರ್ಕಾರದ ನಿಯಂತ್ರಕ್ಕೆ ಒಳಪಡುವುದಿಲ್ಲ 
೬. ಸೀಟ್ ಬ್ಲಾಕಿಂಗ್ ದಂದೆಯಲ್ಲಿ ತೋಡಗಿರುವ ಕಾಮೆಡ್-ಕೆ ಪರೀಕ್ಷೆಗೆ ನಡೆಸುವ ಅಧಿಕಾರ ನಿಡಲಾಗಿದ್ದು ಇದರಿಂದ ಪರೀಕ್ಷಾ ವ್ಯವಸ್ಥೆಯೆ ಪ್ರಶ್ನಾರ್ಹವಾಗಿದೆ.  
೭. ಈ ಹಿಂದೆ ಸರ್ಕಾರದ ಕೋಟಾದಲ್ಲಿದ್ದ ೪೫% ಇಂಜನಿಯರಿಂಗ್ ೪೦% ಮೆಡಿಕಲ್ ೩೫% ದಂತವೈದ್ಯಕೀಯ ಕಾಲೆಜುಗಳ ಸೀಟುಗಳು ಖಾಸಗಿಯವರಿಗೆ ಹಸ್ತಾಂತರವಾಗುತ್ತದೆ.  
ಆಗ್ರಹಿಸುವುದೆನೆಂದರೆ ಕೂಡಲೆ  ಈ ವಿದ್ಯಾರ್ಥಿ ವಿರೋಧಿ ನೀತಿಯಿಂದ ಹಿಂದೆ ಸರಿಯಬೇಕು ಎಂದು ಎ ಬಿ ವಿ ಪಿ ಆಗ್ರಹಿಸುತ್ತದೆ. 
ಈ ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಸಂಚಾಲಕ ಮೌನೇಶ ಕಮ್ಮಾರ, ನಗರ ಕಾರ್ಯದರ್ಶಿ ಸಂಕೇತ ಪಾಟೀಲ, ಮಂಜುನಾಥ ಬದಿ, ಆನಂದ ಆಶ್ರಿತ್, ವಹಿಸಿದ್ದರು ಹಾಗೂ ದೀಪಕ್ ಕುಮಾರ ನೂರಹಮ್ಮದ, ಹನುಮೇಶ ಮರಡಿ, ನಟರಾಜ ಪತ್ತಾರ ಗಿರಿಶ ದೇಸಾಯಿ, ಕಾವ್ಯ, ಕವೀತಾ ಜೀವಿತಾ, ಶಶಿಕಲಾ ಮತ್ತಿತರರು ಪಾಲ್ಗೊಂಡಿದ್ದರು. 
Please follow and like us:
error

Leave a Reply

error: Content is protected !!