ಇಂದು ಪಿ.ಬಾಲಸುಬ್ಬ ಶೆಟ್ಟಿ ರೋಟರಿ ಡಯಾಲಿಸಿಸ್ ಸೆಂಟರ್ ಉದ್ಘಾಟನೆ.

ಹೊಸಪೇಟೆ- ನಗರದ ಸ್ಟೇಷನ್ ರಸ್ತೆಯಲ್ಲಿ ಹೊಸಪೇಟೆ ರೋಟರಿ ಟ್ರಸ್ಟ್‌ನಿಂದ ಆರಂಭಗೊಳ್ಳಲಿರುವ ಪಿ.ಬಾಲಸುಬ್ಬ ಶೆಟ್ಟಿ ರೋಟರಿ ಡಯಾಲಿಸಿಸ್ ಸೆಂಟರ್‌ನ ಉದ್ಘಾಟನೆಯನ್ನು ನಾಳೆ ದಿ.೩೦ರ ಸಂಜೆ ೫.೩೦ಕ್ಕೆ ಕೊಪ್ಪಳದ ಗವಿಮಠದ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಮಹಾಸ್ವಾಮಿಗಳು ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ.
ವಿಜಯನಗರ ಕ್ಷೇತ್ರದ ಶಾಸಕ ಬಿ.ಎಸ್.ಆನಂದ್ ಸಿಂಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಪಿ.ಬಾಲಸುಬ್ಬ ಶೆಟ್ಟಿ ಮತ್ತು ಮಕ್ಕಳು, ರೋಟರಿ ಗವರ್ನರ್ ಗೌತಮ್ ಜಾಗೀರ್‌ದಾರ್, ಜಿ.ಎಸ್. ಮನ್ಸೂರ್, ಸುರೇಂದ್ರ ರೆಡ್ಡಿ, ಸ್ಪರ್ಷ ನೆಪ್ರೋ ಕೇರಿನ ಸೌರವ್ ಪಾಂಡಾ ಮಾಜಿ ಅಧ್ಯಕ್ಷ ವಿಜಯ ಸಿಂಧಗಿ, ಗುರುನಾಥ್, ಡಯಾಲಿಸಿಸ್ ಸೆಂಟರ್‌ನ ಯೋಜನಾ ಸಂಘಟಕ ಪಿ.ಜಿ.ಚಂದ್ರಶೇಖರ್, ಯೋಜನಾಧ್ಯಕ್ಷ ವೈ.ಶ್ರೀನಿವಾಸ ರಾವ್,  ಅಧ್ಯಕ್ಷ ಸೈಯದ್ ಮೊಹ್ಮದ್, ಹಾಗೂ ಕಾರ್ಯದರ್ಶಿ ಡಾ.ಮುನಿವಾಸುದೇವ ರೆಡ್ಡಿ ಉಪಸ್ಥಿತರಿರುವರು.
   

Please follow and like us:
error