ಶಿಶಿಕ್ಷು ತರಬೇತಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.

ಕೊಪ್ಪಳ, ಅ.೧೫ (ಕರ್ನಾಟಕ
ವಾರ್ತೆ) ಕೊಪ್ಪಳ ವಿಭಾಗದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ
ತಾಂತ್ರಿಕ ವೃತ್ತಿಗಳಲ್ಲಿ ಶಿಶಿಕ್ಷು ತರಬೇತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ
ಆಹ್ವಾನಿಸಲಾಗಿದೆ.
     ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕೊಪ್ಪಳ
ವಿಭಾಗದ ಘಟಕಗಳಾದ ಕೊಪ್ಪಳ, ಗಂಗಾವತಿ, ಯಲಬುರ್ಗಾ ಕುಷ್ಟಗಿ, ಕುಕನೂರು ಘಟಕ, ವಿಭಾಗೀಯ
ಕಾರ್ಯಾಗಾರ ಹಾಗೂ ವಿಭಾಗೀಯ ಕಛೇರಿಗಳಲ್ಲಿರುವ ತಾಂತ್ರಿಕ ವೃತ್ತಿಗಳಲ್ಲಿ ತರಬೇತಿ ನೀಡಲು
ಅರ್ಜಿ ಆಹ್ವಾನಿಸಲಾಗಿದ್ದು, ಆಯಾ ಘಟಕಗಳಿಗೆ ಆಯಾ ಘಟಕದ ವ್ಯಾಪ್ತಿಯ ಅಭ್ಯರ್ಥಿಗಳನ್ನು
ಮಾತ್ರ ಆಯ್ಕೆ ಮಾಡಲಾಗುವುದು. ಅ.೨೮ ರಂದು ಬೆಳಿಗ್ಗೆ ೧೧ ಗಂಟೆಗೆ ವಿಭಾಗೀಯ
ನಿಯಂತ್ರಣಾಧಿಕಾರಿಗಳು, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ವಿಭಾಗೀಯ ಕಛೇರಿ,
ಕೊಪ್ಪಳದಲ್ಲಿ ಸಂದರ್ಶನ ಏರ್ಪಡಿಸಲಾಗಿದ್ದು, ಆಯಾ ಘಟಕಗಳ ವ್ಯಾಪ್ತಿಯಲ್ಲಿ ಡೀಸೆಲ್
ಮೆಕ್ಯಾನಿಕ್, ಮೋಟಾರ್ ಮೆಕ್ಯಾನಿಕ್, ಶೀಟ್ ಮೆಟಲ್ ವರ್ಕರ್, ವೆಲ್ಡರ್, ಆಟೋ
ಎಲೆಕ್ಟ್ರಿಷಿಯನ್ ವೃತ್ತಿಗಳಲ್ಲಿ ತಾಂತ್ರಿಕ ಶಿಶಿಕ್ಷು ತರಬೇತಿ ಪಡೆಯಲಿಚ್ಛಿಸುವ
ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಮತ್ತು ಐ.ಟಿ.ಐ ಉತ್ತೀರ್ಣವಾದ ಮೂಲ ಅಂಕಪಟ್ಟಿ, ಜಾತಿ
ಹಾಗೂ ಆದಾಯ ಪ್ರಮಾಣ ಪತ್ರ, ಜಿಲ್ಲಾ ಶಸ್ತ್ರಚಿಕಿತ್ಸಕರಿಂದ ಪಡೆದ ಶಾರಿರೀಕ ಸುಸ್ಥಿತಿ
ಪ್ರಮಾಣ ಪತ್ರದೊಂದಿಗೆ ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ ಎಂದು ಈಶಾನ್ಯ
ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಸೂಚನೆ.
ಕೊಪ್ಪಳ,
ಅ.೧೫ (ಕರ್ನಾಟಕ ವಾರ್ತೆ) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಇವರಿಂದ
ಕೊಪ್ಪಳ ತಾಲೂಕಾ ಮಟ್ಟದ ರಾಜೀವ್‌ಗಾಂಧಿ ಖೇಲ್ ಅಭಿಯಾನದ (ಆರ್.ಜಿ.ಕೆ.ಎ) ಗ್ರಾಮೀಣ
ಕ್ರೀಡಾ ಕೂಟವನ್ನು ಅ.೧೬ ರಂದು ಮತ್ತು ದಸರಾ ಕ್ರೀಡಾಕೂಟವನ್ನು ಅ.೧೭ ರಂದು ಬೆಳಿಗ್ಗೆ
೦೯.೩೦ ಗಂಟೆಗೆ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
        
ಆರ್.ಜಿ.ಕೆ.ಎ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾ ಪಟುಗಳು ೨೦೧೫ರ
ಡಿಸೆಂಬರ್.೩೧ ಕ್ಕೆ ೧೬ ವರ್ಷ ಮೀರಿರಬಾರದು. ಸ್ಪರ್ಧೆಗೆ ಬರುವಾಗ ತಮ್ಮ ವಯಸ್ಸಿನ ಬಗ್ಗೆ
ಶಾಲೆಯ ಮುಖ್ಯೋಪಾಧ್ಯಯರಿಂದ ಜನ್ಮದಿನಾಂಕ ದೃಢೀಕರಣ ಪತ್ರವನ್ನು ತರಬೇಕು. ವಿಜೇತರಾದಂತಹ
ಕ್ರೀಡಾಪಟುಗಳು ನಂತರ ತಮ್ಮ ಬ್ಯಾಂಕ್ ಖಾತೆಯ ಪಾಸ್‌ಬುಕ್‌ನ ಝರಾಕ್ಸ್ ಪ್ರತಿಗಳನ್ನು
ಸಲ್ಲಿಸತಕ್ಕದ್ದು, ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳಿಗೆ ಮಾತ್ರ ಆರ್.ಜಿ.ಕೆ.ಎ
ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿದೆ. ಈ ತಾಲೂಕಾ ಮಟ್ಟದ ಕ್ರೀಡಾ ಕೂಟದಲ್ಲಿ
ಭಾಗವಹಿಸಿ ಅಥ್ಲೆಟಿಕ್ಸ್ ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ
ಪಡೆದವರು ಮಾತ್ರ ಜಿಲ್ಲಾ ಮಟ್ಟದ ಸ್ಫರ್ಧೆಯಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ.
ಆರ್.ಜಿ.ಕೆ.ಎ
ಗ್ರಾಮೀಣ ಕ್ರೀಡಾಕೂಟದ ಸ್ಪರ್ಧೆಗಳ ವಿವರ ಇಂತಿದೆ. ಅಥ್ಲೆಟಿಕ್ಸ್ : ೧೦೦ಮೀ, ೪೦೦ಮೀ,
೮೦೦ಮೀ, ೧೫೦೦ಮೀ, ೩೦೦೦ಮೀ. ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಡಿಸ್ಕಸ್
ಥ್ರೋ, ೪*೧೦೦ಮೀ. ರಿಲೇ, ೪*೪೦೦ಮೀ ರಿಲೇ. ಗುಂಪು ಸ್ಪರ್ಧೆ : ವ್ಹಾಲಿಬಾಲ್, ಕಬ್ಬಡ್ಡಿ,
ಖೋಖೋ, ಹ್ಯಾಂಡ್‌ಬಾಲ್.
ದಸರಾ ಕ್ರೀಡಾಕೂಟದ ಸ್ಪರ್ಧೆಗಳ ವಿವರ ಇಂತಿದೆ. ಪುರುಷರ
ವಿಭಾಗ, ಅಥ್ಲೆಟಿಕ್ಸ್ : ೧೦೦ಮೀ, ೨೦೦ಮೀ, ೪೦೦ಮೀ, ೮೦೦ಮೀ, ೧೫೦೦ಮೀ, ೫೦೦೦ಮೀ. ಓಟ,
ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವೆಲಿನ್ ಥ್ರೋ,
ಡಿಸ್ಕಸ್ ಥ್ರೋ, ೧೧೦ಮೀ.ಹರ್ಡಲ್ಸ್, ೪*೧೦೦ಮೀ. ರಿಲೇ, ೪*೪೦೦ಮೀ ರಿಲೇ. ಗುಂಪು :
ವ್ಹಾಲಿಬಾಲ್, ಕಬ್ಬಡ್ಡಿ, ಖೋಖೋ, ಬಾಲ್ ಬ್ಯಾಡ್ಮಿಂಟನ್, ಟೇಬಲ್ ಟಿನ್ನಿಸ್, ಶಟಲ್
ಬ್ಯಾಡ್ಮಿಂಟನ್.
        ಮಹಿಳೆಯರ ವಿಭಾಗ : ಅಥ್ಲೆಟಿಕ್ಸ್ : ೧೦೦ಮೀ, ೨೦೦ಮೀ,
೪೦೦ಮೀ, ೮೦೦ಮೀ, ೧೫೦೦ಮೀ, ೩೦೦೦ಮೀ. ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ,
ಟ್ರಿಪಲ್ ಜಂಪ್, ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ, ೧೦೦ಮೀ.ಹರ್ಡಲ್ಸ್, ೪*೧೦೦ಮೀ.
ರಿಲೇ, ೪*೪೦೦ಮೀ ರಿಲೇ. ಗುಂಪು : ವ್ಹಾಲಿಬಾಲ್, ಕಬ್ಬಡ್ಡಿ, ಖೋಖೋ, ಟೇಬಲ್ ಟೆನ್ನಿಸ್,
ಬಾಲ್‌ಬ್ಯಾಡ್ಮಿಂಟನ್, 
      ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ :
೯೯೮೦೮೫೨೭೩೫ ಅಥವಾ ೭೮೯೯೪೩೨೨೨೭
Please follow and like us:
error